ಬುಕ್‌ಶಾಪ್‌ ಆಗಿ ಆರಂಭವಾಗಿದ್ದ ಕಂಪನಿ ಈಗ ವಿದೇಶಿಗರ ಪಾಲು, ಫ್ಲಿಪ್‌ಕಾರ್ಟ್‌ನಿಂದ ಹೊರಬಂದ ಬಿನ್ನಿ ಬನ್ಸಾಲ್‌!

ದೆಹಲಿಯ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದುತ್ತಿದ್ದಾಗ ಫ್ಲಿಪ್‌ಕಾರ್ಟ್ ಆರಂಭಿಸುವ ಆಲೋಚನೆ ಸಚಿನ್ ಬನ್ಸಾಲ್ ಅವರ ತಲೆಯಲ್ಲಿ ಬಂದಿತು. ಆ ಬಳಿಕ 2007 ರಲ್ಲಿ ಅವರು ತಮ್ಮ ಸ್ನೇಹಿತ ಬಿನ್ನಿ ಬನ್ಸಾಲ್ ಅವರೊಂದಿಗೆ 2 ಬಿಎಚ್‌ಕೆ ಫ್ಲ್ಯಾಟ್‌ನಲ್ಲಿ ಈ ಕಂಪನಿಯನ್ನು ಆರಂಭಿಸಿದ್ದರು.

end of an era Flipkart co founder Binny Bansal exits board san

ನವದೆಹಲಿ (ಜ.27): ಇಬ್ಬರು ಆತ್ಮೀಯ ಸ್ನೇಹಿತರಿಂದ ಎರಡು ಬೆಡ್‌ರೂಮ್‌ ಫ್ಲ್ಯಾಟ್‌ನಲ್ಲಿ ಆರಂಭವಾಗಿದ್ದು ಹೆಸರಾಂತ ಇ-ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌. ಇಂದು ಫ್ಲಿಪ್‌ಕಾರ್ಟ್‌ ಹೆಸರು ಹೇಳದೇ  ಇ-ಕಾಮರ್ಸ್‌ ವಲಯದ ಚರ್ಚೆ ಮುಗಿಯೋದೇ ಇಲ್ಲ. ಪುಟ್ಟ ಕಂಪನಿಯಾಗಿ ಆರಂಭವಾಗಿದ್ದ ಫ್ಲಿಪ್‌ಕಾರ್ಟ್‌, ಆ ಬಳಿಕ ಬಿಲಿಯನ್‌ ಡಾಲರ್‌ ಮೌಲ್ಯದ ಸಂಸ್ಥೆಯಾಗಿದ್ದ ಕಥೆ ಬಹಳ ಆಸಕ್ತಿದಾಯಕ. ಇದರ ನಡುವೆ ಫ್ಲಿಪ್‌ಕಾರ್ಟ್‌ ಸಂಬಂಧಿಸಿದ ಇನ್ನೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ ಅವರು ಕಂಪನಿಯನ್ನು ತೊರೆದಿದ್ದಾರೆ. ಕಂಪನಿಯಲ್ಲಿನ ತಮ್ಮ ಸ್ಥಾನಕ್ಕೆ ಬಿನ್ನಿ ಬನ್ಸಾಲ್‌ ತಮ್ಮ ರಾಜೀನಾಮೆ ಪತ್ರದಲ್ಲಿ,  ಇ-ಕಾಮರ್ಸ್ ಕಂಪನಿಯೊಂದಿಗೆ ತಮ್ಮ 16 ವರ್ಷಗಳ ಪ್ರಯಾಣವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ.

ಫ್ಲಿಫ್‌ಕಾರ್ಟ್‌ಅನ್ನು 2 ಬಿಎಚ್‌ಕೆ ರೂಮ್‌ನಲ್ಲಿ ಆರಂಭಿಸಿ ಅದನ್ನು ಬೃಹತ್‌ ಕಂಪನಿಯಾಗಿಸಿದ್ದರ ಹಿಂದೆ ಬಿನ್ನಿ ಬನ್ಸಾಲ್‌ ದೊಡ್ಡ ಕೊಡುಗೆ ನೀಡಿದ್ದಾರೆ. ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ ಒಟ್ಟಾಗಿ 2007 ರಲ್ಲಿ ಫ್ಲಿಫ್‌ಕಾರ್ಟ್‌ ಆರಂಭಿಸಿದ್ದರು. ಪುಟ್ಟ ಕೋಣೆಯಲ್ಲಿ ಆರಂಭವಾದ ಈ ಕಂಪನಿ 2018ರ ವೇಳೆ 20.8 ಬಿಲಿಯನ್‌ ಡಾಲರ್‌ ಮೌಲ್ಯದ ಕಂಪನಿಯಾಗಿ ಬೆಳೆದಿತ್ತು. ಆದರೆ, ಈಗ ಕಂಪನಿಯನ್ನು ತಾವು ತೊರೆದಿದ್ದಾಗಿ ಬಿನ್ನಿ ತಿಳಿಸಿದ್ದಾರೆ. ಬಿನ್ನಿ ಬನ್ಸಾಲ್ ಅವರು ಇ-ಕಾಮರ್ಸ್ ವಲಯದಲ್ಲಿ ತಮ್ಮ ಹೊಸ ಉದ್ಯಮವನ್ನು ಆರಂಭಿಸಿದ್ದು, ಅದನ್ನು ಉಲ್ಲೇಖಿಸಿ ತಮ್ಮ ರಾಜೀನಾಮೆಯನ್ನು ಮಂಡಳಿಗೆ ತಿಳಿಸಿದ್ದಾರೆ.

ವರದಿಯ ಪ್ರಕಾರ, ಬಿನ್ನಿ ಬನ್ಸಾಲ್ ಓಪ್‌ಡೋರ್‌ (OppDoor) ಹೆಸರಿನ ಹೊಸ ಇ-ಕಾಮರ್ಸ್ ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಿದ್ದಾರೆ. ಕಂಪನಿಯ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಇದು ಸಂಪೂರ್ಣ ಅಮೇಜಾನ್‌ ಸೇವೆಗಳನ್ನು ಒದಗಿಸುತ್ತದೆ, ಇದರ ಗುರಿ ಜಾಗತಿಕವಾಗಿ ಅನೇಕ ವಲಯಗಳಲ್ಲಿ ಖಾಸಗಿ ಲೇಬಲ್ ಬ್ರ್ಯಾಂಡ್‌ಗಳನ್ನು ವಿಸ್ತರಿಸುವುದು. ಈ ಕಂಪನಿ ಆರಂಭದಲ್ಲಿ ಅಮೆರಿಕ, ಕೆನಡಾ, ಮೆಕ್ಸಿಕೋ, ಯುಕೆ, ಜರ್ಮನಿ, ಸಿಂಗಾಪುರ್, ಜಪಾನ್ ಮತ್ತು ಆಸ್ಟ್ರೇಲಿಯಾದ ಇ-ಕಾಮರ್ಸ್ ಕಂಪನಿಗಳ ಮೇಲೆ ಕೇಂದ್ರೀಕರಿಸುತ್ತದೆ. ಕಂಪನಿ ಈಗ ಬಲವಾದ ಕೈಗಳಲ್ಲಿದೆ. ಆ ನಂಬಿಕೆ ಬಂದಿರುವ ಕಾರಣಕ್ಕೆ ಕಂಪನಿಯನ್ನು ತೊರೆಯಲು ನಿರ್ಧಾರ ಮಾಡಿದ್ದೇನೆ ಎಂದು ಬಿನ್ನಿ ಬನ್ಸಾಲ್‌ ತಿಳಿಸಿದ್ದಾರೆ ಎನ್ನಲಾಗಿದೆ.

ಫ್ಲಿಫ್‌ಕಾರ್ಟ್‌ ಆರಂಭದ ಕಥೆ: ದೆಹಲಿಯ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಓದುತ್ತಿರುವಾಗ ಸಚಿನ್ ಬನ್ಸಾಲ್ ಅವರ ಮನಸ್ಸಿನಲ್ಲಿ ಈ ಆಲೋಚನೆ ಬಂದಿತು ಮತ್ತು ಅದನ್ನು ಅವರು ತಮ್ಮ ಸ್ನೇಹಿತ ಬಿನ್ನಿ ಬನ್ಸಾಲ್ ಅವರೊಂದಿಗೆ ಹಂಚಿಕೊಂಡಿದ್ದರು. ಹೊಸದೇನನ್ನಾದರೂ ಮಾಡಬೇಕು ಎನ್ನುವ ತುಡಿತದಲ್ಲಿ ಫ್ಲಿಪ್‌ಕಾರ್ಟ್‌ ಆರಂಭವಾಗಿತ್ತು.  ಬಿನ್ನಿ ಆ ಸಮಯದಲ್ಲಿ ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿದ್ದರು, ಆದರೆ 2007 ರಲ್ಲಿ ಇಬ್ಬರೂ ಒಟ್ಟಿಗೆ ಆನ್‌ಲೈನ್ ಬುಕ್ ಶಾಪ್ ಆಗಿ ಫ್ಲಿಪ್‌ಕಾರ್ಟ್ಅನ್ನು ತಮ್ಮ ಫ್ಲಾಟ್‌ನಿಂದ ಪ್ರಾರಂಭಿಸಿದರು. ಆ ಬಳಿಕ ಇದೇ ಕಂಪನಿಯನ್ನು ಅಮೆರಿಕದಲ್ಲಿರುವ ಅಮೇಜಾನ್‌ ರೀತಿ ಬದಲಾವಣೆ ಮಾಡುವ ಯೋಚನೆ ಬಂದಿತು. ಆ ಸಮಯದಲ್ಲಿ ಭಾರತದಲ್ಲಿ ಹೆಚ್ಚಿನ ಈ ಕಾಮರ್ಸ್‌ ತಾಣಗಳಿರಲಿಲ್ಲ. ಈ ಅವಕಾಶವನ್ನು ಗ್ರಹಿಸಿದ ಬಿನ್ನಿ, ರಿಸ್ಕ್‌ ತೆಗೆದುಕೊಂಡು ಆನ್‌ಲೈನ್‌ ರಿಟೇಲ್‌ ವೆಬ್‌ಸೈಟ್‌ ಆಗಿ ಫ್ಲಿಫ್‌ಕಾರ್ಟ್‌ಅನ್ನು ಬದಲಾಯಿಸಿದರು.

ಆರಂಭದಲ್ಲಿ ಪುಸ್ತಕಗಳನ್ನು ಮಾತ್ರವೇ ಮಾರುತ್ತಿದ್ದ ಫ್ಲಿಫ್‌ಕಾರ್ಟ್‌ ನಂತರ, ಮ್ಯೂಸಿಕ್‌, ಫಿಲ್ಮ್‌ ಹಾಗೂ ಎಲೆಕ್ಟ್ರಾನಿಕ್‌ ಗೂಡ್ಸ್‌ಗಳ ಮಾರಾಟ ಆರಂಭಿಸಿತು. ಭಾರತದಲ್ಲಿ ವ್ಯಾಪಾರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಬಳಿಕ, 2011ರಲ್ಲಿ ಸಿಂಗಾಪುರಕ್ಕೆ ವ್ಯಾಪ್ತಿ ವಿಸ್ತರಣೆ ಮಾಡಿತು. ಇದರಿಂದ ವಿದೇಶಿ ಹೂಡಿಕೆದಾರರು ಕಂಪನಿ ಮೇಲೆ ಹಣ ಹೂಡಿದರು. ಕಂಪನಿಗೆ ಮೊದಲ 9 ವರ್ಷಗಳ ಕಾಲ ಸಚಿನ್‌ ಬನ್ಸಾಲ್‌ ಸಿಇಒ ಆಗಿದ್ದರೆ, 2016ರಲ್ಲಿ ಬಿನ್ನಿ ಈ ಸ್ಥಾನವನ್ನು ವಹಿಸಿಕೊಂಡರು. ಸಚಿನ್‌ ಬನ್ಸಾಲ್‌ ಕಂಪನಿಯ ವ್ಯವಸ್ಥಾಪಕ ಚೇರ್ಮನ್‌ ಆದರು. ಮೊಟ್ಟಮೊದಲ ಬಾರಿಗೆ ಕ್ಯಾಶ್‌ ಆನ್‌ ಡೆಲಿವರಿ ಆರಂಭಿಸಿದ ಫ್ಲಿಫ್‌ಕಾರ್ಟ್‌ ಅದರಿಂದ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿತು. ಅದರೊಂದಿಗೆ ಇಎಂಐ, ಗ್ರಾಹಕರಿಗೆ ಎಕ್ಸ್‌ಚೇಂಜ್‌ ಆಫರ್‌ ನೀಡುವ ಮೂಲಕ ಪ್ರಖ್ಯಾತಿ ಪಡೆದುಕೊಂಡಿತ್ತು.

 

ಪೇಟಿಎಂ, ಮೀಶೋ ಆಯ್ತು.. ಈಗ ಫ್ಲಿಪ್‌ಕಾರ್ಟ್‌ನಿಂದ ಉದ್ಯೋಗ ಕಡಿತ: ಸಾವಿರಾರು ಉದ್ಯೋಗಿಗಳಿಗೆ ಗೇಟ್‌ಪಾಸ್!

2018ರಲ್ಲಿ ವಾಲ್‌ಮಾರ್ಟ್‌ ಖರೀದಿ: ಅಮೆರಿಕದಲ್ಲಿ ಅಮೆಜಾನ್‌ಗೆ ದೊಡ್ಡ ಮಟ್ಟದ ಪ್ರತಿಸ್ಪರ್ಧಿಯಾಗಿರುವ ವಾಲ್‌ಮಾರ್ಟ್‌ ಭಾರತದಲ್ಲಿ ತನ್ನ ವ್ಯಾಪಾರ ಆರಂಭಿಸುವ ಬಗ್ಗೆ ಯೋಚನೆ ಮಾಡುತ್ತಲೇ ಇತ್ತು. ಭಾರತ ದೊಡ್ಡ ಗ್ರಾಹಕ ಮಾರುಕಟ್ಟೆ ಎನ್ನುವುದನ್ನು ಅರಿತಿದ್ದ ವಾಲ್‌ಮಾರ್ಟ್‌ ತನ್ನದೇ ಹೆಸರಿನಲ್ಲಿ ಭಾರತದಲ್ಲಿ ಕಂಪನಿ ಆರಂಭಿಸುವ ಬಗ್ಗೆ ಯೋಚನೆ ಮಾಡಿತ್ತು. ಆದರೆ, ಭಾರತದ ವ್ಯಾಪಾರ ವಹಿವಾಟಿನ ಆಳ ಅಗಲ ಗೊತ್ತಿಲ್ಲದೆ ಇಳಿಯುವುದು ಸೂಕ್ತವಲ್ಲ ಎಂದು ತೀರ್ಮಾನ ಮಾಡಿದ ವಾಲ್‌ಮಾರ್ಟ್‌, 2018ರಲ್ಲಿ ಫ್ಲಿಪ್‌ಕಾರ್ಟ್‌ ಕಂಪನಿಯನ್ನು 16 ಬಿಲಿಯನ್‌ ಯುಎಸ್‌ ಡಾಲರ್‌ಗೆ ಖರೀದಿ ಮಾಡಿತು. ಇದು ವಿಶ್ವದ ಅತಿದೊಡ್ಡ ಇ-ಕಾಮರ್ಸ್‌ ಸ್ವಾಧೀನ ಪ್ರಕ್ರಿಯೆ ಎನಿಸಿತ್ತು. ಕಂಪನಿಯಲ್ಲಿದ್ದ ತಮ್ಮ ಸಣ್ಣ ಪ್ರಮಾಣದ ಷೇರನ್ನು 1 ಬಿಲಿಯನ್‌ ಡಾಲರ್‌ಗೆ ಸಚಿನ್‌ ಬನ್ಸಾಲ್‌ ಮಾರಾಟ ಮಾಡಿದರು.ವಾಲ್‌ಮಾರ್ಟ್‌ ಸ್ವಾಧೀನದ ಬಳಿಕ ಬಿನ್ನಿ ಬನ್ಸಾಲ್‌ ಸಿಇಒ ಸ್ಥಾನದಿಂದ ಇಳಿದಿದ್ದರು. ಈಗ ನಿರ್ದೇಶಕರ ಮಂಡಳಿಯಿಂದಲೂ ಅವರು ನಿರ್ಗಮಿಸಿದ್ದಾರೆ.

OppDoor: ಫ್ಲಿಪ್ ಕಾರ್ಟ್ ಸ್ಥಾಪಕ ಬಿನ್ನಿ ಬನ್ಸಾಲ್ ಇ-ಕಾಮರ್ಸ್ ಕ್ಷೇತ್ರಕ್ಕೆ ಮರು ಎಂಟ್ರಿ: ಗರಿಗೆದರಿದ ನಿರೀಕ್ಷೆ!

Latest Videos
Follow Us:
Download App:
  • android
  • ios