ಮುಂಬೈ (ಏ. 01):  ಕೊರೋನಾದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಬಿದ್ದಿರುವ ಹೊಡೆತವನ್ನು ಅಲ್ಪ ಮಟ್ಟಿನಲ್ಲಿ ಸರಿದೂಗಿಸಲು, ಮಹಾರಾಷ್ಟ್ರ ಸರ್ಕಾರ ಸರ್ಕಾರಿ ನೌಕರರ ವೇತನ ಕಡಿತಕ್ಕೆ ನಿರ್ಧರಿಸಿದೆ.

ಈ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಲಾಗಿದ್ದು, ಸಿಎಂ ಸೇರಿ ಶಾಸಕರಿಗೆ ಶೇ.60 ರಷ್ಟು, 1 ಮತ್ತು 2ನೇ ಗ್ರೇಡ್‌ ಉದ್ಯೋಗಿಗಳ ಶೇ.50 ರಷ್ಟುಹಾಗೂ 3 ನೇ ಗ್ರೇಡ್‌ ನೌಕರರ ಶೇ.25 ರಷ್ಟು ವೇತನ ಕಡಿತವಾಗಲಿದೆ. ಉಳಿದ ಗ್ರೇಡ್‌ ನೌಕರರ ಸಂಬಳ ಯಥಾಪ್ರಕಾರ ಸಿಗಲಿದೆ. ಸೋಮವಾರವಷ್ಟೇ ತೆಲಂಗಾಣ ಕೂಡ ಇದೇ ನಿರ್ಧಾರ ತೆಗೆದುಕೊಂಡಿತ್ತು. ಅಲ್ಲಿ ಶೇ.75ರಷ್ಟುವೇತನ ಕಡಿತವಾಗಲಿದೆ.

3 ತಿಂಗಳು ಕೆಡದ ‘ನಂದಿನಿ ತೃಪ್ತಿ’ ಹಾಲು ಮಾರುಕಟ್ಟೆಗೆ!

ನಿನ್ನೆ ಸೆನ್ಸೆಕ್ಸ್‌ 1028 ಅಂಕ ಏರಿಕೆ, ವಿತ್ತೀಯ ವರ್ಷಕ್ಕೆ 9204 ಅಂಕಗಳ ಕುಸಿತ

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಮಂಗಳವಾರ 1028 ಅಂಕಗಳ ಭರ್ಜರಿ ಚೇತರಿಕೆ ಕಂಡು 29468 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ನಿಫ್ಟಿಕೂಡಾ 316 ಅಂಕ ಏರಿಕೆ ಕಂಡು 8597 ಅಂಕಗಳಲ್ಲಿ ಮುಕ್ತಾಯವಾಗಿದೆ.

ಇದೇ ವೇಳೆ ಮಾಚ್‌ 31ಕ್ಕೆ ಮುಕ್ತಾಯಗೊಂಡ ಹಣಕಾಸು ವರ್ಷದಲ್ಲಿ ಸೆನ್ಸೆಕ್ಸ್‌ ಒಟ್ಟಾರೆ 9204 ಅಂಕಗಳ ಕುಸಿತ ಕಂಡಿದ್ದರೆ, ನಿಫ್ಟಿಒಟ್ಟಾರೆ 3026 ಅಂಕಗಳ ಕುಸಿತ ಕಂಡಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆದಾರರಿಗೆ ಒಟ್ಟಾರೆ 38 ಲಕ್ಷ ಕೋಟಿ ರು.ನಷ್ಟು ನಷ್ಟವಾಗಿದೆ.