Asianet Suvarna News Asianet Suvarna News

ಜಿಎಸ್‌ಟಿ ದರ ಬಂಪರ್ ಇಳಿಕೆ: ಯಾವುದಕ್ಕೆ ವಿನಾಯ್ತಿ?

ಜನಸಾಮಾನ್ಯರ ಬೇಡಿಕೆಗೆ ಮಣಿದ ಕೇಂದ್ರ

ಜಿಎಸ್‌ಟಿ ದರದಲ್ಲಿ ಬಂಪರ್ ಇಳಿಕೆ

ಜಿಎಸ್‌ಟಿ ಮಂಡಳಿಯಿಂದ ಮಹತ್ವದ ನಿರ್ಧಾರ

ಹಲವು ವಸ್ತುಗಳಿಗೆ ತೆರಿಗೆ ವಿನಾಯ್ತಿ ಘೋಷಣೆ
 

ನವದೆಹಲಿ(ಜು.22): ಜನಸಾಮಾನ್ಯರ ಮತ್ತು ಗುಡಿ ಕೈಗಾರಿಕೆಗಳ ಬೇಡಿಕೆಗೆ ಕೊನೆಗೂ ಮಣಿದಿರುವ ಕೇಂದ್ರ ಜಿಎಸ್‌ಟಿ ಮಂಡಳಿ, ಹಲವು ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಪೂರ್ಣವಾಗಿ ಹೊರಗಿಡುವ ಮತ್ತು ಇನ್ನಿತರೆ ಕೆಲವು ವಸ್ತುಗಳ ತೆರಿಗೆ ದರ ಇಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. 

ಅದರಲ್ಲೂ ಸ್ಯಾನಿಟರಿ ಪ್ಯಾಡ್, ರಾಖಿ, ಸಣ್ಣ ಕರಕುಶಲ ವಸ್ತುಗಳು, ಘನೀಕೃತ ಹಾಲು, ಮುತ್ತು ಗದ ಎಲೆಗೆ ವಿನಾಯ್ತಿ ಘೋಷಿಸಿ ಮಹಿಳೆಯರು, ಸಣ್ಣ ವ್ಯಾಪಾರಿಗಳ ಕಡೆಗೆ ಸಹಾಯದ ಹಸ್ತ ಚಾಚಿದೆ. 

ಶನಿವಾರ ಕೇಂದ್ರ ಹಣಕಾಸು ಸಚಿವ ಪೀಯೂಷ್ ಗೋಯೆಲ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..