Asianet Suvarna News Asianet Suvarna News

Ethanol Petrol:ತೈಲ ಬೆಲೆ ಏರಿಕೆ ಸಮಸ್ಯೆ ಪರಿಹರಿಸಲು ಎಥೆನಾಲ್ ಮಿಶ್ರಿತ ಪೆಟ್ರೋಲ್ ಖರೀದಿಗೆ ಕೇಂದ್ರ ಅನುಮೋದನೆ!

  • ತೈಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರದಿಂದ ಮಹತ್ವದ ಹೆಜ್ಜೆ
  • ತೈಲ ಕಂಪನಿಗಳಿಗೆ ಎಥೆನಾಲ್ ಖರೀದಿ ಕಾರ್ಯತಂತ್ರಕ್ಕೆ ಸಂಪುಟ ಅನುಮೋದನೆ
  • ತೈಲ ಮಾರುಕಟ್ಟೆ ಕಂಪನಿಗಳಿಗೆ ಎಥೆನಾಲ್ ಬೆಲೆ ಪರಿಷ್ಕೃರಣೆ
Cabinet approves procurement of ethanol by Public Sector Oil Marketing Companies ckm
Author
Bengaluru, First Published Nov 10, 2021, 10:54 PM IST

ನವದೆಹಲಿ(ನ.10):  ದೇಶದಲ್ಲಿ ತೈಲ ಬೆಲೆ(Fuel Price) ಹಾವು ಏಣಿ ಆಟವಾಡುತ್ತಿದೆ. ಇತ್ತ ಎಲೆಕ್ಟ್ರಿಕ್ ವಾಹನಗಳು(Electric Vehicle) ಜನಸಾಮಾನ್ಯರಿಗೆ ಕೈಗೆಟುಗುತ್ತಿಲ್ಲ. ಹೀಗಾಗಿ ಸಂಕಷ್ಟ ಹೆಚ್ಚಾಗಿದೆ. ಕೇಂದ್ರ ತೈಲದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದರೂ ಪೆಟ್ರೋಲ್ ಬೆಲೆ 100 ರೂಪಾಯಿಗಿಂತ ಕಡಿಮೆಯಾಗಿಲ್ಲ. ಇದರ ನಡುವೆ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸಭೆ ಮುಂಬರುವ 2020-21ರ ಸಕ್ಕರೆ ಹಂಗಾಮಿಗೆ ಎಥೆನಾಲ್ ಗೆ(ethanol) ಹೆಚ್ಚಿನ ಬೆಲೆ ನೀಡಲು ಅನುಮೋದನೆ ನೀಡಿತು. 2020ರ ಡಿಸೆಂಬರ್ 1ರಿಂದ 2021ರ ನವೆಂಬರ್ 30ರವರೆಗಿನ ಇಎಸ್ ವೈ 2020-21 ಅವಧಿಗೆ ಇಬಿಪಿ ಕಾರ್ಯಕ್ರಮದಡಿ ಕಬ್ಬು ಆಧಾರಿತ  ನಾನಾ ಕಚ್ಚಾ ಸಾಮಗ್ರಿಗಳಿಂದ ಪಡೆದ  ಎಥೆನಾಲ್‌ ಹೆಚ್ಚಿನ ಪ್ರಾಮುಖ್ಯತೆ ನೀಡಲು ಕೇಂದ್ರ ಸಜ್ಜಾಗಿದೆ. 

ಈ ಅನುಮೋದನೆಯಿಂದಾಗಿ ಎಥೆನಾಲ್ ಪೂರೈಕೆದಾರರಿಗೆ ಬೆಲೆ ಸ್ಥಿರತೆ ಮತ್ತು ಆಕರ್ಷಕ ಬೆಲೆಗಳನ್ನು ಒದಗಿಸುವಲ್ಲಿ ಸರ್ಕಾರದ ಮುಂದುವರಿದ ನೀತಿಯನ್ನು ಸುಗಮಗೊಳಿಸುವುದಲ್ಲದೆ,  ಕಬ್ಬು ಬೆಳೆಗಾರರ ಬಾಕಿ ಪಾವತಿಯನ್ನು ತಗ್ಗಿಸಲಿದೆ, ಕಚ್ಚಾ ತೈಲ ಆಮದು ಅವಲಂಬನೆ ತಗ್ಗಿಸಲಿದೆ ಮತ್ತು ವಿದೇಶಿ ವಿನಿಮಯ ಉಳಿತಾಯ ಮಾಡುವ ಪರಿಸರ ಸಂರಕ್ಷಣೆಗೆ ಅನುಕೂಲವಾಗಲಿದೆ.

ಈ ನಿರ್ಧಾರದಿಂದಾಗಿ ದೇಶದಲ್ಲಿ ಸುಧಾರಿತ ಜೈವಿಕ ಇಂಧನ ಸಂಸ್ಕರಣಾಗಾರಗಳನ್ನು ಸ್ಥಾಪಿಸಲು ಸಹಾಯ ಮಾಡುವ 2ಜಿ ಎಥೆನಾಲ್ ಬೆಲೆಯನ್ನು ನಿರ್ಧರಿಸುವ  ಅಧಿಕಾರವನ್ನು  ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ದೊರಕಲಿದೆ. ಯೋಜನೆಯಿಂದ ಎಲ್ಲ ಡಿಸ್ಟಿಲರಿಗಳು ಪ್ರಯೋಜನವನ್ನು ಪಡೆಯಬಹುದಾಗಿದೆ ಮತ್ತು ಇಬಿಪಿ ಕಾರ್ಯಕ್ರಮದಡಿ ಹೆಚ್ಚಿನ ಸಂಖ್ಯೆಯ ಡಿಸ್ಟಿಲರಿಗಳು ಎಥೆನಾಲ್ ಪೂರೈಕೆ ಮಾಡುತ್ತಾರೆಂದು ನಿರೀಕ್ಷಿಸಲಾಗುತ್ತಿದೆ.

2024ರಲ್ಲಿ ಹರಿಹರದಲ್ಲಿ 2ಜಿ ಎಥೆನಾಲ್‌ ಸ್ಥಾವರ

ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ, ಅದರಲ್ಲಿ ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ)ಗಳು ಪೆಟ್ರೋಲ್ ಜೊತೆ ಶೇ.10ರವರೆಗೆ ಎಥೆನಾಲ್ ಮಿಶ್ರಣ ಮಾಡಿ ಮಾರಾಟ ಮಾಡುತ್ತವೆ.. ಪರಿಸರ ಸ್ನೇಹಿ ಇಂಧನ ಮತ್ತು ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು 2019ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದೀಪ್ ದ್ವೀಪಗಳನ್ನು ಹೊರತುಪಡಿಸಿ ದೇಶಾದ್ಯಂತ ವಿಸ್ತರಣೆ ಮಾಡಲಾಗಿದೆ. ಈ ಮಧ್ಯಪ್ರವೇಶದಿಂದಾಗಿ ಇಂಧನ ಅಗತ್ಯತೆಗಳಿಗೆ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಪ್ರಯತ್ನಿಸುತ್ತದೆ.

ಈ ಕೆಳಗಿನವುಗಳಿಗೆ ಅನುಮೋದನೆ ನೀಡಲಾಗಿದೆ.
(i) ಸಿ  ಭಾರೀ ಕಾಕಂಬಿ ಮಾರ್ಗದಿಂದ ಪಡೆಯಲಾದ ಎಥೆನಾಲ್ ಬೆಲೆ ಪ್ರತಿ ಲೀಟರ್ ಗೆ 45.69 ರೂ.ಗಳಿಂದ 46.66 ರೂ.ಗೆ ಹೆಚ್ಚಿಸಲಾಗಿದೆ.
(ii) ಬಿ ಭಾರೀ ಕಾಕಂಬಿಯಿಂದ ಮಾರ್ಗದಿಂದ ಪಡೆಯಲಾದ ಎಥೆನಾಲ್ ಬೆಲೆ ಪ್ರತಿ ಲೀಟರ್ ಗೆ 57.61 ರೂ.ಗಳಿಂದ 59.08 ರೂ.ಗೆ ಹೆಚ್ಚಿಸಲಾಗಿದೆ.
(iii) ಕಬ್ಬಿನ ರಸ, ಸಕ್ಕರೆ, ಸಕ್ಕರೆ ಪಾಕದಿಂದ ಪಡೆದ ಎಥೆನಾಲ್ ಬೆಲೆ  ಪ್ರತಿ ಲೀಟರ್ ಗೆ 62.65 ರೂ.ಗಳಿಂದ 63.45 ರೂ.ಗೆ ಹೆಚ್ಚಳ ಮಾಡಲಾಗಿದೆ.
(iv) ಹೆಚ್ಚುವರಿಯಾಗಿ ಜಿಎಸ್ ಟಿ ಮತ್ತು ಸಾರಿಗೆ ವೆಚ್ಚ ಕೂಡ ಪಾವತಿಸಬೇಕು
(v) ದೇಶದಲ್ಲಿ ಸುಧಾರಿತ ಜೈವಿಕ ಇಂಧನ ಸಂಸ್ಕರಣಾಗಾರಗಳನ್ನು ಸ್ಥಾಪಿಸಲು ಇದು ಸಹಾಯ ಮಾಡುವುದರಿಂದ 2ಜಿ ಎಥೆನಾಲ್ ಬೆಲೆಯನ್ನು ನಿರ್ಧರಿಸುವ ಸ್ವತಂತ್ರ ಅಧಿಕಾರವನ್ನು  ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ. ಸದ್ಯ ತೈಲ ಮಾರುಕಟ್ಟೆ ಕಂಪನಿಗಳೇ (ಒಎಂಸಿಗಳೇ) ಆಹಾರ ಧಾನ್ಯ ಆಧಾರಿತ ಎಥೆನಾಲ್ ಬೆಲಗಳನ್ನು ನಿರ್ಧರಿಸುತ್ತಿರುವುದರಿಂದ ಇದು ಪ್ರಮುಖವಾಗಿದೆ.

ಮಾರುಕಟ್ಟೆಗೆ ದೇಶದ ಮೊದಲ ಎಥೆನಾಲ್ ಬೈಕ್ : 3 ರಾಜ್ಯಗಳಲ್ಲಿ ಮಾತ್ರ ಲಭ್ಯ

ಕೇಂದ್ರ ಸರ್ಕಾರ 2014ರಿಂದ ಎಥೆನಾಲ್ ಬೆಲೆಯನ್ನು ನಿಯಂತ್ರಿಸಿ ಅಧಿಸೂಚನೆಯನ್ನು ಹೊರಡಿಸುತ್ತಿದೆ. 2018ರಲ್ಲಿ ಮೊದಲ ಬಾರಿಗೆ ಸರ್ಕಾರದಿಂದ ಎಥೆನಾಲ್ ಉತ್ಪಾದನೆಗೆ ಬಳಸುವ ಕಚ್ಚಾ ಸಾಮಗ್ರಿಗಳನ್ನು ಆಧರಿಸಿ ಎಥೆನಾಲ್ ಗೆ ಬೇರೆ ಬೇರೆ ರೀತಿಯ ದರ ನಿಗದಿಪಡಿಸಲಾಗಿತ್ತು. ಈ ನಿರ್ಧಾರಗಳು ಎಥೆನಾಲ್ ಪೂರೈಕೆಯನ್ನು ಗಣನೀಯವಾಗಿ ಸುಧಾರಿಸಿದ್ದು, ಇದರಿಂದಾಗಿ ಸಾರ್ವಜನಿಕ ವಲಯದ ಒಎಂಸಿಗಳಿಂದ 2013-14ರಲ್ಲಿ ಎಥೆನಾಲ್ ಪೂರೈಕೆ ವರ್ಷ (ಇಎಸ್ ವೈ)ನಲ್ಲಿ 38 ಕೋಟಿ ಲೀಟರ್ ಇದ್ದ ಎಥೆನಾಲ್ ಸಾಮರ್ಥ್ಯ 2020-21ನೇ ಇಎಸ್ ವೈ ನಲ್ಲಿ 350 ಕೋಟಿಗೂ ಅಧಿಕ ಲೀಟರ್ ಗೆ ಏರುವ ಒಪ್ಪಂದವಿದೆ. ಪಾಲುದಾರರಿಗೆ ದೀರ್ಘಾವಧಿಯ ದೃಷ್ಟಿಕೋನವನ್ನು ಒದಗಿಸುವ ದೃಷ್ಟಿಯಿಂದ ಎಂಒಪಿ ಮತ್ತು ಎನ್ ಜಿ, ಇಬಿಪಿ ಕಾರ್ಯಕ್ರಮದಡಿಯಲ್ಲಿ ದೀರ್ಘಾವಧಿಯ ಆಧಾರದ ಮೇಲೆ ಎಥೆನಾಲ್ ಖರೀದಿ ನೀತಿಯನ್ನು ಪ್ರಕಟಿಸಿದೆ.

ಅದಕ್ಕೆ ಅನುಗುಣವಾಗಿ ಒಎಂಸಿಗಳು ಈಗಾಗಲೇ ಎಥೆನಾಲ್ ಪೂರೈಕೆದಾರರು ಒಂದು ಬಾರಿಯ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಒಎಂಸಿಗಳು ಎಥೆನಾಲ್ ಕೊರತೆ ರಾಜ್ಯಗಳಲ್ಲಿ ಎಥೆನಾಲ್ ಘಟಕಗಳನ್ನು ಸ್ಥಾಪಿಸಲು ದೀರ್ಘಾವಧಿಯ ಒಪ್ಪಂದಗಳನ್ನು ಮಾಡಿಕೊಳ್ಳಲು ಅರ್ಹ ಯೋಜನೆ ಆರಂಭಿಸುವವರ ಪಟ್ಟಿಯನ್ನು ಪ್ರಕಟಿಸಿದೆ. ದೀರ್ಘಾವಧಿಯ ದೃಷ್ಟಿಕೋನವನ್ನು ಒದಗಿಸಲು ಮತ್ತು ಹೂಡಿಕೆದಾರರನ್ನು ಆಕರ್ಷಿಸುವ ಇತರೆ ಪ್ರಮುಖ ವೈಶಿಷ್ಟ್ಯವೆಂದರೆ ಇಎಸ್ ವೈ 2021-22 ಗೆ ಪೆಟ್ರೋಲ್ ಜೊತೆ ಶೇ.10ರಷ್ಟು ಇರುವ ಎಥೆನಾಲ್ ಮಿಶ್ರಣದ ಗುರಿಯನ್ನು 2025-26ರ ಇಎಸ್ ವೈ ವೇಳೆಗೆ ಶೇ.20ರಷ್ಟು ಹೊಂದಿರುವುದು. ಆ ದಿಕ್ಕಿನಲ್ಲಿ ಸಾಗುವ ಕ್ರಮವಾಗಿ ಗೌರವಾನ್ವಿತ ಪ್ರಧಾನಮಂತ್ರಿ ಅವರು 2021ರ ಜೂನ್ 5 ವಿಶ್ವ ಪರಿಸರ ದಿನದಂದು ತಜ್ಞರ ವರದಿ “ಭಾರತದಲ್ಲಿ ಎಥೆನಾಲ್ ಮಿಶ್ರಣಕ್ಕೆ ನೀಲನಕ್ಷೆ 2020-25’’ ಅನ್ನು ಬಿಡುಗಡೆಗೊಳಿಸಿದ್ದರು. ಇವೆಲ್ಲವೂ ವ್ಯವಹಾರಗಳನ್ನು ಸುಗಮಗೊಳಿಸಲು ಮತ್ತು ಆತ್ಮ ನಿರ್ಭರ ಭಾರತ ಗುರಿ ಸಾಧನೆಗೆ ಸಹಾಯವಾಗುತ್ತದೆ.

ನಿರಂತರವಾಗಿ ಸಕ್ಕರೆ ಉತ್ಪಾದನೆ ಹೆಚ್ಚಾಗಿರುವ ಪರಿಣಾಮ ಸಕ್ಕರೆ ಬೆಲೆಯನ್ನು ಕುಗ್ಗಿಸಿದೆ. ಪರಿಣಾಮವಾಗಿ ಕಬ್ಬು ಬೆಳೆಗಾರರಿಗೆ ಹಣ ಪಾವತಿಸುವ ಉದ್ಯಮದ ಕಡಿಮೆ ಸಾಮರ್ಥ್ಯದಿಂದಾಗಿ ರೈತರಿಗೆ ಪಾವತಿಸಬೇಕಾಗಿರುವ ಬಾಕಿ ಹಣ ಹೆಚ್ಚಾಗಿದೆ. ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾಗಿರುವ ಮೊತ್ತವನ್ನು ತಗ್ಗಿಸಲು ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದೆ.  ದೇಶದಲ್ಲಿ ಸಕ್ಕರೆ ಉತ್ಪಾದನೆಯನ್ನು ಮಿತಿಗೊಳಿಸಲು ಮತ್ತು ಎಥೆನಾಲ್ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು, ಬಿ ಭಾರಿ ಕಾಕಂಬಿ, ಕಬ್ಬಿನ ರಸ, ಸಕ್ಕರೆ, ಸಕ್ಕರೆ ಪಾಕವನ್ನು ಎಥೆನಾಲ್ ಉತ್ಪಾದನೆಯ ಬಳಸಲು ಅವಕಾಶ ನೀಡುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದೆ. 

ಇದೀಗ, ಕಬ್ಬಿಗೆ ನ್ಯಾಯಯುತ ಮತ್ತು ಆಕರ್ಷಕ ಬೆಲೆ(ಎಫ್ ಆರ್ ಪಿ) ಬೆಲೆ ನೀಡಲು ಮತ್ತು ಕಾರ್ಖಾನೆ ಹೊರಗಿನ ಬೆಲೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಕಬ್ಬಿನ ನಾನಾ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸಲಾದ ಎಥೆನಾಲ್ ಗೆ ಕಾರ್ಖಾನೆ ಹೊರಗಿನ ಬೆಲೆಯನ್ನು ಪರಿಷ್ಕರಿಸುವ ಅಗತ್ಯ ಇತ್ತು.

ಅಲ್ಲದೆ, ಎರಡಲೇ ತಲೆ ಮಾರಿನ (2ಜಿ) ಎಥೆನಾಲ್ ಕಾರ್ಯಕ್ರಮವನ್ನು (ಕೃಷಿ ಮತ್ತು ಅರಣ್ಯ ತ್ಯಾಜ್ಯದ  ಉಳಿದ ವಸ್ತುಗಳಿಂದ ಉದಾಹರಣೆಗೆ ಅಕ್ಕಿ/ ಗೋಧಿಹೊಟ್ಟು, ಒಣಹುಲ್ಲಿನ/ ಕಾರ್ನ್ ಕಾಬ್ ಗಳು ಮತ್ತು ಸ್ಟೋವರ್/ಬೊಗಾಸೆ, ವುಡ್ಡಿ ಬಯೋಮಾಸ್) ಇತ್ಯಾದಿಗಳಿಂದ ಎಥೆನಾಲ್ ಉತ್ಪಾದಿಸಲು ತೈಲ ಪಿಎಸ್ ಇಗಳಿಂದ ಕೆಲವು ಯೋಜನೆಗಳನ್ನು ಸ್ಥಾಪಿಸಲಾಗಿದೆ. ಅದಕ್ಕೆ ಸರ್ಕಾರದ “ಪ್ರಧಾನಮಂತ್ರಿ ಜೀ-ವನ್ ಯೋಜನೆ’ ಯಿಂದ ಆರ್ಥಿಕ ನೆರವು ಪಡೆದುಕೊಳ್ಳಲು ಹಿಂದೆ ಸಿಸಿಇಎ ಅನುಮೋದನೆ ನೀಡಿತ್ತು. ಈ ಯೋಜನೆಗಳು ಇಎಸ್ ವೈ 2021-22 ರಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇರುವುದರಿಂದ 2ಜಿ ಎಥೆನಾಲ್ ಬೆಲೆ ನಿಗದಿ ನಿರ್ಧಾರವನ್ನು ಬಯಸಲಾಗಿದೆ.
 

Follow Us:
Download App:
  • android
  • ios