Asianet Suvarna News Asianet Suvarna News

ನಿಮಗೂ ಬಂದಿದೆಯಾ ಈ ಬ್ಯಾಂಕ್ ನೋಟಿಸ್: ಸ್ವೀಕರಿಸಿದವನ ಹೋಶ್ ಉಡೀಸ್!

ಬ್ಯಾಂಕ್ ಕಳುಹಿಸಿದ ನೋಟಿಸ್ ಕಂಡು ದಂಗಾದ ವ್ಯಕ್ತಿ| ರಾತ್ರಿ ವೇಳೆ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ ಬ್ಯಾಂಕ್ ಸಿಬ್ಬಂದಿ| 50  ಪೈಸೆಗಾಗಿ ನೋಟಿಸ್ ಕಳುಹಿಸಿದ ರಾಜಸ್ಥಾನದ ಸಾರ್ವಜನಿಕ ಬ್ಯಾಂಕ್| ರಾಜಸ್ಥಾನದ ಜುಂಜುನು ಜಿಲ್ಲೆಯ ಖೇಟ್ರಿಯಲ್ಲಿರುವ ಸಾರ್ವಜನಿಕ ಬ್ಯಾಂಕ್| ನೋಟಿಸ್ ಸ್ವೀಕರಿಸಲು ನಿರಾಕರಿಸಿದ ಜೀತೇಂದ್ರ ಸಿಂಗ್| ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡಲು ಮುಂದಾದ ಜೀತೇಂದ್ರ ಸಿಂಗ್|

Bank Sends Notice To Man Demanding Him To Repay 50 Paise Due
Author
Bengaluru, First Published Dec 15, 2019, 5:09 PM IST

ಜೈಪುರ್(ಡಿ.15): ರಾಜಸ್ತಾನದ ಜುಂಜುನು ಜಿಲ್ಲೆಯಲ್ಲಿ ಸಾರ್ವಜನಿಕ ಬ್ಯಾಂಕ್’ವೊಂದು  50 ಪೈಸೆ ಮರುಪಾವತಿಸುವಂತೆ  ವ್ಯಕ್ತಿಯೊಬ್ಬರಿಗೆ ನೋಟಿಸ್ ಕಳುಹಿಸಿದೆ. 

ಜುಂಜುನುವಿನ ಖೇಟ್ರಿಯಲ್ಲಿರುವ ಸಾರ್ವಜನಿಕ ಬ್ಯಾಂಕ್, 50 ಪೈಸೆಗಾಗಿ ನೋಟಿಸ್ ಕಳುಹಿಸಿ ನಗೆಪಾಟಲಿಗೀಡಾಗಿದೆ. ಜೀತೇಂದ್ರ ಸಿಂಗ್ ಎಂಬುವವರ ಮನೆ ಬಾಗಿಲಿಗೆ ರಾತ್ರಿ ವೇಳೆ ನೋಟಿಸ್ ಅಂಟಿಸಿ, ಕಾನೂನು ಕ್ರಮದ ಬೆದರಿಕೆ ಕೂಡ ಹಾಕಿದೆ.

ಸತ್ತವರ ಮನೆಗೂ ನೋಟಿಸ್‌ ನೀಡ್ತಿವೆ ಬ್ಯಾಂಕ್‌ಗಳು: ಕಂಗಾಲಾದ ರೈತಾಪಿ ವರ್ಗ

ಆದರೆ ಈ ನೋಟಿಸ್’ನ್ನು ಸ್ವೀಕರಿಸಲು ಜೀತೇಂದ್ರ ಸಿಂಗ್ ತಿರಸ್ಕರಿಸಿದ್ದು, ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

ಬೆನ್ನು ಮೂಳೆಯ ಗಾಯದಿಂದ ಬಳಲುತ್ತಿರುವ ಸಿಂಗ್, ಲೋಕ ಅದಾಲತ್'ನಲ್ಲಿ  ಬಾಕಿ ಹಣವನ್ನು ಪಾವತಿಸಿಲ್ಲ. ಆದಾಗ್ಯೂ, ಅವರ ತಂದೆ ವಿನೋದ್ ಸಿಂಗ್ ಹಣ ಪಾವತಿಸಲು ಹೋದಾಗ ಬ್ಯಾಂಕ್ ಅಧಿಕಾರಿಗಳು ಹಣವನ್ನು ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಾರೆ.

50 ಪೈಸೆಗಾಗಿ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದಾರೆ. ನಮ್ಮ ಕಕ್ಷಿದಾರರು ಬ್ಯಾಂಕ್’ನಿಂದ ಎನ್’ಒಸಿ ಪಡೆಯಲು ಹೋದಾಗ ಠೇವಣಿ ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಜೀತೇಂದ್ರ ಸಿಂಗ್  ಪರ ವಕೀಲ ಆರೋಪಿಸಿದ್ದಾರೆ.

ಎಕ್ಸಿಕ್‌ ಬ್ಯಾಂಕ್ ನೋಟಿಸ್‌ ಗೆ ರೈತ ಬಲಿ

ಈ ಹಿನ್ನೆಲೆಯಲ್ಲಿ ಬ್ಯಾಂಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜೀತೇಂದ್ರ ಸಿಂಗ್  ಪರ ವಕೀಲ ವಿಕ್ರಮ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. 

Follow Us:
Download App:
  • android
  • ios