Associate Partner
Associate Partner
Associate Partner
ಈಗೇನಿದೆ? | ಎಲಿಮಿನೆಟೆಡ್ |
---|---|
ಅಡ್ಡ ಹೆಸರು | ಉಗ್ರಂ ಮಂಜು |
ಹುಟ್ಟಿದಬ್ಬ | NA |
ವಯಸ್ಸು | 35 ವರ್ಷ |
ಹುಟ್ಟಿದ ಸ್ಥಳ | ಕೋಲಾರ |
ಉದ್ಯೋಗ | ಆ್ಯಕ್ಷನ್ ಕೋರಿಯೋಗ್ರಾಫರ್, ನಟನೆ |
ಹವ್ಯಾಸ | ಆ್ಯಕ್ಷನ್ ಕೋರಿಯೋಗ್ರಫಿ, ನಾಟಕ |
ಯಾವುದಕ್ಕೆ ಪ್ರಸಿದ್ಧಿ? | ಉಗ್ರಂ ಚಿತ್ರದ ಆ್ಯಕ್ಷನ್ |
ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್ ಕೊರಿಯೋಗ್ರಾಫರ್ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡವರು ಉಗ್ರಂ ಮಂಜು. 2014ರ ಬ್ಲಾಕ್ ಬಸ್ಟರ್ ಚಿತ್ರ ಉಗ್ರಂ ಆ್ಯಕ್ಷನ್ ಫೈಟ್ ಮೂಲಕ ಹೊಸ ಮೆರುಗನ್ನು ಕೊಟ್ಟ ಕಲಾವಿದ. ಆದ್ದರಿಂದ ಉಗ್ರಂ ಸಿನಿಮಾ ದೊಡ್ಡ ಯಶಸ್ಸು ಗಳಿಸಿತು. ಮೂಲತಃ ರಂಗ ಕಲಾವಿದರಾಗಿರುವ ಮಂಜು ಅವರ ಕ್ಯಾಮೆರಾ ಹಿಂದಿನ ಸೃಜನಶೀಲತೆಯೇ ಕನ್ನಡ ಚಲನಚಿತ್ರೋದ್ಯಮದಲ್ಲಿ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿಸಿದೆ. ಆ್ಯಕ್ಷನ್ ಚಲನಚಿತ್ರ ನಿರ್ಮಾಣದಲ್ಲಿ ಹೊಸ ಕ್ರೇಜ್ ಹುಟ್ಟು ಹಾಕಿದ ಕೀರ್ತಿ ಇವರಿಗೇ ಸಲ್ಲುತ್ತದೆ.
ಸುಮಾರು 35 ವರ್ಷದ ಮಂಜು ಇನ್ನೂ ಸಿಂಗಲ್. ರಂಗ ಕಲಾವಿದರಾಗಿದ್ದ ತಂದೆಯಿಂದಲೇ ನಟನೆ ಹಾಗೂ ಕಲೆ ಇವರಿಗೂ ಕರಗತವಾಗಿವೆ. ಮದ್ಯವನ್ನು ನೀರಿನಂತೆ ಕುಡಿಯೋ ದುರಭ್ಯಾಸ ಇರೋ ಮಂಜು, ಅದ್ಹೇಗೆ ಬಿಗ್ ಬಾಸ್ ಮನೆಯೊಳಗೆ ಇರುತ್ತಾರೋ ಗೊತ್ತಿಲ್ಲ. ನಿಮ್ಮ ಅಭ್ಯಾಸಕ್ಕೆ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಇಲ್ಲ, ಬೇಕಾದರೆ ಸಿಗರೇಟ್ ಸೇದಲು ಪ್ರತ್ಯೇಕ ಕೋಣೆಯೊಂದನ್ನು ವ್ಯವಸ್ಥೆ ಮಾಡಲಾಗಿದೆ, ಎಂದಿದ್ದಾರೆ ಕಿಚ್ಚ. ವೇದಿಕೆ ಮೇಲೆ ಮಂಜು ನಾನು ಕಳೆದೊಂದು ವಾರದಿಂದ ಎಣ್ಣೆ ಬಿಟ್ಟಿರುವುದಾಗಿಯೂ ಹೇಳಿ ಕೊಂಡಿದ್ದಾರೆ. ನನ್ನ ಮಗನಿಗೊಂದು ಒಂದು ಮದುವೆ ಮಾಡಿಸಿ ಎಂದು ಅವರ ತಂದೆ ಕಿಚ್ಚ ಸುದೀಪ್ ಮುಂದೆ ಮನವಿ ಮಾಡಿಕೊಂಡಿದ್ದಾರೆ.