ಗೋಲ್ಡ್ ಸುರೇಶ್
ಗೋಲ್ಡ್ ಸುರೇಶ್
ಈಗೇನಿದೆ?ಎಲಿಮಿನೆಟೆಡ್
ಅಡ್ಡ ಹೆಸರುಸುರೇಶ್
ಹುಟ್ಟಿದಬ್ಬNA
ವಯಸ್ಸುNA
ಹುಟ್ಟಿದ ಸ್ಥಳಬೆಳಗಾವಿ
ಉದ್ಯೋಗಬ್ಯುಸಿನೆಸ್
ಹವ್ಯಾಸಚಿನ್ನ ಕೊಳ್ಳೋದು
ಯಾವುದಕ್ಕೆ ಪ್ರಸಿದ್ಧಿ?ಮೈ ಮೇಲೆ ಹಾಕುವ ಚಿನ್ನದಿಂದ ಫೇಮಲ್

ಸ್ಪರ್ಧಿಗಳ ಸ್ವ ವಿವರ

ಗೋಲ್ಡ್ ಸುರೇಶ್ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯವರು. ಬೆಂಗಳೂರಿನಲ್ಲಿ ನೆಲೆಸಿದ್ದು, ಸಿವಿಲ್ ಕನ್ಸ್‌ಟ್ರಕ್ಷನ್ ಕೆಲಸ ಮಾಡಿಕೊಂಡಿದ್ದಾರೆ. ಮಗುವಿನ ತಂದೆಯಾಗಿರುವ ಸುರೇಶ್, ತಾವು ಮೈ ಮೇಲೆ ಹಾಕಿಕೊಳ್ಳುವ ಕೋಟಿ ಬೆಲೆ ಬಾಳುವ ಚಿನ್ನದಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತಾರೆ. ಸಾಮಾನ್ಯ ಬಡ ಕುಟುಂಬದಿಂದ ಬಂದು, ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ತಲುಪಿರುವುದಾಗಿ ಹೇಳಿ ಕೊಂಡಿದ್ದಾರೆ. ಶಾಲಾ-ಕಾಲೇಜಿಗೆ ತೆರಳಿಗೆ ಮಕ್ಕಳಿಗೆ ಸ್ಪೂರ್ತಿ ಭಾಷಣ ಮಾಡುತ್ತಾರೆ.

ಪ್ರತಿದಿನ 1 ರಿಂದ 2 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸುವ ಗೋಲ್ಡ್ ಸುರೇಶ್, ಇದರ ರಕ್ಷಣೆಗೆ ಇಬ್ಬರು ಗನ್‌ಮ್ಯಾನ್ ಮತ್ತು ನಾಲ್ವರು ಬಾಡಿಗಾರ್ಡ್‌ಗಳನ್ನು ಹೊಂದಿದ್ದಾರೆ. ಚಿನ್ನದ ಶರ್ಟ್ ಮಾಡಿಕೊಳ್ಳಬೇಕು ಎಂಬುವುದು ಗೋಲ್ಡ್ ಸುರೇಶ್ ಅವರ ಕನಸಂತೆ. ಇಷ್ಟು ಮಾತ್ರವಲ್ಲದೇ ಗೋಲ್ಡ್ ಸುರೇಶ್ ರೈತರಾಗಿಯೂ ಜಮೀನಿನಲ್ಲಿ ಕೆಲಸ ಮಾಡುತ್ತಾರೆ.

Biography
@ Copyright 2024 Asianet News Media & Entertainment Private Limited