Associate Partner
Associate Partner
Associate Partner
ಈಗೇನಿದೆ? | ಮನೆಯಲ್ಲಿ ಇರುವವರು |
---|---|
ಅಡ್ಡ ಹೆಸರು | ಚೈತ್ರಾ |
ಹುಟ್ಟಿದಬ್ಬ | ಏಪ್ರಿಲ್ 5, 1992 |
ವಯಸ್ಸು | 32 |
ಹುಟ್ಟಿದ ಸ್ಥಳ | ಕುಂದಾಪುರ |
ಉದ್ಯೋಗ | ಹಿಂದೂ ಕಾರ್ಯಕರ್ತೆ |
ಹವ್ಯಾಸ | ಆ್ಯಂಕರ್, ಹಿಂದೂ ಕಾರ್ಯಕರ್ತೆ |
ಯಾವುದಕ್ಕೆ ಪ್ರಸಿದ್ಧಿ? | ವಿವಾದಾತ್ಮಕ ಭಾಷಣ, ಹಿಂದೂ ಫೈರ್ ಬ್ರಾಂಡ್ |
ಉಡುಪಿ ಜಿಲ್ಲೆಯ ಕುಂದಾಪುರದ ಯುವತಿ ಚೈತ್ರಾ ಕುಂದಾಪುರ ತೆಕ್ಕಟ್ಟೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಮಂಗಳೂರಿನಲ್ಲಿ ಜರ್ನಲಿಸಂ ಕೋರ್ಸ್ ಮಾಡಿದ್ದಾರೆ. ಲೋಕಲ್ ಚಾನೆಲ್‌ನಲ್ಲಿ ಆ್ಯಂಕರ್ ಆಗಿ, ನಂತರ ಪತ್ರಿಕೋದ್ಯಮದ ಉಪನ್ಯಾಸಕರಾಗಿಯೂ ತುಸು ಕಾಲ ಸೇವೆ ಸಲ್ಲಿಸಿದ್ದಾರೆ. ಆದರೆ, ಹೆಸರು ತಂದು ಕೊಟ್ಟಿದ್ದು ಹಿಂದೂ ಸಂಘಟನೆಯ ಕಾರ್ಯಕರ್ತೆಯಾಗಿ. ಭಾಷಣಕಾರ್ತಿಯಾಗಿಯೇ ಜೀವನ ಕಟ್ಟಿಕೊಂಡಿದ್ದಾರೆ. ರಾಜ್ಯಾದ್ಯಂತ ಹಿಂದೂ ಫೈರ್ ಬ್ರ್ಯಾಂಡ್ ಲೇಡಿ ಚೈತ್ರಾ ಕುಂದಾಪುರ ಅವರ ಖ್ಯಾತಿ ಕೇವಲ 26 ವರ್ಷಕ್ಕೇ ಉತ್ತುಂಗ ತಲುಪಿತ್ತು. ಉದ್ಯಮಿಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ಕೆಲ ತಿಂಗಳು ಕಂಬಿಯನ್ನೂ ಎಣಿಸಿದ್ದಾರೆ. ಕಳೆದ ಬಿಗ್ ಬಾಸ್ ಸೀಸನ್ 10 ಅನ್ನು ಜೈಲಲ್ಲೇ ವೀಕ್ಷಿಸಿದ್ದ ಚೈತ್ರಾ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆಯೊಳಗೆ ಕಾಲಿಟ್ಟಿದ್ದಾರೆ. ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ಚೈತ್ರಾರನ್ನು ನೋಡಿರುವ ಜನರಿಗೆ ಮೈಕ್ ಹಾಗೂ ವೇದಿಕೆ ಹೊರತಾಗಿಯೂ ಈ ಲೇಡಿ ಫೈರ್ ಬ್ರ್ಯಾಂಡ್ ಹೇಗಿದ್ದಾರೆಂಬುದನ್ನು ತೋರಿಸಲು ಬಿಗ್ ಬಾಸ್ ಹೆಲ್ಪ್ ಆಗುತ್ತಾ ನೋಡಬೇಕು. ಆದರೆ, ಚೈತ್ರಾ ಕುಂದಾಪುರ ಅವರಿಗೆ ವೀಕ್ಷಕರು ಕೇವಲ 15 ನಿಮಿಷದಲ್ಲೇ 2.85 ಲಕ್ಷ ಮತ ಹಾಕಿ, ನರಕಕ್ಕೆ ಕಳುಹಿಸಿದ್ದಾರೆ.
ಕೈಗೊಂದು ಮೈಕು ಸಿಕ್ಕರೆ ಸಾಕು, ಕಾಂಟ್ರೋವರ್ಸಿ ಮಾತಿಲ್ಲದೆ ಬಿಡುವವರಲ್ಲ ಚೈತ್ರಾ. ಆದರೆ, ಜೈಲಿಗೆ ಹೋಗಿ ಬಂದ ಮೇಲೆ ಎಲ್ಲಿಯೋ ಕುಗ್ಗಿದ್ದಾರೆ ಎಂದೆನಿಸುತ್ತದೆ. 5 ಕೋಟಿ ವಂಚನೆ ಆರೋಪ ಇವರ ಮೇಲಿದೆ. ಜಾಮೀನಿನ ಮೇಲೆ ಹೊರ ಬಂದಿದ್ದು, ಇದೀಗ ಬಿಗ್ ಬಾಸ್ ಎಂಬ ಅರಮನೆಯಂಥ ಸೆರೆಮನೆಯೊಳಗೆ ಹೋಗಿದ್ದಾರೆ. ತಾವು ಆರೋಪ ಮುಕ್ತಳಾಗಿ ಮತ್ತೆ ತಮ್ಮ ಹಿಂದಿನ ಛಾರ್ಮ್‌ಗೆ ಮರಳುತ್ತೇನೆ ಎಂದು ಚೈತ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.