Associate Partner
Associate Partner
Associate Partner
ಈಗೇನಿದೆ? | ಎಲಿಮಿನೆಟೆಡ್ |
---|---|
ಅಡ್ಡ ಹೆಸರು | ಐಶು |
ಹುಟ್ಟಿದಬ್ಬ | NA |
ವಯಸ್ಸು | NA |
ಹುಟ್ಟಿದ ಸ್ಥಳ | ಬೆಂಗಳೂರು |
ಉದ್ಯೋಗ | ನಟನೆ |
ಹವ್ಯಾಸ | ನಟನೆ, ಮಾಡೆಲಿಂಗ್ |
ಯಾವುದಕ್ಕೆ ಪ್ರಸಿದ್ಧಿ? | ಮಂಗಳ ಗೌರಿ ಸೀರಿಯಲ್ ಮೂಲಕ ಖ್ಯಾತಿ |
ಐಶ್ವರ್ಯಾ ಸಿಂಧೋಗಿ ಸ್ವಂತ ಪ್ರಯತ್ನದಿಂದಲೇ ಬೆಳೆದ ಪ್ರತಿಭೆ. ಎರಡು ವರ್ಷದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಐಶ್ವರ್ಯಾ ಸಿಂಧೋಗಿ ಗಟ್ಟಿಗಿತ್ತಿ. ಧಾರಾವಾಹಿಗಳಲ್ಲಿ ವಿಲನ್ ಪಾತ್ರದ ಮೂಲಕ ಕರುನಾಡಿನ ಮನೆ ಮಗಳಾಗಿದ್ದಾರೆ. ನಾಗಿಣಿ-2, ಮಂಗಳ ಗೌರಿ,ತನಿಶಾ, ಶಾಂಭವಿ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಐಶ್ವರ್ಯಾ ಸಿಂಧೋಗಿ, ಸಂಯುಕ್ತಾ-2 ಮತ್ತು ಸಿಂಹಾದ್ರಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಹಿರಿಯ ಕಲಾವಿದ ಡಾಲಿ ರಾಜೇಶ್ ಅವರನ್ನು ಗಾಡ್ ಫಾದರ್ ಎಂದು ಐಶ್ವರ್ಯಾ ಸಿಂಧೋಗಿ ಹೇಳಿಕಕೊಳ್ಳುತ್ತಾರೆ.
ಬಹುತೇಕ ಸೀರಿಯಲ್ಸ್‌ನಲ್ಲಿ ನೆಗಟಿವ್ ರೋಲ್ ಮಾಡಿರುವ ಐಶ್ವರ್ಯಾಗೆ ಕಣ್ಣುಗಳೇ ಆಸ್ತಿ. ಕಣ್ಣಿನಿಂದಲೇ ತಮ್ಮ ನಟನಾ ಪ್ರತಿಭೆ ಪ್ರದರ್ಶಿಸುವ ಐಶ್ವರ್ಯಾಗೆ ತಂದೆ ಅಸುನೀಗಿದ ಕೆಲವು ದಿನಗಳಲ್ಲಿಯೇ ಅಮ್ಮನೂ ಕೊನೆಯುಸಿರೆಳೆದಿದ್ದು ಜೀವನದ ದೊಡ್ಡ ಆಘಾತ.