ಬೇರೆ ಸಂಬಂಧ ಇದ್ದರೆ ಓಡಿ ಹೋಗಿ, ಕಟ್ಟಿಕೊಂಡ ಗಂಡನ ಹತ್ಯೆ ಮಾಡಬೇಡಿ: ಕರವೇ ಮನವಿ

ಬೆಳಗಾವಿ ಅಂಬೇಡ್ಕರ ನಗರ ನಿವಾಸಿ ರಮೇಶ ಕಾಂಬಳೆ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ ನಡೆಸಿದೆ. ಈ ವೇಳೆ ಹೆಂಡತಿಯರಿಗೇ ಬೇರೆ ಸಂಬಂಧ ಇದ್ದರೆ ಓಡಿ ಹೋಗಿ, ಆದರೆ ಪತಿಯನ್ನೇ ಹತ್ಯೆ ಮಾಡಬೇಡಿ ಎಂದು ಮನವಿ ಮಾಡಿದೆ.

Ramesh Kambale murder case Dont kill husband for illegal affair Karnataka rakshana vedike request womans ckm

ಬೆಳಗಾವಿ(ಜೂ.27): ಹೆಂಡತಿಯಂದಿರೇ ನಿಮಗೆ ಬೇರೆ ಸಂಬಂಧ ಇದ್ದರೆ ಓಡಿ ಹೋಗಿ. ಆದರೆ ಕಟ್ಟಿಕೊಂಡ ಪತಿಯನ್ನು ಹತ್ಯೆ ಮಾಡಬೇಡಿ ಎಂದು ಕರವೇ ರಾಜ್ಯ ಸಂಚಾಲಕ ಮಹದೇವ ತಳವಾರ ಮನವಿ ಮಾಡಿದ್ದಾರೆ. ಹೆಂಡತಿಯಿಂದಲೇ ಕೊಲೆಯಾಗಿದ್ದ ಬೆಳಗಾವಿ ಅಂಬೇಡ್ಕರ ನಗರ ನಿವಾಸಿ ರಮೇಶ ಕಾಂಬಳೆ ಪರ ಹೋರಾಟ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ, ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಇದೇ ವೇಳೆ ಎಲ್ಲಾ ಪತ್ನಿಯರು ನಿಮ್ಮ ಇಚ್ಚೆಯಂತೆ ಬಾಳಲು ಹಕ್ಕಿದೆ. ಆದರೆ ಹತ್ಯೆ ಮಾತ್ರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ನಿಮಗೆ ಅಕ್ರಮ ಸಂಬಂಧವೋ, ಬೇರೆ ಸಂಬಂಧವೋ ಇರಲಿ. ಅವರ ಜೊತೆ ಬಾಳಬೇಕು ಎಂದರೆ ಓಡಿ ಹೋಗಿ. ಇದರ ಬದಲು ಕಟ್ಟಿಕೊಂಡ ಗಂಡನ ಹತ್ಯೆ ಮಾಡಬೇಡಿ. ಗಂಡನಿಗೆ ಡಿವೋರ್ಸ್ ಕೊಟ್ಟು ನಿಮ್ಮ ದಾರಿ ನೋಡಿಕೊಳ್ಳಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಎಂದು ಮಹದೇವ ತಳವಾರ ಮನವಿ ಮಾಡಿದ್ದಾರೆ. ಇದೇ ವೇಳೆ ಕೊಲೆ ಮಾಡಿದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಬೇಕು. ಇದರಿಂದ ಬರವು ಹಣದಲ್ಲಿ ರಮೇಶನ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರವೇ ಮನವಿ ಮಾಡಿದೆ. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಕರವೇ ಹಾಗೂ ಮೃತ ರಮೇಶ್ ಕುಟುಂಬಸ್ಥರು ಮನವಿ ಮಾಡಿದ್ದಾರೆ. 

ಬೆಂಗಳೂರು: ಡ್ರಗ್ಸ್‌ ಪೆಡ್ಲರ್‌ ಜತೆ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಹಲ್ಲೆ, ಪತ್ನಿ ವಿರುದ್ಧ ಚಿತ್ರ ನಿರ್ಮಾಪಕನ ದೂರು

ರಮೇಶ್ ಕೊಲೆ ಪ್ರಕರಣದಲ್ಲಿ ಪತ್ನಿ ಸಂಧ್ಯಾ ಕಾಂಬಳೆ, ಆಕೆಯ ಪ್ರೇಯಸಿ ಬಾಳು ಬಿರಂಜೆ ಅರೆಸ್ಟ್ ಮಾಡಲಾಗಿದೆ. ರಮೇಶ್ ಹಾಗೂ ಸಂಧ್ಯಾ ಸುಂದರ ಸಂಸಾರದ ನಡುವ ಬಾಳು ಬಿರಂಜೆ ಪ್ರವೇಶ ಮಾಡಿದ್ದಾನೆ. ಇದೀಗ ಇವರ ಸಂಬಂಧ, ರಮೇಶ್ ಕೊಲೆ ಮಾಡುವಷ್ಟರ ಮಟ್ಟಿಗೆ ತಲುಪಿದ್ದು ದುರಂತ. ಸಂಧ್ಯಾನೊಂದಿಗೆ ಪರಿಚಯ ಮಾಡಿಕೊಂಡ ಬಾಳು, ದಿನದಿಂದ ದಿನಕ್ಕೆ ಆಕೆಗೆ ಹತ್ತಿರವಾಗುತ್ತಿದ್ದ. ಕೊನೆಗೆ ಸಂಧ್ಯಾ ಹಾಗೂ ಬಾಳು ನಡುವೆ ಪ್ರೇಮಾಂಕುರವಾಗಿ, ಅನೈತಿಕ ಸಂಬಂಧಕ್ಕೂ ತಿರುಗಿಕೊಂಡಿತ್ತು. ಈ ವಿಷಯ ಕೆಲ ದಿನಗಳ ನಂತರ ಪತಿ ರಮೇಶ್‌ ಕಾಂಬಳೆ ಗಮನಕ್ಕೆ ಬರುತ್ತಿದ್ದಂತೆ, ಪತ್ನಿ ಸಂಧ್ಯಾನನ್ನು ವಿಚಾರಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗ ಪತ್ನಿ ಸಂಧ್ಯಾ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದರಿಂದ ಅಸಮಾಧಾನಗೊಂಡ ರಮೇಶ, ಸಂಧ್ಯಾನೊಂದಿಗೆ ಜಗಳವಾಡಿದ್ದಾನೆ ಎನ್ನಲಾಗಿದೆ.

ಬೆಂಗಳೂರು: ಹಲ್ಲೆ ನಡೆಸಿ ನೇಪಾಳಕ್ಕೆ ಪರಾರಿ ಆಗಿದ್ದ ಉದ್ಯಮಿ ಪುತ್ರನ ಸೆರೆ

ಸಂಧ್ಯಾ ಪ್ರೀಯಕರ ಬಾಳು ಬಿರಂಜೆಯೊಂದಿಗೆ ಚರ್ಚಿಸಿ ಪತಿಯ ಹತ್ಯೆಗೆ ಸಂಚು ರೂಪಿಸಿದ್ದಾಳೆ. ಇಬ್ಬರು ರೂಪಿಸಿದ ಸಂಚಿನಂತೆ ರಮೇಶ್‌ ಕಾಂಬಳೆನನ್ನು ಹತ್ಯೆ ಮಾಡಿ, ಕಳೆದ ಮೂರು ತಿಂಗಳ ಹಿಂದಯೇ ನನ್ನ ಪತಿ ಕಾಣೆಯಾಗಿದ್ದಾನೆ ಎಂದು ಸಂಧ್ಯಾ ಕಾಂಬಳೆ ನಗರದ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯಕ್ಕೆ ಇಳಿದಿದ್ದ ಖಾಕಿ ಪಡೆ, ಪತ್ನಿಯನ್ನು ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕ್ಷಣಕ್ಕೊಂದು ಹೇಳಿಕೆ ನೀಡಿರುವುದರಿಂದ ಅನುಮಾನಗೊಂಡ ಪೊಲೀಸರು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ರಮೇಶ ಕಾಂಬಳೆ ಕಾಣೆಯಾಗಿಲ್ಲ, ಹೊರತು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
 

Latest Videos
Follow Us:
Download App:
  • android
  • ios