Asianet Suvarna News Asianet Suvarna News

ಟೊಯೊಟಾ ವೆಲ್‌ಫೈರ್ ಕಾರು ಬಿಡುಗಡೆ ದಿನಾಂಕ ಬಹಿರಂಗ!

MPV ಕಾರು ವಿಭಾಗದಲ್ಲಿ ಈಗಾಗಲೇ ಕಿಯಾ ಮೋಟಾರ್ಸ್ ಕಾರ್ನಿವಲ್ ಕಾರು ಬಿಡುಗಡೆ ಮಾಡಿ ಎಲ್ಲರ ಗಮನಸೆಳೆದಿದೆ. ಐಷರಾಮಿ  MPV ಕಾರು ಹೆಗ್ಗಳಿಕೆಗೆ ಕಿಯಾ ಕಾರ್ನಿವಲ್ ಪಾತ್ರವಾಗಿದೆ. ಇದೀಗ ಇದಕ್ಕಿಂತ ಐಷಾರಾಮಿ  MPV ಕಾರನ್ನು ಟೊಯೊಟಾ ಬಿಡುಗಡೆ ಮಾಡುತ್ತಿದೆ. ನೂತನ ಕಾರಿನ ವಿವರ ಇಲ್ಲಿದೆ. 

Toyota Velfire mpv car india lunch date revealed
Author
Bengaluru, First Published Feb 12, 2020, 7:14 PM IST

ನವದೆಹಲಿ(ಫೆ.12): ಟೊಯೊಟಾ ಬಿಡುಗಡೆ  ಮಾಡುತ್ತಿರುವ ನೂತನ ವೆಲ್‌ಫೈರ್  MPV ಕಾರು, ಭಾರತದಲ್ಲಿ ಮರ್ಸಿಡೀಸ್ ಬೆಂಝ್ ವಿ ಕ್ಲಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಸ್ಪೊರ್ಟಿಯರ್, ಆಲ್ಫ್ರಡ್ ವರ್ಶನ  MPV ಕಾರು ಫೆಬ್ರವರಿ 26ಕ್ಕೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಚೀನಾದ ಕಡಿಮೆ ಬೆಲೆಯ ಬರ್ಡ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣ!

ನೂತನ ವೆಲ್‌ಫೈರ್  MPV ಕಾರು ಹೈಬ್ರಿಡ್ ಎಂಜಿನ್ ಹಾಗೂ ಪ್ರಿಮಿಯಂ ಫೀಚರ್ಸ್ ಹೊಂದಿದೆ. 2.5 ಲೀಟರ್, 4 ಸಿಲಿಂಡರ್, ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರುವ ವೆಲ್‌ಫೈರ್ ಕಾರು  178bhp ಪವರ್ ಹಾಗೂ 235Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

ಇದನ್ನೂ ಓದಿ: ಇನೋವಾ ಕಾರಿಗೆ ಪ್ರತಿಸ್ಪರ್ಧಿ; ಕಿಯಾ ಕಾರ್ನಿವಲ್ ಲಾಂಚ್!

CVT ಟ್ರಾನ್ಸ್‌ಮಿಶನ್ ಹಾಗೂ ಆಲ್ ವೀಲ್ಹ್ ಡ್ರೈವ್ ಸಿಸ್ಟಮ್ ಆಯ್ಕೆ ಹೊಂದಿದೆ. ಸುರಕ್ಷತೆಗೂ ವೆಲ್‌ಫೈರ್ ಕಾರು ಹೆಚ್ಚು ಗಮನಹರಿಸಿದೆ. 7 ಏರ್‌ಬ್ಯಾಗ್, ABS , EBD, EBS ಸೇರಿದಂತೆ ಎಲ್ಲಾ ಸೇಫ್ಟಿ ಫೀಚರ್ಸ್ ಈ ಕಾರಿನಲ್ಲಿ ಲಭ್ಯವಿದೆ.

ಮಲ್ಟಿಜೋನ್ ಕ್ಲೈಮೇಟ್ ಕಂಟ್ರೋಲ್, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮೂಡ್ ಲೈಟಿಂಗ್, ಟ್ವಿನ ಸನ್‌ರೂಫ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ. 

Follow Us:
Download App:
  • android
  • ios