Asianet Suvarna News Asianet Suvarna News

ಡಿ.17ಕ್ಕೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಅನಾವರಣ; ಬೆಂಗಳೂರಿನಲ್ಲಿ ಲಭ್ಯ!

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಟಾಟಾ ಮೋಟಾರ್ ಸಜ್ಜಾಗಿದೆ. ಹಲವು ವಿಶೇಷತೆ ಹೊಂದಿರುವ ನೂತನ ಕಾರು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾತ್ರ ಲಭ್ಯವಿದೆ. 

Tata nexon electric car initial launch in selected cities
Author
Bengaluru, First Published Dec 7, 2019, 6:54 PM IST

ಮುಂಬೈ(ಡಿ.07): ಟಾಟಾ ಮೋಟಾರ್ಸ್ ಕಂಪನಿ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಕಾರು ನೆಕ್ಸಾನ್ ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್ 17 ರಂದ ಮುಂಬೈನಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಅನಾವರಣಗೊಳ್ಳಲಿದೆ. 2020ರ ಆರಂಭದಲ್ಲೇ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಆರಂಭಿಕ ಹಂತದಲ್ಲಿ ಪ್ರಮುಖ ನಗರಗಳಲ್ಲಿ ಟಾಟಾ ನೆಕ್ಸಾನ್ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 21 ಸಾವಿರಕ್ಕೆ ಬುಕ್ ಮಾಡಿ ಟಾಟಾ ಅಲ್ಟ್ರೋಜ್ ಕಾರು!

ಬೆಂಗಳೂರು, ಮುಂಬೈ, ಥಾಣೆ, ನವಿ ಮುಂಬೈ, ಪುಣೆ, ಬೆಂಗಳೂರು, ಅಹಮ್ಮದಾಬಾದ್, ನವ ದೆಹಲಿ, ಕೋಲ್ಕತಾ ಹಾಗೂ ಚೆನ್ನೈ ನಗರಗಳಲ್ಲಿ ಟಾಟಾ ನೆಕ್ಸಾನ್ ಕಾರು ಬಿಡುಗಡೆಯಾಗಲಿದೆ. ಈ ನಗರದ ಡೀಲರ್‌ಗಳಿಗೆ ಮೊದಲ ಹಂತದ ತರಬೇತಿ ನಡೆಯುತ್ತಿದೆ. ಚಾರ್ಜಿಂಗ್, ನೆಕ್ಸಾನ್ ಎಲೆಕ್ಟ್ರಿಕ್ ಕುರಿತ ಗ್ರಾಹಕರ ಪ್ರಶ್ನೆಗಳು ಹಾಗೂ ಉತ್ತರಗಳು, ತಾಂತ್ರಿಕ ಮಾಹಿತಿ ಸೇರಿದಂತೆ ಹಲವು ತರಬೇತಿ ಕಾರ್ಯಗಾರಗಳು ನಡೆಯುತ್ತಿವೆ.

ಇದನ್ನೂ ಓದಿ: 2020ರಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರು ಪಟ್ಟಿ!

ಬೆಂಗಳೂರು ಸೇರಿದೆಂತೆ ಪ್ರಮುಖ ನಗರಗಳಲ್ಲಿ ಕಾರು ಚಾರ್ಜಿಂಗ್ ಸ್ಟೇಶನ್ ಅಳವಡಿಕೆಗೆ ಯೋಜನೆ ಸಿದ್ದವಾಗಿದೆ. ಸದ್ಯ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಖರೀದಿಯಲ್ಲಿ ಚಾರ್ಜರ್ ನೀಡಲಿದೆ. ಈ ಚಾರ್ಜರನ್ನು ಮನೆ ಅಥವಾ ಕಚೇರಿಗಳಲ್ಲಿ ಸುಲಭವಾಗಿ ಅಳವಡಿಸಿ ಕಾರು ಚಾರ್ಜ್ ಮಾಡಬಹುದು.

ಮೈಲೇಜ್ ರೇಂಜ್, ಗರಿಷ್ಠಸುರಕ್ಷತೆ ಸೇರಿದಂತೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆ ಹೊಂದಿದೆ.  ಒಂದು ಬಾರಿ ಚಾರ್ಜ್ ಮಾಡಿದರೆ 300 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಬ್ಯಾಟರಿ ವಾರೆಂಟಿ 8 ವರ್ಷ ನೀಡಲಾಗಿದೆ. ಕಾರಿನ ಬೆಲೆ 15 ರಿಂದ 17 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

Follow Us:
Download App:
  • android
  • ios