Asianet Suvarna News Asianet Suvarna News

ಯಮಹಾದ ಸ್ಟ್ರೀಟ್‌ ಫೈಟರ್‌ FZ 25 ಬೈಕ್ ಬಿಡುಗಡೆ ಸಿದ್ಧತೆ!

BS6 ಎಮಿಶನ್ ಎಂಜಿನ್ ಹೊಂದಿರುವ ಯಮಾಹಾ ಸ್ಟ್ರೀಟ್‌ ಫೈಟರ್‌ FZ 25 ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. BS6 ಎಂಜಿನ್ ಜೊತೆಗೆ ಹಲವು ಬದಲಾವಣೆ ಹಾಗೂ ಹೆಚ್ಚುವರಿ ಫೀಚರ್ಸ್ ಸೇರಿಕೊಂಡಿದೆ. ನೂತನ ಬೈಕ್ ವಿವರ ಇಲ್ಲಿದೆ 

Street fighter yamaha fz25 bs6 engine bike ready to lunch
Author
Bengaluru, First Published Feb 13, 2020, 3:52 PM IST

ನವದೆಹಲಿ(ಫೆ.13): ಹೆಚ್ಚು ಆಕರ್ಷಕ, LED ಹೆಡ್‌ಲ್ಯಾಂಪ್ಸ್, ಫ್ಯುಯೆಲ್ ಟ್ಯಾಂಕ್ ಗಾತ್ರ ಹಾಗೂ ಹೊಸ ಬಣ್ಣಗಳಲ್ಲಿ ಯಮಹಾದ ಸ್ಟ್ರೀಟ್‌ ಫೈಟರ್‌ FZ 25 ಬೈಕ್ ಬಿಡುಗಡೆ ರೆಡಿಯಾದಿದೆ. BS6 ಎಂಜಿನ್ ಬೈಕ್, ಸದ್ಯ ಮಾರುಕಟ್ಟೆಯಲ್ಲಿರುವ BS4 ಎಂಜಿನ್ ಬೈಕ್‌ಗಿಂತ 10,000 ರೂಪಾಯಿ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.  

ಇದನ್ನೂ ಓದಿ: ಬಜಾಜ್ ಪಲ್ಸರ್ 150 BS6 ಬೈಕ್ ಬಿಡುಗಡೆ; ಬೆಲೆ ವಿಶೇಷತೆ ಇಲ್ಲಿದೆ!

ಸದ್ಯ ಮಾರುಕಟ್ಟೆಯಲ್ಲಿರುವ BS4 ಎಂಜಿನ್ ಬೈಕ್ 1.36 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ನೂತನ ಬೈಕ್ ಬೆಲೆ 1.46 ಲಕ್ಷ ರೂಪಾಯಿ(ಎಕ್ಸ್ ಶೋ ರೂ)ಬೆಲೆ ಎನ್ನಲಾಗುತ್ತಿದೆ.  249 ಸಿಸಿ ಸಾಮರ್ಥ್ಯದ ಏರ್‌ಕೂಲ್ಡ್‌ ಯಮಹಾ ಸ್ಟ್ರೀಟ್‌ ಫೈಟರ್‌ ಎಫ್‌ ಝಡ್‌ 25 ಮಾರುಕಟ್ಟೆಗೆ ಬರಲು ಸಿದ್ಧತೆ ನಡೆಸಿದೆ. ‘ಮಿಂಚಿನ ವೇಗದ ಬೈಕ್‌’ ಅನ್ನೋ ಟ್ಯಾಗ್‌ಲೈನ್‌ನಲ್ಲಿ ‘ದಿ ಕಾಲ್‌ ಆಫ್‌ ದಿ ಬ್ಲೂ’ ಸರಣಿಯಲ್ಲಿ ಎಫ್‌ಝಡ್‌ 25 ಅನ್ನು ಪರಿಚಯಿಸಿದೆ. 

ಇದನ್ನೂ ಓದಿ: Auto expo 2020: ಸುಜುಕಿ ಕಟಾನಾಗೆ ಬೆಸ್ಟ್ ಬೈಕ್ ಪ್ರಶಸ್ತಿ!

153 ಕೆಜಿ ತೂಕದ ಹಗುರ ವಿಭಾಗಕ್ಕೆ ಸೇರಿದ ಬೈಕ್‌ ಇದಾಗಿದ್ದು, 4 ಸ್ಟ್ರೋಕ್, ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಹೊಂದಿದೆ. ದಿನವಿಡೀ ಬೆಳಗುವ ಎಲ್‌ಇಡಿ ಹೆಡ್‌ಲೈಟ್‌ಗಳು ಡಿಫರೆಂಟ್‌ ಲುಕ್‌ನಲ್ಲಿವೆ. ಈ ಬೈಕ್‌ ಎಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರಲಿದೆ. ಇದು ಆಫೀಸ್‌ ಡ್ರೈವ್‌ ಜೊತೆಗೆ ಸಾಹಸ ಚಟುವಟಿಕೆಗಳಿಗೆ ಒತ್ತು ಕೊಡುವ ಬೈಕ್‌ ಅಂತ ಕಂಪೆನಿ ಹೇಳಿದೆ. 

Follow Us:
Download App:
  • android
  • ios