Asianet Suvarna News Asianet Suvarna News

ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ಚಳಿ ಬಿಡಿಸಿದ ಮಹಿಳೆ!

ಪೊಲೀಸ್, ಸಿಸಿಟಿವಿ, ದುಬಾರಿ ದಂಡ ಏನೇ ಇದ್ದರೂ ರಸ್ತೆ ನಿಯಮ ಪಾಲನೆ ಭಾರತೀಯರಿಗೆ ಆಗಿ ಬರುವುದಿಲ್ಲ. ರಸ್ತೆ ಸಾಕಾಗಲ್ಲ ಅಂದಾಗ ಪಾದಾಚಾರಿ ರಸ್ತೆ ಮೇಲೆ ಸವಾರಿ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇದೀಗ ಫುಟ್‌ಪಾತ್ ಮೇಲೆ ಸಾಗುವ ವಾಹನ ಸವಾರರಿಗೆ ಸೂಪರ್ ವುಮೆನ್ ದುಸ್ವಪ್ನವಾಗಿ ಕಾಡುತ್ತಿದ್ದಾರೆ.

Senior citizen teaching civic sense and traffic rules for footpath riders in Pune
Author
Bengaluru, First Published Feb 22, 2020, 8:09 PM IST

ಪುಣೆ(ಫೆ.22): ಟ್ರಾಫಿಕ್ ಜಾಮ್, ಸಿಗ್ನಲ್ ಬಿದ್ದಿದೆ ಎಂದು ವಾಹನಗಳನ್ನು ಫುಟ್‌ಪಾತ್ ಮೇಲೆ ಓಡಿಸುವಂತಿಲ್ಲ. ಇದು ನಿಯಮ ಉಲ್ಲಂಘನೆ. ಆದರೆ ಭಾರತದಲ್ಲಿ ಪಾದಾಚಾರಿ ರಸ್ತೆ ಮೇಲೆ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚು. ಹೀಗೆ ಪಾದಾಚಾರಿ ರಸ್ತೆ ಮೇಲೆ ಸವಾರಿ ಮಾಡುವವರಿಗೆ ಮಹಿಳೆಯೊಬ್ಬರು ಚಳಿ ಬಿಡಿಸಿದ್ದಾರೆ.

ಇದನ್ನೂ ಓದಿ: ನಾಯಿಯನ್ನು ಬೈಕ್‌ನಲ್ಲಿ ಕರೆದೊಯ್ದ ಮಾಲೀಕನಿಗೆ ಬಿತ್ತು ದುಬಾರಿ ದಂಡ!

ಪುಣೆಯ ಕ್ಯಾನಲ್ ರೋಡ್ ಬಳಿಯ ಫುಟ್‌ಪಾತ್ ಮೇಲೆ ದ್ವಿಚಕ್ರ ವಾಹನ ಸವಾರರು ನಿಯಮ ಉಲ್ಲಂಘಿಸಿ ಸವಾರಿ ಮಾಡುತ್ತಾರೆ.  ಈ ಬೈಕ್ ಸವಾರರ ಹಾವಳಿಗೆ ಇಲ್ಲಿನ ನಿವಾಸಿ ನಿರ್ಮಲಾ ಗೋಖಲೆ ಬೇಸತ್ತು ಹೋಗಿದ್ದಾರೆ. ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುವಾಗ ಹಲವು ಬಾರಿ ಬೈಕ್ ಸವಾರರಿಂದ ತೊಂದರೆ ಅನುಭವಿಸಿದ್ದಾರೆ. 

ಇದನ್ನೂ ಓದಿ:ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಫೋನ್ ಮೂಲಕ ಮಾತನಾಡಿದರೂ ಬೀಳುತ್ತೆ ಫೈನ್!

ಇದಕ್ಕೆ ಮುಕ್ತಿ ಹಾಡಲು ಪೊಲೀಸರ ಬಳಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಿರ್ಮಲಾ ಗೋಖಲೆ ಖುದ್ದು ಫುಟ್‌ಪಾತ್ ಮೇಲೆ ನಿಂತು ದ್ವಿಚಕ್ರ ವಾಹನ ಸವಾರರ ಮೇಲೆ ಸವಾರಿ ಮಾಡಲು ಮುಂದಾಗಿದ್ದಾರೆ. ಫುಟ್‌ಪಾತ್ ಮೇಲೆ ಬರುವ ವಾಹನ ಸಾವರರಿಗೆ ಅಡ್ಡಲಾಗಿ ನಿಂತು, ಮುಂದೆ ಹೋಗಬೇಕಾದನೆ ನನ್ನ ಮೇಲಿಂದ ಹೋಗಿ ಎಂದು ಗದರಿಸಿದ್ದಾರೆ.

 

ಹಿರಿಯ ನಾಗರಿಕರಾಗಿವ ನಿರ್ಮಲಾ ಗೋಖಲೆ ವಾಹನ ಸವಾರರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ನಿರ್ಮಲಾ ಗೋಖಲೆ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಪುಣೆ ಪೊಲೀಸರು ಶ್ಲಾಘಿಸಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.


 

Follow Us:
Download App:
  • android
  • ios