ದೆಹಲಿ(ಆ.24): ಜಮ್ಮ ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿದ ಬಿಜೆಪಿ ಮಂದಹಾಸ ಬೀರಿತ್ತು. ಆದರೆ ಇತ್ತ ಬಿಜೆಪಿಯ ಪಾಳಯದ ಹಿರಿಯ ರಾಜಕಾರಣಿಗಳಿಬ್ಬರು ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ಮರಾಜ್ ಆಗಸ್ಟ್ 6 ರಂದು ನಿಧನರಾದರೆ, ಇತ್ತ ಜೇಟ್ಲಿ ಆಗಸ್ಟ್ 9 ರಂದು ಆಸ್ಪತ್ರೆ ದಾಖಲಾದರು. ಜೇಟ್ಲಿ ಆರೋಗ್ಯ ಕ್ಷೀಣಿಸುತ್ತಾ ಹೋಗಿತ್ತು. ಇಂದು(ಆ.24) ರಂದು ಜೇಟ್ಲಿ ಕೊನೆಯುಸಿರೆಳೆದಿದ್ದಾರೆ. ಜೇಟ್ಲಿ ಸಾವಿನ ಸುದ್ದಿ ಹರಡುತ್ತಿದ್ದಂತೆ, ಹಲವು ಕುತೂಹಲಕಾರಿ ಅಂಶಗಳು ಕೂಡ ಬೆಳಕಿಗೆ ಬಂದಿದೆ. ಜೇಟ್ಲಿ ಬದುಕಿನ ಸೀಕ್ರೆಟ್, ತಮ್ಮ ಕಾರಿನ ನಂಬರ್ ಪ್ಲೇಟ್‌ನಲ್ಲಿ ಮೊದಲೇ ದಾಖಲಾಗಿತ್ತಾ ಅನ್ನೋ ಕುತೂಹಲ ಇದೀಗ ಎಲ್ಲರನ್ನು ಕಾಡುತ್ತಿದೆ.

ಇದನ್ನೂ ಓದಿ:  ವಿತ್ತ ವಿದ್ಯಾ ಪಾರಂಗತ: ಬಿಜೆಪಿಯ 'ಅರುಣ' ಅಸ್ತಂಗತ!

ಅರುಣ್ ಜೇಟ್ಲಿಗೂ ಸಂಖ್ಯೆ 6ಕ್ಕೂ ಅವಿನಾಭ ಸಂಬಂಧವಿದೆ. ನಂಬರ್ 6 ಜೇಟ್ಲಿ ಲಕ್ಕಿ ನಂಬರ್.   ಜೇಟ್ಲಿ ತಮ್ಮ ಎಲ್ಲಾ ಕಾರುಗಳ ನಂಬರ್ 6666 ಆಗಿತ್ತು.  ಯಾವುದೇ ವಾಹನ ಖರೀದಿಸಿದರೂ ರಿಜಿಸ್ಟ್ರೇಶನ್ ನಂಬರ್ ಮಾತ್ರ ಬದಲಾಗುತ್ತಿರಲಿಲ್ಲ. ಎಲ್ಲವೂ 6666. ಜೇಟ್ಲಿ ಬಳಿ 1.02 ಕೋಟಿ ಮೌಲ್ಯದ ಪೋರ್ಶೆ, 78.89 ಲಕ್ಷ ರೂಪಾಯಿ ಮೌಲ್ಯದ ಮರ್ಸಡೀಸ್ ಬೆಂಝ್, 85.57 ಲಕ್ಷ ರೂಪಾಯಿ ಮೌಲ್ಯದ BMW, 20.44 ಲಕ್ಷ ರೂಪಾಯಿ ಮೌಲ್ಯದ ಹೊಂಡಾ ಅಕಾರ್ಡ್, 23.28 ಲಕ್ಷ ರೂಪಾಯಿ ಮೌಲ್ಯದ ಟೊಯೊಟಾ ಫಾರ್ಚುನರ್ ಕಾರಿದೆ. ಈ ಎಲ್ಲಾ ಕಾರುಗಳ ನಂಬರ್ ಕೊನೆಗೊಳ್ಳುವುದು 6666. 

ಇದನ್ನೂ ಓದಿ: ಬುದ್ಧಿವಂತ ವಕೀಲ ಅರುಣ್ ಜೇಟ್ಲಿ ಬಗ್ಗೆ ನಿಮಗೆ ತಿಳಿಯದ ಇಂಟರೆಸ್ಟಿಂಗ್ ವಿಚಾರಗಳು

ಅರುಣ್ ಜೇಟ್ಲಿ ಕಾರಿನ ನಂಬರ್:
ಮರ್ಸಡೀಸ್ ಬೆಂಝ್ (DL3 CCM-6666)
BMW (ICL-6666)
ಹೊಂಡಾ ಅಕಾರ್ಡ್ (DLICM-6666)
ಟೊಯೊಟಾ ಫಾರ್ಚುನರ್ (DL10CA-6666)
ಪೊರ್ಶೆ (DL8CW=6660)

ಇದನ್ನೂ ಓದಿ: ಟ್ರಬಲ್ ಶೂಟರ್‌ನ್ನು ಕಳೆದುಕೊಂಡ ಮೋದಿ ಸರ್ಕಾರ!

6 ನಂಬರ್ ಇವರ ಜೀವನವನ್ನು ಅದೆಷ್ಟು ಆವರಿಸಿಬಿಟ್ಟಿತ್ತು ಅಂದರೆ ಜೇಟ್ಲಿ ತಮ್ಮ 66ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸಾವಿನಲ್ಲೂ ಜೇಟ್ಲಿ ತಮ್ಮ 6 ನಂಬರ್ ಬಿಟ್ಟುಕೊಟ್ಟಿಲ್ಲ. ಇನ್ನು ನಿಧನದ ದಿನಾಂಕ ಆಗಸ್ಟ್ 24. ಈ  ತಾರೀಖು ಕೂಡಿಸಿದಾಗ ಅಂದರೆ 2+4 ಬರುವ ಉತ್ತರ ಮತ್ತೆ 6. 

ನ್ಯುಮರಾಲಜಿ ಎನು ಹೇಳುತ್ತೆ?
ನ್ಯುಮರಾಲಜಿ ಪ್ರಕಾರ ಸಂಖ್ಯೆ 6 ಎಲ್ಲಾ ವಿಭಜಗಳ ಮೊತ್ತವಾಗಿದೆ. ನಂಬರ್ 6 ಸಂಖ್ಯೆ ಜೀವನದಲ್ಲಿ ಸಾಮರಸ್ಯ ಹಾಗೂ ಸಮತೋಲನ ನೀಡಲಿದೆ. ಇಷ್ಟೇ ಅಲ್ಲ ಈ ನಂಬರ್ ಇಷ್ಟಪಡುವವರು  ಸುರಕ್ಷತೆ, ಸುಭಿಕ್ಷತೆ, ಜವಾಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದವರಾಗಿರುತ್ತಾರೆ. ಮನೆ, ಕುಟುಂಬ ಸದಸ್ಯರು, ಆತ್ಮೀಯರು, ಗೆಳೆಯರು ಸೇರಿದಂತೆ ಎಲ್ಲರ ಬಗ್ಗೆ ಕಾಳಜಿ ಹೊಂದಿದವರಾಗಿರುತ್ತಾರೆ. ಕುಟುಂಬದ ಸಣ್ಣ ಸಣ್ಣ ವಿಚಾರಗಳನ್ನೂ ಖುಷಿಯಿಂದ ಅನುಭವಿಸುತ್ತಾರೆ. 

ಅರುಣ್ ಜೇಟ್ಲಿ ತಮ್ಮ ಜೀವನದ್ದುದ್ದಕ್ಕೂ ಶಿಸ್ತು, ಸಂಯಮ ಪಾಲಿಸಿದ್ದಾರೆ. ತಮ್ಮ ಕಾರಿನ ನಂಬರ್, ಜೀವನದ ನಂಬರ್‌ನಲ್ಲೂ ಶಿಸ್ತು ಉಳಿಸಿದ್ದಾರೆ.  ಆದರೆ ಅರುಣ್ ಜೇಟ್ಲಿ ನಿಧನದಿಂದ 6666 ಕಾರಿನ ನಂಬರ್ ಇದೀಗ ಏಕಾಂಗಿಯಾಗಿದೆ.