Asianet Suvarna News Asianet Suvarna News

ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ, ನೆಕ್ಸಾನ್ ಕಾರಿಗಿಂತ ಅಧಿಕ!

ಗ್ರೇಟರ್ ನೋಯ್ಡಾ ಅಟೋ ಎಕ್ಸ್ಪೋದಲ್ಲಿ ಮಹೀಂದ್ರ ತನ್ನ  XUV300 ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿತ್ತು. ಇದೀಗ ನೂತನ ಕಾರಿನ ಮೈಲೇಜ್ ಬಹಿರಂಗವಾಗಿದೆ. ವಿಶೇಷ ಅಂದರೆ ಮಹೀಂದ್ರ  XUV300 ಎಲೆಕ್ಟ್ರಿಕ್ ಕಾರಿನ ಮೈಲೇಜ್, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗಿಂತ ಅಧಿಕವಾಗಿದೆ.

Mahindra xuv300 electric car mileage reveals better than tata nexon
Author
Bengaluru, First Published Feb 28, 2020, 8:02 PM IST

ನವದೆಹಲಿ(ಫೆ.28): 2020ರ ಆಟೋ ಎಕ್ಸ್ಪೋದಲ್ಲಿ ಹಲವು ಎಲೆಕ್ಟ್ರಿಕ್ ಕಾರು ಅನಾವರಣಗೊಂಡರೆ, ಕೆಲ ಕಾರುಗಳು ಬಿಡುಗಡೆಯಾಗಿದೆ. ಭಾರತದಲ್ಲಿ ಮೊದಲು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಹೆಗ್ಗಳಿಕೆ ಮಹೀಂದ್ರ ಪಾಲಿಗಿದೆ. ರೇವಾ,  E2O, E2O ಪ್ಲಸ್, ಇ ವೆರಿಟೋ, ಆಟೊಮ್, KUV100, ಟ್ರಿಯೋ ಆಟೋರಿಕ್ಷಾ ಎಲೆಕ್ಟ್ರಿಕ್ ವಾಹನ ಯಶಸ್ವಿಯಾಗಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: 21 ಸಾವಿರಕ್ಕೆ ಬುಕ್ ಮಾಡಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!

ಈ ಬಾರಿಯ ಆಟೋ ಎಕ್ಸ್ಪೋದಲ್ಲಿ ಮಹೀಂದ್ರ   XUV300 ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿತ್ತು. ಇದೀಗ ಈ ಕಾರಿನ ಮೈಲೇಜ್ ಬಹಿರಂಗವಾಗಿದೆ. ಸಂಪೂರ್ಣ ಚಾರ್ಜ್‌ಗೆ ಮಹೀಂದ್ರ  XUV300 ಎಲೆಕ್ಟ್ರಿಕ್ ಕಾರು 370 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. 

ಇದನ್ನೂ ಓದಿ: ಬೆಲೆ 6 ಲಕ್ಷ, ಚೀನಾದ R1 ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣ!

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಸಂಪೂರ್ಣ ಚಾರ್ಜ್‌ಗೆ 312 ಕಿ.ಮೀ ಮೈಲೇಜ್ ನೀಡಲಿದೆ. ಮಹೀಂದ್ರ ಇದೀಗ 350 ರಿಂದ 500 ಕಿ.ಮೀ ಮೈಲೇಜ್ ನೀಡಬಲ್ಲ ತಂತ್ರಜ್ಞಾನ ಅಭಿವೃದ್ದಿ ಪಡಿಸುತ್ತಿದೆ. ಈ ಮೂಲಕ ಗರಿಷ್ಠ ಮೈಲೇಜ್ ಮೂಲಕ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ. 


 

Follow Us:
Download App:
  • android
  • ios