Asianet Suvarna News Asianet Suvarna News

ಸತತ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ರದ್ದು!

ಸತತ ಟ್ರಾಫಿಕ್ ನಿಯಮ ಉಲ್ಲಂಘಿಸಿ, ಕೊನೆಗೆ ದಂಡ ಕಟ್ಟಿದರೆ ಮುಗೀತು ಎಂದುಕೊಂಡಿದ್ದರೆ ಇನ್ಮುಂದೆ ಸಾಧ್ಯವಿಲ್ಲ. ಕಾರಣ ಸತತ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ರದ್ದಾಗಲಿದೆ. 

Licence will cancel those who violate traffic rule frequent in Bihar
Author
Bengaluru, First Published Dec 8, 2019, 7:16 PM IST

ಪಾಟ್ನಾ(ಡಿ.08):  ದುಬಾರಿ ದಂಡ ಹಾಕಿದರೂ ಟ್ರಾಫಿಕ್ ನಿಯಮ ಉಲ್ಲಂಘನೆ ಗಣನೀಯವಾಗಿ ಇಳಿದಿಲ್ಲ. ರಾಂಗ್ ಸೈಡ್, ಸಿಂಗ್ನಲ್ ಜಂಪ್ ಸೇರಿದಂತೆ ಹಲವು ಟ್ರಾಫಿಕ್ ನಿಯಮ ಉಲ್ಲಂಘನೆ ವರದಿಯಾಗುತ್ತಲೇ ಇದೆ. ಒಂದೆರಡು ಬಾರಿ ಒಕೆ, ಪ್ರತಿ ಬಾರಿ ನಿಯಮ ಉಲ್ಲಂಘಿಸುವವ ಲೈಸೆನ್ಸ್ ರದ್ದು ಮಾಡಲು ಸಾರಿಗೆ ಇಲಾಖೆ ಹೊಸ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ಫೈನ್; ನಡುರಸ್ತೆಯಲ್ಲಿ ಬೈಕ್ ಪುಡಿ ಪುಡಿ!.

ನೂತನ ನಿಯಮ ಬಿಹಾರದಲ್ಲಿ ಜಾರಿಯಾಗಿದೆ. ಸತತ ನಿಯಮ ಉಲ್ಲಂಘಿಸುವವರ ವಿರುದ್ದ ಕಟ್ಟು ನಿಟ್ಟಿನ ಕ್ರಮಕ್ಕೆ ಬಿಹಾರ ಮುಂದಾಗಿದೆ. ಸತತವಾಗಿ ನಿಯಮ ಉಲ್ಲಂಘಿಸಿ ದಂಡ ಪಾವತಿ ಮಾಡಿದರೂ ಇನ್ಮುಂದೆ ಸಂಕಷ್ಟ ತಪ್ಪಿದ್ದಲ್ಲ. ಕಾರಣ  ಸತತ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ರದ್ದು ಮಾಡಲು ಬಿಹಾರ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ಟ್ರಾಫಿಕ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋದವರಿಗೆ 15 ಸಾವಿರ ದಂಡ !

ಬಿಹಾರದಲ್ಲಿ ಕಟ್ಟು ನಿಟ್ಟಾಗಿ ನಿಯಮ ಪಾಲಿಸಲು ಜಿಲ್ಲಾ ಸಾರಿಗೆ ಇಲಾಖೆ ಹಾಗೂ ಪೊಲೀಸರಿಗೆ ಬಿಹಾರ ಸಾರಿಗೆ ಇಲಾಖೆ ಕಾರ್ಯದರ್ಶಿ ಸಂಜಯ್ ಕುಮಾರ್ ಅಗರ್ವಾಲ್ ಆದೇಶ ನೀಡಿದ್ದಾರೆ. 2018ರ ವರದಿ ಪ್ರಕಾರ ಬಿಹಾರದಲ್ಲಿ ಹೆಲ್ಮೆಟ್ ಹಾಕದ 2,600 ಮಂದಿ ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸವಾರರ ಸುರಕ್ಷತೆಯ ದೃಷ್ಟಿಯಿಂದ ಸತತ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಫಾಸ್ಟ್‌ಟ್ಯಾಗ್‌ ಅಳವಡಿಕೆಗೆ ಗಡುವು ಡಿ.15ಕ್ಕೆ ವಿಸ್ತರಣೆ!

ನಿಯಮ ಉಲ್ಲಂಘಿಸುವವರಿಂದ ಸರಿಯಾಗಿ ನಿಯಮ ಪಾಲನೆ ಮಾಡೋ ಇತರ ಸವಾರರು ಕೂಡ ನೋವು ಅನುಭವಿಸುಬೇಕಾಗುತ್ತೆ. ಸಿಂಗ್ನಲ್ ಜಂಪ್ ಮಾಡಿದಾಗ ಅಪಘಾತಗಳಾಗುವ ಸಾಧ್ಯತೆ ಹೆಚ್ಚು. ನಿಯಮ ಉಲ್ಲಂಘನೆ ಮಾಡುವವರು ಇತರರ ಜೀವನದ ಮೇಲೂ ಚೆಲ್ಲಾಟ ಆಡುತ್ತಾರೆ. ಇದನ್ನು ತಪ್ಪಿಸಲು ಲೈಸೆನ್ಸ್ ರದ್ದು ಹಾಗೂ ಇತರ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಗರ್ವಾಲ್ ಹೇಳಿದ್ದಾರೆ.

ಬಿಹಾರದಲ್ಲಿ ಜಾರಿಗೆ ತಂದಿರುವ ಈ ನಿಯಮ ನಿರೀಕ್ಷಿತ ಫಲಿತಾಂಶ ನೀಡಿದರೆ ಶೀಘ್ರದಲ್ಲೇ ದೇಶಾದ್ಯಂತ ಜಾರಿಯಾಗುವ ಸಾಧ್ಯತೆಗಳಿವೆ. 

Follow Us:
Download App:
  • android
  • ios