ಬೆಂಗಳೂರು: ಭಾರತದ ಮೊದಲ ಎಲೆಕ್ಟ್ರಿಕ್‌ ಟಿಪ್ಪರ್‌ ಶೀಘ್ರವೇ ರಸ್ತೆಗೆ

ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ಅನುಸಾರವಾಗಿ ಸಮ್ಮತಿ ಪ್ರಮಾಣಪತ್ರ ಪಡೆದುಕೊಂಡಿರುವ ಈ ಟಿಪ್ಪರ್‌ ರಸ್ತೆಗಿಳಿಯಲು ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆದಿದೆ.

Indias First Electric Tipper will hit the Road Soon grg

ಬೆಂಗಳೂರು(ಮಾ.02):  ಮೇಘಾ ಎಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್‌ (ಎಂಇಐಎಲ್‌) ಸಮೂಹ ಕಂಪನಿಯಾದ ಒಲೆಕ್ಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌ನ (ಒಜಿಎಲ್‌) 6*4 ಹೆವಿ ಡ್ಯೂಟಿ ಎಲೆಕ್ಟ್ರಿಕ್‌ ಟಿಪ್ಪರ್‌ ಶೀಘ್ರವೇ ರಸ್ತೆಗಿಳಿಯಲಿದೆ. ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ಅನುಸಾರವಾಗಿ ಸಮ್ಮತಿ ಪ್ರಮಾಣಪತ್ರ ಪಡೆದುಕೊಂಡಿರುವ ಈ ಟಿಪ್ಪರ್‌ ರಸ್ತೆಗಿಳಿಯಲು ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆದಿದೆ.

ಒಲೆಕ್ಟ್ರಾ ತಯಾರಿಸಿದ ದೇಶದ ಮೊದಲ ಇ-ಟಿಪ್ಪರ್‌ ಪರ್ವತ ಪ್ರದೇಶ, ಗಣಿಗಾರಿಕೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪರೀಕ್ಷಿಸಲಾಗಿದೆ. ಬಳಿಕವಷ್ಟೇ ದೇಶದ ಆಟೋ ಮೋಬೈಲ್‌ ನಿಯಂತ್ರಣ ಸಂಸ್ಥೆ ಒಲೆಕ್ಟ್ರಾ ಭಾರತೀಯ ರಸ್ತೆಗಳಿಗೆ ಅನುಗುಣವಾಗಿದೆ ಎಂದು ದೃಢಪಡಿಸಿ ಹೋಮೊಲೈಸೇಶನ್‌ ಪ್ರಮಾಣಪತ್ರ ನೀಡಿದೆ. ಈ ಪ್ರಮಾಣಪತ್ರ ನೆದರ್‌ಲ್ಯಾಂಡ್‌, ಸಿಂಗಾಪುರ್‌, ಆಸ್ಪ್ರೇಲಿಯಾ ಸೇರಿ ಇತರೆ ದೇಶಗಳಿಂದಲೂ ಮಾನ್ಯತೆ ಪಡೆದಿದೆ.

ಎಲೆಕ್ಟ್ರಿಕ್‌, ಹೈಡ್ರೋಜನ್‌ ವಾಹನಗಳ ಮೂಲಕ ಇಂಧನದ ಬೇಡಿಕೆ ತಗ್ಗುತ್ತದೆ: ಬೆಂಗಳೂರಲ್ಲಿ ಮೋದಿ ಮಾತು

ಈ ಅತ್ಯಾಧುನಿಕ ಇ-ಟಿಪ್ಪರ್‌ ದೇಶದ ಮೊದಲ ಪ್ರಮಾಣೀಕೃತ ಹೆವಿ ಡ್ಯೂಟಿ ಎಲೆಕ್ಟ್ರಿಕ್‌ ಟಿಪ್ಪರ್‌ ಆಗಿದೆ ಎಂದು ಒಲೆಕ್ಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಪ್ರದೀಪ್‌ ಹರ್ಷ ವ್ಯಕ್ತ ಪಡಿಸಿದ್ದಾರೆ.

Latest Videos
Follow Us:
Download App:
  • android
  • ios