Asianet Suvarna News Asianet Suvarna News

ವಿಶ್ವದ ಅತೀ ದೊಡ್ಡ ಜಿನೆವಾ ಮೋಟಾರು ಶೋ ಕ್ಯಾನ್ಸಲ್!

ವಿಶ್ವದ ಅತೀ ದೊಡ್ಡ ಹಾಗೂ ಪ್ರತಿಷ್ಠಿತ ಮೋಟಾರು ಶೋಗೆ ಎಲ್ಲಾ ತಯಾರಿ ನಡೆದಿತ್ತು. ಮಾರ್ಚ್ 5 ರಿಂದ ಆರಂಭವಾಗಬೇಕಿದ್ದ ಮೋಟಾರು ಶೋ 4 ದಿನ ಇರುವಾಗಲೇ ರದ್ದಾಗಿದೆ. 115 ವರ್ಷಗಳ ಇತಿಹಾಸಿರುವ ಈ ಮಾಟಾರು ಶೋ ರದ್ದಾಗಲು ಕಾರಣವೇನು?

Geneva Motor Show 2020 canceled due to coronavirus
Author
Bengaluru, First Published Feb 28, 2020, 9:08 PM IST

ಜಿನೆವಾ(ಫೆ.28): ಆಟೋಮೊಬೈಲ್ ಕಂಪನಿಗಳಿಗೆ ಕಾರು ಬೈಕ್ ಸೇರಿದಂತೆ ತಮ್ಮ ವಾಹನಗಳ ಪ್ರದರ್ಶನ, ಅನಾವರಣ, ಬಿಡುಗಡೆಗೆ ಜಿನೆವಾ ಮೋಟಾರು ಶೋ ಹೆಸರುವಾಸಿಯಾಗಿದೆ. ಕಾನ್ಸೆಪ್ಟ್ ಕಾರುಗಳ  ಮೂಲಕ ಪ್ರತಿ ಆಟೋಮೊಬೈಲ್ ಕಂಪನಿ ಜಿನೆವಾ ಮೋಟಾರು ಶೋನಲ್ಲಿ ಪಾಲ್ಗೊಳ್ಳುತ್ತವೆ. ಆದರೆ ಮಾರ್ಚ್ 5 ರಿಂದ ನಡೆಯಬೇಕಿತ್ತು 90ನೇ ಜಿನೆವಾ ಮೋಟಾರು ಶೋ ರದ್ದಾಗಿದೆ.

ಇದನ್ನೂ ಓದಿ: ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ, ನೆಕ್ಸಾನ್ ಕಾರಿಗಿಂತ ಅಧಿಕ!

1905ರಲ್ಲಿ ಆರಂಭವಾದ ಜಿನೆವಾ ಮೋಟಾರು ಶೋ ಪ್ರತಿ ವರ್ಷ ಯಾವುದೇ ಸಮಸ್ಯೆ ಇಲ್ಲದೆ ನಡೆದುಕೊಂಡು ಬರುತ್ತಿದೆ. ಆದರೆ 2020ರ ಮೋಟಾರು ಶೋ ಕೊರೋನಾ ವೈರಸ್‌ನಿಂದ ರದ್ದಾಗಿದೆ. ಕೊರೋನಾ ವೈರಸ್‌ನಿಂದ ಸ್ವಿಟ್ಜರ್‌ಲೆಂಡ್ ಸರ್ಕಾರ 1,000 ಹಾಗೂ ಸಾವಿರಕ್ಕಿಂತ ಹೆಚ್ಚು ಜನ ಸೇರುವ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಇದೀಗ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ಜಿನೆವಾ ಮೋಟಾರು ಶೋಗೂ ಬ್ರೇಕ್ ಹಾಕಿದೆ.

ಇದನ್ನೂ ಓದಿ: ಹೊಸ ನಿಯಮದ ಪರಿಣಾಮ; 2.5 ಲಕ್ಷ ರೂ ಡಿಸ್ಕೌಂಟ್ ಆಫರ್ ಘೋಷಿಸಿದ ಹ್ಯುಂಡೈ

ಕೊರೋನಾ ವೈರಸ್ ವ್ಯಾಪಿಸುತ್ತಿರುವ ಕಾರಣ ಮುಂಜಾಗ್ರತೆಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಡಚಣೆಗೆ ಕ್ಷಮಿಸಿ ಎಂದು ಸ್ವಿಸ್ ಸರ್ಕಾರ ಹೇಳಿದೆ. ಮೋಟಾರು ಶೋ ರದ್ದಾದ ಕಾರಣ ಕೋಟಿ ಕೋಟಿ ರೂಪಾಯಿ ನಷ್ಟವಾಗಿದೆ. ಇತ್ತ ಆಟೋಮೊಬೈಲ್ ಕಂಪನಿಗಳಿಗೂ ದೊಡ್ಡ ಹೊಡೆತ ಬಿದ್ದಿದೆ. ಈಗಾಗಲೇ ಕೊರೋನಾ ವೈರಸ್‌ನಿಂದ ಹಲವು ಆಟೋಮೊಬೈಲ್ ಘಟಕಗಳು ಸ್ಥಗಿತಗೊಂಡಿದೆ. ಇದೀಗ ಮೋಟಾರು ಶೋ ರದ್ದಾಗಿರುವುದು ಕಂಪನಿಗಳ ಚಿಂತೆ ಹೆಚ್ಚಿಸಿದೆ.

Follow Us:
Download App:
  • android
  • ios