Asianet Suvarna News Asianet Suvarna News

ದಕ್ಷಿಣ ಡೇರ್ ರ‍್ಯಾಲಿ: ಗೌರವ್ ಗಿಲ್ ಮಡಿಲಿಗೆ ಚಾಂಪಿಯನ್ ಪ್ರಶಸ್ತಿ!

ಬೆಂಗಳೂರಿನಲ್ಲಿ ಆರಂಭಗೊಂಡ ದಕ್ಷಿಣ ಭಾರತದ  ಖ್ಯಾತ ದಕ್ಷಿಣ್ ಡೇರ್ ರ‍್ಯಾಲಿಯಲ್ಲಿ ಗೌರವ್ ಗಿಲ್ ಚಾಂಪಿಯನ್ ಆಗಿದ್ದಾರೆ. ರೋಚಕ ಮೋಟಾರ್‌ಸ್ಪೋರ್ಟ್ ರ‍್ಯಾಲಿಯ ವಿವರ ಇಲ್ಲಿದೆ. 

Gaurav Gill wins 11th Edition of Dakshin Dare Rally
Author
Bengaluru, First Published Aug 2, 2019, 12:28 PM IST

ಚಿತ್ರದುರ್ಗ(ಜು.02): ಪ್ರತಿಷ್ಠಿತ ದಕ್ಷಿಣ ಡೇರ್ ಮೋಟಾರ್‌ಸ್ಪೋರ್ಟ್ ರ‍್ಯಾಲಿಗೆ ತೆರೆ ಬಿದ್ದಿದೆ. ಬೆಂಗಳೂರಿನಲ್ಲಿ ಆರಂಭಗೊಂಡ ರ‍್ಯಾಲಿ, ಉತ್ತರ ಕರ್ನಾಟಕ ಸುಂದರ ತಾಣಗಳ ಮೂಲಕ ಚಿತ್ರದುರ್ಗದಲ್ಲಿ ಅಂತ್ಯಗೊಂಡಿತು. ರೋಚಕ ಹಾಗೂ ಸಾಹಸಮಯದ ರ‍್ಯಾಲಿಯಲ್ಲಿ ಕಳೆದ ವರ್ಷ ಚಾಂಪಿಯನ್ ಆಗಿದ್ದ, ಭಾರತದ  ಖ್ಯಾತ ಚಾಲಕ ಗೌರವ್ ಗಿಲ್ ಈ ಬಾರಿಯೂ ಚಾಂಪಿಯನ್ ಪಟ್ಟ ಅಂಲಕರಿಸಿದ್ದಾರೆ. 

ಇದನ್ನೂ ಓದಿ: ಸುಜುಕಿ ಡರ್ಟ್ OFF-Road ಬೈಕ್ ಬಿಡುಗಡೆ - ಕವಾಸಕಿಗೆ ಪೈಪೋಟಿ!

2000 ಕಿ.ಮೀ ದೂರದ ಈ ರ್ಯಾಲಿಗೆ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿತ್ತು. ಚಾಲಕನ ವೇಗ, ಕೌಶಲ್ಯ ಹಾಗೂ ಧರ್ಯವನ್ನು ಪರೀಕ್ಷೆಗೆ ಒಳಪಡಿಸುವ ಈ ರ್ಯಾಲಿಯಲ್ಲಿ ಮಹೀಂದ್ರ ರೇಸಿಂಗ್ ತಂಡದ ಗೌರವ್ ಗಿಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 

ಕಾರು, ಬೈಕ್ ಸೇರಿದಂತೆ 3 ವಿಭಾಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಒರ್ವ ಮಹಿಳಾ ಸ್ಪರ್ಧಿ ಸೇರಿದಂತೆ 100 ಕ್ಕೂ ಹೆಚ್ಚು ಮೋಟಾರ್‌ಸ್ಪೋರ್ಟ್ ಉತ್ಸಾಹಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ದ ಹಾರ್ಜಿ ಮೋಟಾರ್ಸ್ ಸಂಸ್ತೆಯ ಸಂಜಯ್ ಹಾಗೂ ವಿಶ್ವಾಸ ಕೂಡ  ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಭಾರತೀಯ ಮಹಿಳಾ ರೇಸ್ ಲೋಕಕ್ಕೆ ಅಧಿಪತಿ ಈ ಕನ್ನಡತಿ

ಜೈದಾಸ್ ಮೆನನ್ ನೇತೃತ್ವದ ಮೋಟಾರ್‌ಸ್ಪೋರ್ಟ್.ಇಂಕ್ ದಕ್ಷಿಣ ಡೇರ್ ರ್ಯಾಲಿ ಆಯೋಜಿಸುತ್ತಿದೆ.  ರ್ಯಾಲಿಯಲ್ಲಿ ಸ್ಪರ್ಧಿಗಳಿಗೆ ಸೂಕ್ತ ಸುರಕ್ಷತಾ ಕ್ರಮ ಹಾಗೂ ಭದ್ರತೆ ಒದಗಿಸಲಾಗಿತ್ತು.

Follow Us:
Download App:
  • android
  • ios