Asianet Suvarna News Asianet Suvarna News

ಭಾರತದಲ್ಲಿ ಡುಕಾಟಿ BS6 ಮಲ್ಟಿಸ್ಟ್ರಾಡಾ 950S ಬೈಕ್ ಬಿಡುಗಡೆ

ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ರೂ.15.49 ಲಕ್ಷಗಳಿಗೆ ಬಿಡುಗಡೆ(ಭಾರತದಾದ್ಯಂತ ಎಕ್ಸ್-ಶೋರೂಂ) ಎಲ್ಲ ಡುಕಾಟಿ ಡೀಲರ್‍ಶಿಪ್‍ಗಳಲ್ಲಿ ಬುಕಿಂಗ್‍ಗಳು ಈಗ ತೆರೆದಿವೆ ಮತ್ತು ಡೆಲಿವರಿಗಳು ನವೆಂಬರ್ 2ನೇ ವಾರದಿಂದ ಪ್ರಾರಂಭವಾಗುತ್ತವೆ. 
 

Ducati launches its first BS6 Multistrada 950 S in India ckm
Author
Bengaluru, First Published Nov 3, 2020, 5:49 PM IST

ಬೆಂಗಳೂರು(ನ.03):  ಐಷಾರಾಮಿ ಮೋಟಾರ್‌ಸೈಕಲ್ ಬ್ರಾಂಡ್ ಡುಕಾಟಿ ತನ್ನ ಹೊಚ್ಚಹೊಸ ಮಲ್ಟಿಸ್ಟ್ರಾಡಾ 950 S ಬಿಡುಗಡೆ ಮಾಡಿದೆ.  ನೂತನ ಬೈಕ್ ಬೆಲೆ 15.49 ಲಕ್ಷ ರೂಪಾಯಿ (ಭಾರತದಾದ್ಯಂತ ಎಕ್ಸ್-ಶೋರೂಂ).   ಡುಕಾಟಿಯ ಪೋರ್ಟ್‍ಫೋಲಿಯೊದಲ್ಲಿ ಅತ್ಯಂತ ಸಣ್ಣ `ಮಲ್ಟಿಬೈಕ್’ ಅನ್ನು ಮಲ್ಟಿಸ್ಟ್ರಾಡಾದ ಎಲ್ಲ ಉತ್ಸಾಹ ನೀಡಲು ವಿನ್ಯಾಸಗೊಳಿಸಲಾಗಿದ್ದು ಹೆಚ್ಚು ಲಭ್ಯವಿರುವ, ವಿಸ್ತಾರ ಪ್ಯಾಕೇಜ್ ಆಗಿದ್ದು ಪ್ರತಿನಿತ್ಯದ ರೈಡ್ ಅನ್ನು ಅಸಾಧಾರಣ ಪ್ರಯಾಣವಾಗಿಸುತ್ತದೆ. 

ಭಾರತದಲ್ಲಿ ಡ್ಯುಕಾಟಿ ಪನಿಗೇಲ್ v2 ಬೈಕ್ ಬುಕಿಂಗ್ ಆರಂಭ, ಕೇವಲ 1 ಲಕ್ಷ ರೂ!

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ 950 ವಸ್ತುಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಅದಕ್ಕಾಗಿ ಅದನ್ನು ಸುರಕ್ಷಿತ ಮತ್ತು ಮತ್ತಷ್ಟು ಆನಂದಿಸಬಹುದಾದಂತೆ ಸುಧಾರಣೆಗಳ ಸರಣಿ ನಡೆಸಲಾಗಿದೆ. ಮೊಟ್ಟಮೊದಲ ಬಾರಿಗೆ ಸೂಪರ್-ಟೆಕ್ನಲಾಜಿಕಲ್ ಎಸ್ ಆವೃತ್ತಿಯು ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಹೊಂದಿದ್ದು ಇದು ಮತ್ತಷ್ಟು ಹೆಚ್ಚಿನ ಸಂಖ್ಯೆಯ ಮೋಟಾರ್‍ಸೈಕ್ಲಿಸ್ಟ್‍ಗಳಿಗೆ ಪೂರ್ಣ ಸಂತೃಪ್ತಿ ನೀಡುವಂತೆ ಲಭ್ಯವಿದೆ.

Ducati launches its first BS6 Multistrada 950 S in India ckm

ಡುಕಾಟಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ-75 ಕಿ.ಮೀ ಮೈಲೇಜ್! 

“ಮಲ್ಟಿಸ್ಟ್ರಾಡಾ 950 ಎಸ್ ದೊಡ್ಡ ಮಲ್ಟಿಸ್ಟ್ರಾಡಾಗಳ ವಿನ್ಯಾಸದ ಸಂಯೋಜನೆಯಾಗಿದ್ದು ಇದು ಟಿಪಿಕಲ್ ಮಲ್ಟಿಸ್ಟ್ರಾಡಾ ಆಕಾರಗಳ ಅದೇ ಸಂದರ್ಭಕ್ಕೆ ಕಿರಿದಾದ ಆದರೆ ಹಾಗೆ ಕಾಣದೇ ಇರುವ ಬೈಕ್ ಸೃಷ್ಟಿಸಲು ಸಾಧ್ಯವಾಯಿತು. ಮಲ್ಟಿಸ್ಟ್ರಾಡಾ ಕುಟುಂಬ ಭಾರತದಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದು ಅದಕ್ಕೆ ದೂರಪ್ರಯಾಣದ ಪ್ರವಾಸ ಜನಪ್ರಿಯವಾಗಿದ್ದು ಕಾರಣ ಮತ್ತು ಹೊಸ ಮಲ್ಟಿಸ್ಟ್ರಾಡಾ 950 ಎಸ್ ಹಿಂದಿನ ನಮ್ಮ ಆಲೋಚನೆ ಕ್ರೀಡಾ ಪ್ರವಾಸವನ್ನು ಹೆಚ್ಚು ಲಭ್ಯವಾಗುವ ಹಾಗೂ ರೈಡರ್‍ಗಳಿಗೆ ಭಾರತ ಒದಗಿಸುವ ಸುಂದರ ಪ್ರದೇಶ ಆವಿಷ್ಕರಿಸಲು ಅವಕಾಶ ಕಲ್ಪಿಸುವುದಾಗಿದೆ ಎಂದು ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ ಹೇಳಿದ್ದಾರೆ. 

ಈ ಮೋಟಾರ್‌ಸೈಕಲ್ 937 CM3 ಟ್ವಿನ್ ಸಿಲಿಂಡರ್ ಟೆಸ್ಟಾಟ್ರೆಟ್ಟಾ 11 ಎಂಜಿನ್ ಹೊಂದಿದ್ದು ಇದು 9000 RPMನಲ್ಲಿ 113 HP ನೀಡುತ್ತದೆ ಮತ್ತು 7,750 RPMನಲ್ಲಿ 96NM ಟಾರ್ಕ್ ನೀಡುತ್ತದೆ. ಈ ಲಿಕ್ವಿಡ್-ಕೂಲ್ಡ್ ಎಂಜಿನ್ ಪ್ರತಿ ಸಿಲಿಂಡರ್‌ಗೆ ನಾಲ್ಕು ವೇಲ್ವ್ ಮತ್ತು ಬೋರ್ ಹಾಗೂ ಸ್ಟ್ರೋಕ್ ಅಳತೆಗಳು ಕ್ರಮವಾಗಿ 94 ಮತ್ತು 67.5 MM ಇವೆ. ಮಲ್ಟಿಸ್ಟ್ರಾಡಾ 950 ತನ್ನ 53MM ಸಿಲಿಂಡ್ರಿಕಲ್ ಸೆಕ್ಷನ್ ಥ್ರಾಟಲ್ ಬಾಡೀಸ್ ಮೂಲಕ ಇಂಧನ ಹೀರಿಕೊಳ್ಳುತ್ತದೆ ಇದು ಸುಧಾರಿತ ರೈಡ್-ಬೈ-ವೈರ್ ಸಿಸ್ಟಂನಿಂದ ನಿಯಂತ್ರಣಗೊಳ್ಳುತ್ತದೆ. ಸೆಲ್ಫ್-ಸರ್ವೊ ವೆಟ್ ಸ್ಲಿಪ್ಪರ್ ಕ್ಲಚ್ ಈಗ ಲೆಸ್ ಆನ್-ಲಿವರ್ ಪ್ರಯತ್ನದ ಮೂಲಕ ನಿರ್ವಹಿಸಬಹುದು ಇದಕ್ಕೆ ಹೊಸ ಹೈಡ್ರಾಲಿಕ್ ಕಂಟ್ರೋಲಿಂಗ್ ಸಿಸ್ಟಂ ನೆರವಾಗುತ್ತದೆ. ಮಲ್ಟಿಸ್ಟ್ರಾಡಾ 950 ಎಂಜಿನ್ 15,000 ಕಿ.ಮೀ. ನಿರ್ವಹಣೆಯ ಮಧ್ಯಂತರಗಳನ್ನು ಹೊಂದಿದ್ದು ವಾಲ್ವ್ ಕ್ಲಿಯರೆನ್ಸ್ ಇನ್ಸ್‍ಪೆಕ್ಷನ್ ಅನ್ನು ಪ್ರತಿ 30,000 ಕಿ.ಮೀ.ಗಳಿಗೆ ಇರುತ್ತದೆ. 

Ducati launches its first BS6 Multistrada 950 S in India ckm

ಸ್ವಚ್ಛ ಮೇಲ್ಮೈಗಳು, ಟಾಟ್ ಲೈನ್ಸ್ ಮತ್ತು ಕಾಂಟ್ರಾಸ್ಟ್ ಮುಂಬದಿ ಹಾಗೂ ಹಿಂಬದಿಯ ವಾಲ್ಯೂಮ್‍ಗಳು ಮಲ್ಟಿಸ್ಟ್ರಾಡಾದ ಹೆಗ್ಗುರುತುಗಳಾಗಿದ್ದರೂ ಈ ಬಾರಿ ಅವು ಗುಣಮಟ್ಟ ಮತ್ತು ಸ್ಟೈಲ್‍ನಲ್ಲಿ ಹೊಸ ಎತ್ತರಗಳನ್ನು ಮುಟ್ಟಿವೆ. ಅತ್ಯಾಧುನಿಕ ಮಲ್ಟಿಸ್ಟ್ರಾಡಾ 950 ಹೊಸ ಸೈಡ್ ವಿಂಗ್ಸ್ ಹೊಂದಿದ್ದು ಇದನ್ನು ಮಲ್ಟಿಸ್ಟ್ರಾಡಾ 1260ನಿಂದ ಪಡೆಯಲಾಗಿದ್ದು ಇದು ಮುಂಬದಿಯ ಕೊನೆಯನ್ನು ಮತ್ತಷ್ಟು ಸ್ವಚ್ಛ ಹಾಗೂ ಸ್ಟ್ರೀಮ್‍ಲೈನ್ ಮಾಡಿದೆ.
 
ಮಲ್ಟಿಸ್ಟ್ರಾಡಾ 950, ಮಲ್ಟಿಸ್ಟ್ರಾಡಾ 1260 ಮತ್ತು ಮಲ್ಟಿಸ್ಟ್ರಾಡಾ 1260 ಎಂಡುರೊ ವಿನ್ಯಾಸದ ವಿಶೇಷತೆಗಳನ್ನು ತೆಗೆದುಕೊಂಡಿದ್ದು ಪರಿಪೂರ್ಣಗೊಳಿಸಿದ್ದು ಎರಡರಿಂದಲೂ `ಲೈಟೆಸ್ಟ್’ ಅಂಶಗಳನ್ನು ತೆಗೆದುಕೊಂಡಿದೆ. ಮುಂಬದಿಯ ಕೊನೆಗೆ ವಿಶಿಷ್ಟವಾದ ಸಮಾನಾಂತರವಾಗಿ ವಿಸ್ತರಿಸಿದ ಹೆಡ್‍ಲೈಟ್, `ಬೀಕ್’ ಅಡ್ಜಸ್ಟಬಲ್ ಸ್ಕ್ರೀನ್, ಸೈಡ್ `ವಿಂಗ್ಸ್’ ಮತ್ತು ಟ್ಯಾಂಕ್ ಅನ್ನು ಮಲ್ಟಿಸ್ಟ್ರಾಡಾ 1260 ಮೂಲಕ ಪಡೆದಿದೆ. ರೈಡರ್‍ನ ಸೀಟು, ಪ್ಯಾಸೆಂಜರ್ ಸೀಟು, ರಿಯರ್ ಗ್ರ್ಯಾಬ್ ರೈಲ್, ಎಕ್ಸಾಸ್ಟ್ ವಿನ್ಯಾಸ ಮತ್ತು ಸ್ವಿಂಗ್‍ಆರ್ಮ್ ಮತ್ತು ವ್ಹೀಲ್ ಗಾತ್ರವು ಮಲ್ಟಿಸ್ಟ್ರಾಡಾ 1260ಎಂಡುರೊ ಮೂಲಕ ಸ್ಫೂರ್ತಿ ಪಡೆಯಲಾಗಿದೆ. ಈ ಮಿಶ್ರಣವು ಕ್ಲಾಸಿಕ್ ಮಲ್ಟಿಸ್ಟ್ರಾಡಾದೊಂದಿಗೆ ಬೈಕ್ ಉತ್ಪಾದಿಸಿದ್ದು ನೋಡಲು ಮಾತ್ರವಲ್ಲದೆ ಬಹಳ ಕಿರಿದಾಗಿದೆ. ಈ ಮಲ್ಟಿಸ್ಟ್ರಾಡಾ 950 ಎಸ್ ಹೊಸ, ಹಗುರ ಅಲ್ಯುಮಿನಿಯಂ ಅಲಾಯ್ ವ್ಹೀಲ್ಸ್ ಹೊಂದಿದೆ.

Ducati launches its first BS6 Multistrada 950 S in India ckm 
ಟ್ಯೂಬ್ಯುಲರ್ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಹೊಸ, ಹಗುರ ಡಬಲ್-ಸೈಡೆಡ್ ಅಲ್ಯುಮಿನಿಯಂ ಸ್ವಿಂಗ್‍ಆರ್ಮ್‍ಗೆ ಸಂಪರ್ಕ ನೀಡಿದ್ದು ಇದು ಹೊಸ ಮಲ್ಟಿಸ್ಟ್ರಾಡಾ 950 ಅದ್ಭುತ ಡೈನಮಿಕ್ ಕಾರ್ಯಕ್ಷಮತೆ ನೀಡುತ್ತದೆ. 19” ಫ್ರಂಟ್ ವ್ಹೀಲ್ ಯಾವುದೇ ರಸ್ತೆಯ ಮೇಲೆ ಅದು ಡಾಂಬರಿನದಾಗಿರಲಿ ಇಲ್ಲದೇ ಇರಲಿ, ನಗರದಲ್ಲಿ ಅಥವಾ ಹಳ್ಳಿಗಳ ದಾರಿಯಾಗಿರಲಿ ಅನುಕೂಲ ಮತ್ತು ವಿನೋದ ನೀಡುತ್ತದೆ. ಸಸ್ಪೆನ್ಷನ್ ಉದಾರ 170ಎಂಎಂ ಮೂಲಕ ಅನುಕೂಲದ ಮಟ್ಟವನ್ನು ಎತ್ತರದಲ್ಲಿರಿಸುತ್ತದೆ ಅಲ್ಲದೆ ಅಸಾಧಾರಣ ಚುರುಕುತನ ನೀಡುತ್ತದೆ. ಅಲ್ಲದೆ 20-ಲೀಟರ್ ಟ್ಯಾಂಕ್ ಇಂಧನ ತುಂಬಿಕೊಳ್ಳುವ ನಿಲುಗಡೆಗಳ ಕಿಲೋಮೀಟರ್‍ಗಳನ್ನು ಹೆಚ್ಚಿಸುತ್ತದೆ. 

ದೂರ ಪ್ರಯಾಣವನ್ನು ದೃಷ್ಟಿಯಲ್ಲಿರಿಸಿಕೊಂಡು ನಿರ್ಮಿಸಲಾದ ಮಲ್ಟಿಸ್ಟ್ರಾಡಾ 950ಯನ್ನು ಪೂರ್ಣ ಭಾರ ಹೊತ್ತಿರುವಾಗಲೂ ಅಸಾಧಾರಣ ಅನುಕೂಲ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ದಕ್ಷತಾಶಾಸ್ತ್ರದ “ತ್ರಿಕೋನ”ನೀಡುತ್ತಿದ್ದು ಇದು ರೈಡರ್ ಮತ್ತು ಪ್ಯಾಸೆಂಜರ್ ಇಬ್ಬರಿಗೂ ಅನುಕೂಲ ಮತ್ತು ನಿಯಂತ್ರಣ ನೀಡುತ್ತದೆ. ಮಲ್ಟಿಸ್ಟ್ರಾಡಾ 950 ಫ್ಲೈ ಸ್ಕ್ರೀನ್ 60 ಎಂಎಂ ಒಳಗಡೆ ಒಂದು ಕೈನಲ್ಲಿ ಉದ್ದದ ಹೊಂದಾಣಿಕೆ ಸಾಧ್ಯವಾಗಿಸುತ್ತದೆ; ಅಕ್ಸೆಸರಿ ಲೈನ್ ಕೂಡಾ ಲೋಯರ್ ಸ್ಕ್ರೀನ್‍ನಲ್ಲಿ ಒಳಗೊಂಡಿದೆ. ಎರಡು 12ವಿ ಪವರ್ ಸಾಕೆಟ್‍ಗಳಿವೆ, ಒಂದು ಪ್ಯಾಸೆಂಜರ್ ಸೀಟಿನ ತಳದಲ್ಲಿದೆ, ಇನ್ನೊಂದು ಡ್ಯಾಶ್‍ಬೋರ್ಡ್ ಜೋóನ್‍ನಲ್ಲಿದೆ. ಇವುಗಳನ್ನು ಥರ್ಮಲ್ ಕ್ಲಾಥಿಂಗ್, ಇಂಟರ್‍ಕಾಮ್‍ಗಳು ಅಥವಾ ಮೊಬೈಲ್ ಫೋನ್ ಚಾರ್ಜರ್‍ಗಳಾಗಿ ಬಳಸಬಹುದು. ಗರ್ಮಿನ್ ಸ್ಯಾಟ್-ನವ್ ಡುಕಾಟಿ ಪರ್ಫಾರ್ಮೆನ್ಸ್ ಅಕ್ಸೆಸರಿಯಾಗಿ ಲಭ್ಯವಿದ್ದು ಇದನ್ನು ಡೆಡಿಕೇಟೆಡ್ ಕನೆಕ್ಟರ್‍ನಿಂದ ಸನ್ನದ್ಧಗೊಳಿಸಲಾಗಿದೆ. ಸೀಟಿನ ಕೆಳಗಡೆ ಯುಎಸ್‍ಬಿ ಪೋರ್ಟ್ ಕೂಡಾ ಇದ್ದು ಅದನ್ನು ಸ್ಮಾರ್ಟ್‍ಫೋನ್‍ಗಳ ಚಾರ್ಜ್ ಮಾಡಲು ಬಳಸಬಹುದು. 

ಎಲೆಕ್ಟ್ರಾನಿಕ್ಸ್ ಪ್ಯಾಕೇಜ್‍ನಲ್ಲಿ ಈಗ ಬಾಷ್ ಕಾರ್ನರಿಂಗ್ ABS, ಡುಕಾಟಿ ಟ್ರಾಕ್ಷನ್ ಕಂಟ್ರೋಲ್(DTC), ವೆಹಿಕಲ್ ಹೋಲ್ಡ್ ಕಂಟ್ರೋಲ್(VHC) ಮತ್ತು ಪ್ರತಿಮಾತ್ಮಕ ಸೆಮಿ-ಆಕ್ಟಿವ್ ಡುಕಾಟಿ ಸ್ಕೈಹುಕ್ ಸಸ್ಪೆನ್ಷನ್(DSS) ಇದು ಸತತವಾಗಿ ಫೋರ್ಕ್ ಮತ್ತು ಶಾಕ್ ಅಬ್ಸಾರ್ಬರ್‍ಗಳನ್ನು ಹೊಂದಿಸುತ್ತದೆ, 48 ಎಂಎಂ ವ್ಯಾಸದ ಫೋರ್ಕ್ ಮತ್ತು ರಿಯರ್ ಶಾಕ್(ಎರಡೂ ಎಲೆಕ್ಟ್ರಾನಿಕ್), ಡುಕಾಟಿ ಕ್ವಿಕ್ ಶಿಫ್ಟ್ ಅಪ್/ಡೌನ್(DQS), ಡುಕಾಟಿ ಕಾರ್ನರಿಂಗ್ ಲೈಟ್ಸ್(DCL) ಮತ್ತು ಕ್ರೂಸ್ ಕಂಟ್ರೋಲ್ ಆಧರಿಸಿರುತ್ತದೆ. ಮಲ್ಟಿಸ್ಟ್ರಾಡಾ 950 S ಈಗ ಡುಕಾಟಿ ಮಲ್ಟಿಸ್ಟ್ರಾಡಾ ಸಿಸ್ಟಂ(DMS)ನೊಂದಿಗೆ ಜೋಡಿಸಬಹುದು ಮತ್ತು ಫುಲ್-LED ಹೆಡ್‍ಲೈಟ್, 5” ಕಲರ್ TFT ಡಿಸ್ಪ್ಲೇ, ಹ್ಯಾಂಡ್ಸ್-ಫ್ರೀ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ಬ್ಯಾಕ್‍ಲಿಟ್ ಸ್ವಿಚ್‍ಗೇರ್ ಕಂಟ್ರೋಲ್‍ಗಳನ್ನು ಹೊಂದಿದೆ. 

15.49 ಲಕ್ಷ ರೂಪಾಯಿ ಬೆಲೆ ಹೊಂದಿರುವ ಮಲ್ಟಿಸ್ಟ್ರಾಡಾ 950 S ಈಗ ಡುಕಾಟಿ ರೆಡ್ ಬಣ್ಣದಲ್ಲೂ ಲಭ್ಯವಿದೆ. ದೆಹಲಿ-ಎನ್‍ಸಿಆರ್, ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್, ಬೆಂಗಳೂರು, ಕೊಚ್ಚಿ, ಕೊಲ್ಕತಾ ಮತ್ತು ಚೆನ್ನೈಗಳ ಎಲ್ಲ ಡುಕಾಟಿ ಡೀಲರ್‍ಶಿಪ್‍ಗಳಲ್ಲಿ ಬುಕಿಂಗ್‍ಗಳು ಈಗ ತೆರೆದಿವೆ ಮತ್ತು ನವೆಂಬರ್ 2ನೇ ವಾರದಿಂದ ಡೆಲಿವರಿಗಳು ಪ್ರಾರಂಭವಾಗುತ್ತವೆ. 

Follow Us:
Download App:
  • android
  • ios