ನವದೆಹಲಿ(ಮಾ.31): ಕೋವಿಡ್‌ ಕಾಟದಿಂದಾಗಿ ಚಾಲನಾ ಪರವಾನಗಿ, ಪರ್ಮಿಟ್‌ ಅವಧಿ ಮುಗಿದು ನವೀಕರಣ ಮಾಡಿಸಿಕೊಳ್ಳಲಾಗದೇ ಪರಿ ತಪಿಸುತ್ತಿದ್ದವರಿಗೆ ಕೇಂದ್ರ ಸರ್ಕಾರ ರಿಲೀಫ್‌ ನೀಡಿದೆ.

ಫೇ.1ಕ್ಕೆ ಚಾಲನಾ ಪರವಾನಗಿ, ವಾಹನ ಪರ್ಮಿಟ್‌ ಹಾಗೂ ನೋಂದಣಿ ಅವಧಿ ಮುಗಿದಿದ್ದರೆ, ಅಂಥ ದಾಖಲೆಗಳ ಮಾನ್ಯತೆಯನ್ನು ಜೂನ್‌ 30ರ ವರೆಗೆ ವಿಸ್ತರಿಸಿದೆ.

ಈ ಬಗ್ಗೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಕ್ಕೆ ಕೇಂದ್ರ ಸಾರಿಗೆ ಸಚಿವಾಲಯ ಪತ್ರ ಬರೆದಿದ್ದು, ಒಂದು ವೇಳೆ ಅಂಥ ದಾಖಲೆಗಳಿದ್ದರೆ, ಜೂ.30ರ ವರಗೆ ಅವುಗಳನ್ನು ಮಾನ್ಯ ಎಂದು ಪರಿಗಣಿಸಬೇಕು ಎಂದು ಸೂಚಿಸಿದೆ.