Asianet Suvarna News Asianet Suvarna News

ವಿವಾದದ ಬಳಿಕ ಮನೆಗೆ ಹೊಸ ಅತಿಥಿ ಬರಮಾಡಿಕೊಂಡ ಕಂಗನಾ!

ಬಾಲಿವುಡ್ ನಟಿ ಕಂಗನಾ ರಣಾವತ್ ಹೆಚ್ಚು ವಿವಾದಗಳಿಂದಲೇ ಸದ್ದುಮಾಡುತ್ತಿದ್ದಾರೆ. ಜಡ್ಜ್ ಮೆಂಟಲ್ ಕ್ಯಾ ಹೇ ಸಿನಿಮಾದ ಪ್ರಮೋಶನ್ ವೇಳೆ ವಿವಾದ ಮೈಮೇಲೆ ಎಳೆದುಕೊಂಡ ರಣಾವತ್ ಇದೀಗ ಹೊಸ ಅತಿಥಿ ಬರಮಾಡಿಕೊಂಡು ಸುದ್ದಿಯಾಗಿದ್ದಾರೆ. 

Bollywood actress Kangana ranavat purchase new Mercedes Benz GLE luxury SUV car
Author
Bengaluru, First Published Jul 30, 2019, 2:44 PM IST

ಮುಂಬೈ(ಜು.30): ಚಿತ್ರದ ಪ್ರಮೋಶನ್ ವೇಳೆ ಪತ್ರಕರ್ತನೊಂದಿಗೆ ಜಗಳವಾಡಿ ವಿವಾದ ಸೃಷ್ಟಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್ ಭಾರಿ ಸುದ್ದಿಯಾಗಿದ್ದರು. ಒಂದೆಡೆ ಪತ್ರಕರ್ತನೊಂದಿಗೆ ಸುಖಾಸುಮ್ಮನೆ ಜಗಳವಾಡಿದ್ದಕ್ಕೆ ವಿರೋಧ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಕಂಗನಾ ರಣಾವತ್ ಧರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ವಿವಾದ ತಣ್ಣಗಾಗುತ್ತಿದ್ದಂತೆ ಕಂಗನಾ ರಣಾವತ್ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

#KanganaRanaut with her new purchase in Manali, post #JudgeMentallHaiKya success.

A post shared by Kangana Ranaut (@team_kangana_ranaut) on Jul 28, 2019 at 1:08am PDT

ಇದನ್ನೂ ಓದಿ: ಅಲ್ಲು ಅರ್ಜುನ್ 7 ಕೋಟಿ ರೂ. ಫಾಲ್ಕನ್ ವ್ಯಾನ್ ಮೇಲೆ ಮೊದಲ ಕೇಸ್ !

ಕಂಗನಾ ರಣಾವತ್ ಮನೆಗೆ ಬಂದ ಹೊಸ ಅತಿಥಿ ಮರ್ಸಿಡಿಸ್ ಬೆಂಝ್ GLE ಕಾರು. ಇತ್ತೀಚಗೆ ಬಾಲಿವುಡ್ ನಟ-ನಟಿಯರು ಹೊಸ ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ. ಇದೀಗ ಕಂಗನಾ ರಣಾವತ್ ಸರದಿ. ಕಂಗನಾ 77.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಮೌಲ್ಯದ ಮರ್ಸಿಡಿಸ್ ಬೆಂಝ್ GLE SUV ಕಾರು ಖರೀದಿಸಿದ್ದಾರೆ. 

Bollywood actress Kangana ranavat purchase new Mercedes Benz GLE luxury SUV car

ಇದನ್ನೂ ಓದಿ: ತಾಪ್ಸಿ ಪನ್ನು ಸರ್ಪ್ರೈಸ್ ಗಿಫ್ಟ್‌ಗೆ ತಂಗಿ ಕ್ಲೀನ್ ಬೋಲ್ಡ್!

BMW7 ಸೀರಿಸ್ ಕಾರು ಸೇರಿದಂತೆ ಹಲವು ದುಬಾರಿ ಕಾರುಗಳು ಕಂಗನಾ ಬಳಿ ಇವೆ. ಇದೀಗ ಈ ಸಾಲಿಗೆ ಮರ್ಸಿಡಿಸ್ ಬೆಂಝ್ GLE SUV ಕಾರು ಸೇರ್ಪಡೆಯಾಗಿದೆ. ಬಿಳಿ ಬಣ್ಣದ ಕಾರು ಖರೀದಿಸಿರುವ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ನೂತನ ಕಾರಿನ ಮಾಹಿತಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್, ಹುಮಾ ಖುರೇಶಿ, ಶಾಹಿದ್ ಕಪೂರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರೆಟಿಗಳು ಇತ್ತೀಚೆಗೆ ಮರ್ಸಿಡಿಸ್ ಬೆಂಝ್ GLE ಕಾರು ಖರೀದಿಸಿದ್ದಾರೆ. ಇದರ ಬೆನ್ನಿಗೆ ಕಂಗನಾ ರಣಾವತ್ ಕೂಡ ಈ ಕಾರು ಖರೀದಿಸಿದ್ದಾರೆ. 

Bollywood actress Kangana ranavat purchase new Mercedes Benz GLE luxury SUV car

ಮರ್ಸಿಡಿಸ್ ಬೆಂಝ್ GLE SUV ಕಾರು 2.1-ಲೀಟರ್ 4-ಸಿಲಿಂಡ್ ಡೀಸೆಲ್ ಎಂಜಿನ್ ಹೊಂದಿದೆ. 201 Bhp ಪವರ್ ಹಾಗೂ 500 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 3.0 ಲೀಟರ್  V6 ಡೀಸೆಲ್ ಎಂಜಿನ್ ಕಾರು  255 Bhp ಪವರ್ ಹಾಗೂ  620 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಎರಡು ಎಂಜಿನ್ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ.
 

Follow Us:
Download App:
  • android
  • ios