Asianet Suvarna News Asianet Suvarna News

ಪಿಂಕ್ ಆಟೋ ಖರೀದಿಗೆ BBMPಯಿಂದ 75 ಸಾವಿರ ರೂ ಸಹಾಯ ಧನ!

ಬೆಂಗಳೂರಿನಲ್ಲಿ ಮಹಿಳೆಯ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದೀಗ ಮಹಿಳಾ ಪ್ರಯಾಣಿಕರ ಸುರಕ್ಷತೆಯಾಗಿ ಸಾರಥಿ ಯೋಜನೆಯಡಿ ಪಿಂಕ್ ಆಟೋ ಜಾರಿಗೆ ತಂದಿದೆ. ಇದೀಗ  BBMP ಪಿಂಕ್ ಆಟೋ ಖರೀದಿಸಲು ಗರಿಷ್ಠ 75,000 ರೂಪಾಯಿ ಸಹಾಯ ಧನ ಘೋಷಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

BBMP announces 75k subsidy amount for women to buy pink auto
Author
Bengaluru, First Published Feb 13, 2020, 12:56 PM IST

ಬೆಂಗಳೂರು(ಫೆ.13): ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಬೆಂಗಳೂರಿನಲ್ಲಿ ಹಲವು ಯೋಜನೆಗಳು ಜಾರಿಯಲ್ಲಿವೆ. ಈಗಾಗಲೇ ಪಿಂಕ್ ಆಟೋ ಯೋಜನೆ ಕೂಡ  ಜಾರಿ ಮಾಡಲಾಗಿದೆ. ಈ ಯೋಜನೆಯಡಿ ಪಿಂಕ್ ಆಟೋ ಖರೀದಿಸುವ ಅರ್ಹ ಮಹಿಳೆಯರಿಗೆ BBMP ಗರಿಷ್ಠ 75,000 ರೂಪಾಯಿ ಸಹಾಯ ಧನ ಘೋಷಿಸಿದೆ.

ಇದನ್ನೂ ಓದಿ: ಮಹಿಳೆಯರ ಹಿತ ಕಾಪಾಡಲು ಬೆಂಗಳೂರಿಗೆ ಸಾವಿರ ಪಿಂಕ್ ಆಟೋ

ಸಾರಥಿ ಯೋಜನೆಯಡಿ ಅರ್ಹರು ಅರ್ಜಿ ಹಾಕಿ BBMP ನೀಡುತ್ತಿರುವ 75,000 ರೂಪಾಯಿ ಸಹಾಯ ಧನ ಪಡೆಯಬಹುದಾಗಿದೆ. ಅರ್ಹ ಮಹಿಳೆಯರು ಕೂಡಲೇ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಕಚೇರಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು BBMP ಕಮೀಶನರ್ ಅನಿಲ್ ಕುಮಾರ್ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

 

ಇದನ್ನೂ ಓದಿ: ಆಟೋ ಮಿನಿಮಮ್ ಚಾರ್ಜ್‌ ಹೆಚ್ಚಳ, ಮೀಟರ್ ಕಡ್ಡಾಯ

ಪಿಂಕ್ ಆಟೋದಲ್ಲಿ ಜಿಪಿಎಸ್, ಸಿಸಿಟಿವಿ ಕ್ಯಾಮರ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಪಿಂಕ್ ಆಟೋ ಒಲಾ ಹಾಗೂ ಉಬರ್ ಜೊತೆ ಟೈಅಪ್ ಮಾಡಿಕೊಳ್ಳಲು BBMP ಮುಂದಾಗಿದೆ. ಮುಂಬೈ, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಪಿಂಕ್ ಆಟೋ ಚಾಲನೆಯಲ್ಲಿದೆ. 
 

Follow Us:
Download App:
  • android
  • ios