ಮೇಷ: ಶತ್ರು ಭಾದೆಯಿಂದ ಮುಕ್ತಿ ದೊರೆಯಲಿದೆ. ಅಗತ್ಯವಾದ ವಿಚಾರಗಳ ಕಡೆಗೆ ಮಾತ್ರ ಗಮನವಿರಲಿ. ಖರ್ಚಿನಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ನೂತನ ಸಂಬಂಧಗಳಿಂದ ಹೆಚ್ಚು ಉಪಯೋಗ. ಸ್ನೇಹಿತರಿಗೆ ಸಹಾಯ ಮಾಡಿ. ಪಂಚಮುಖಿ ಗಣೇಶನ ಆರಾಧನೆ ಮಾಡಿ.

ವೃಷಭ: ಮದುವೆ ಮೊದಲಾದ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿರಿ. ಕೆಲಸ ಕಾರ್ಯಗಳಲ್ಲಿ ಒತ್ತಡ ಹೆಚ್ಚಾಗಲಿದೆ. ಆತುರದ ನಿರ್ಧಾರ ಬೇಡ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ತಂದೆ ತಾಯಿಗಳ ಸಲಹೆ ಪಡೆದು ಮುಂದುವರೆಯಿರಿ. ಅಂದುಕೊಂಡ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಿರಿ.

ಮಿಥುನ: ಮನಸ್ಸಿನಲ್ಲಿ ಚಂಚಲ ಉಂಟಾಗಲಿದೆ. ಹತ್ತಿರದವರೊಂದಿಗೆ ಪ್ರೀತಿಯಿಂದ ವ್ಯವಹರಿಸಿ ಆರ್ಥಿಕವಾಗಿ ಲಾಭವಾಗಲಿದೆ. ಹೊಸ ಕಾರ್ಯ ಗಳಿಂದ ಮಾನಸಿಕ ನೆಮ್ಮದಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನಗತ್ಯ ಕಿರಿಕಿರಿ. ಮಾತಿಗಿಂತ ಮೌನಕ್ಕೆ ಹೆಚ್ಚು ಒತ್ತು ನೀಡುವಿರಿ. ಓಡಾಟ ಹೆಚ್ಚಾಗಲಿದೆ. ಹೊಸ ಗೆಳೆಯರ ಪರಿಚಯ.

ಕಟಕ: ವ್ಯಾಪಾರಕ್ಕೆ ಸಂಬಂಧಿಸಿದಂತೆ ದುಡುಕು ನಿರ್ಧಾರ ಬೇಡ. ಮಕ್ಕಳ ಪ್ರೀತಿಯಿಂದ ಹೆಚ್ಚು ಸಂತೋಷ ಪಡುವಿರಿ. ಅಂದುಕೊಂಡಂತೆ ಮಹತ್ವದ ಘಟನೆಗಳು ನೆರವೇರಲಿವೆ. ಆರೋಗ್ಯದಲ್ಲಿ ಏರುಪೇರು. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಮನೆಗೆ ಹೊಸ ವಸ್ತುಗಳು ಬಂದು ಸೇರಲಿವೆ. ದಾಂಪತ್ಯದಲ್ಲಿನ ವಿರಹಕ್ಕೆ ತೆರೆ ಬೀಳಲಿದೆ.

ಸಿಂಹ:  ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ತಂದೆ ತಾಯಿ ಆರೋಗ್ಯದಲ್ಲಿ ಸುಧಾರಣೆ. ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ಕೆಲಸದಲ್ಲಿ ನಿರೀಕ್ಷಿತ ಪ್ರಗತಿಯಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಆದಾಯದಲ್ಲಿ ಏರಿಕೆ ಕಾಣಲಿದೆ.

ಇದು ಅಂತಿಂಥ ವಜ್ರ ಅಲ್ಲ, ಅಪರೂಪದ ನೀಲಿ ವಜ್ರ!

ಕನ್ಯಾ: ಒತ್ತಡದಿಂದ ಹೊರಗೆ ಬರುವಿರಿ. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಇರಲಿ. ದೂರದ ಪ್ರಯಾಣ ಮಾಡುವ ಅಗತ್ಯ ಬರಲಿದೆ. ಚರ್ಮ ಸಂಬಂಧಿ ಕಾಯಿಲೆಗೆ ಪರಿಹಾರ ದೊರೆಯಲಿದೆ.

ತುಲಾ: ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅನಾವಶ್ಯಕವಾಗಿ ಯಾವುದೇ ವಿಚಾರಗಳಲ್ಲಿ ಸಕ್ರಿಯವಾಗುವುದು ಬೇಡ. ಮನೆಯಲ್ಲಿ ಶುಭಕಾರ್ಯಗಳು ನೆರವೇರಲಿವೆ. ದೈಹಿಕವಾಗಿ ಸದೃಢವಾಗಲು ಪ್ರಯತ್ನಿಸುವಿರಿ. ಮನೆಯಲ್ಲಿನ ವಿರಸಗಳು ನಿವಾರಣೆಯಾಗಲಿವೆ. ಶುಭ ಕಾರ್ಯಕ್ಕೆ ಹೆಚ್ಚು ನಿಧಾನ ಮಾಡುವುದು ಬೇಡ.

ವೃಶ್ಚಿಕ: ಅಧಿಕಾರದ ಸ್ಥಾನದಲ್ಲಿರುವವರು ಒತ್ತಡಕ್ಕೆ ಸಿಲುಕಬೇಕಾಗುತ್ತದೆ. ಗೆಳೆಯರ ಮಾತಿಗೆ ಹೆಚ್ಚು ಬೆಲೆ ನೀಡುವಿರಿ. ಆರೋಗ್ಯದ ಕಡೆ ಗಮನವಿರಲಿ. ಬಂಧುಗಳಿಗೆ ಆರ್ಥಿಕ ಸಹಾಯ ಮಾಡುವಿರಿ. ವಿನಾಕಾರಣ ಕೋಪ ಬೇಡ. ನಿಮ್ಮ ಮಾತಿನಿಂದ ಬೇರೆಯವರಿಗೆ ನೋವಾಗದಂತೆ ನೋಡಿಕೊಳ್ಳಿ. ಶುದ್ಧ ಆಹಾರಕ್ಕೆ ಆದ್ಯತೆ ನೀಡಿ.

ಧನಸ್ಸು:  ಔದ್ಯೋಗಿಕ ಪ್ರಗತಿ. ಶುಭ ಕಾರ್ಯಗಳು ಸನ್ನಿಹಿತವಾಗಲಿವೆ. ಬಂಧು ಬಳಗದಿಂದ ನಿಮ್ಮ ಬೆಳವಣಿಗೆಗೆಪ್ರೋತ್ಸಾಹ ದೊರೆಯಲಿದೆ. ಸೂಕ್ತ ನಿರ್ಧಾರಗಳಿಂದ ಮುಂದುವರೆಯಿರಿ. ಹೊಸ ಸ್ನೇಹಿತರಿಂದ ಆರ್ಥಿಕ ಸಹಾಯ. ಉದ್ದಿಮೆ ಸ್ಥಾಪಿಸುವವರಿಗೆ ಇದು ಒಳ್ಳೆಯ ಕಾಲ.

ಮಕರ: ಹಳೆಯ ಸಾಲಗಳಿಂದ ಮುಕ್ತಿ ದೊರೆಯಲಿದೆ. ಉದ್ಯೋಗಸ್ಥರಿಗೆ ಆದಾಯದಲ್ಲಿ ಏರಿಕೆ. ಅನಿರೀಕ್ಷಿತ ಘಟನೆಗಳು ದೀರ್ಘ ಕಾಲದವರೆಗೂ ಒಳಿತು ಮಾಡಲಿವೆ. ಪೋಷಕರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಒತ್ತಡದಿಂದ ಹೊರ ಬರುವಿರಿ. ಖರ್ಚಿನಲ್ಲಿ ಹಿಡಿತವಿರಿಲಿ.

ಕುಂಭ: ಆಸಕ್ತಿಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ. ಹಿಂದೆ ಮಾಡಿದ ಕೆಲಸಕ್ಕೆ ಒಳ್ಳೆಯ ಫಲ ದೊರಕಲಿದೆ. ಮಿತವ್ಯಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ಆತುರಕ್ಕೆ ತುತ್ತಾಗದೇ ನಿಧಾನವಾಗಿ ಮುಂದುವರೆಯಿರಿ. ರೈತಾಪಿ ವರ್ಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಉದ್ಯೋಗದಲ್ಲಿ ಪ್ರಗತಿ, ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡುಬರಲಿದೆ. ಶುಭ ಫಲ ದೊರೆಯಲಿದೆ.

ಮೀನ:  ಒಳ್ಳೆಯ ಚಿಂತನೆಗಳು ಹೆಚ್ಚಾಗಲಿವೆ. ಕೈಹಾಕಿದ ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ ಸಿಗಲಿದೆ. ಮಕ್ಕಳ ಬಗ್ಗೆ ಅನಾವಶ್ಯಕ ಅನುಮಾನ ಬೇಡ. ಓದುವ ಹವ್ಯಾಸ ಹೆಚ್ಚಾಗಲಿದೆ. ಅಗತ್ಯದ ಖರ್ಚುಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಿ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.