ನಿತ್ಯ ಬಳಸೋ ಈ ವಸ್ತುವನ್ನು ಶನಿವಾರ ಕೊಳ್ಳಬೇಡಿ...

ಹಿಡಿ, ಉಪ್ಪು, ಎಣ್ಣೆ....ಹೀಗೆ ಕೆಲವು ವಸ್ತುಗಳು ಇಲ್ಲದೇ ಹೋದರೆ, ಜೀವನವೇ ಮುಂದೆ ಸಾಕಾಗುವುದಿಲ್ಲ. ಇಂಥ ಅಗತ್ಯ ವಸ್ತುಗಳನ್ನು ಶನಿವಾರ ತರಬಾರದು, ಏಕೆ? ಮತ್ಯಾವಾಗ ತಂದರೆ ಓಕೆ? ಇಲ್ಲಿದೆ ವಾಸ್ತು ಟಿಪ್ಸ್.

Things to never buy on Saturday

ಶನಿವಾರ ಶನಿದೇವನಿಗೆ ಪ್ರಿಯ. ಸಹಜವಾಗಿ ಕೋಪಿಷ್ಠನಾದ ಶನಿ ದಿವಸದಂದು ಕೆಲವೊಂದು ವಸ್ತುಗಳನ್ನು ಖರೀದಿಸಬಾರದು. ಇದರಿಂದ ಶನಿದೇವನಿಗೆ ಕೋಪ ಬರುತ್ತೆ, ಎಂಬ ನಂಬಿಕೆ ಇದೆ. ಮತ್ತೆ ಜೀವನದಲ್ಲಿ ಏರುಪೇರಾಗಬಹುದು.

ಲೋಹ ವಸ್ತುಗಳು: ಶನಿವಾರ ಲೋಹದ ಯಾವುದೇ ವಸ್ತುಗಳನ್ನೂ ಖರೀದಿಸಬಾರದು. ಇದರಿಂದ ಶನಿ ದೇವ ಕುಪಿತನಾಗುತ್ತಾನೆ. ಈ ದಿನ ಕತ್ತರಿ ಖರೀದಿಸುವುದೂ ಒಳಿತಲ್ಲ. ಇದರಿಂದ ಕೌಟುಂಬಿಕ ಸಂಬಂಧ ಹದಗೆಡುತ್ತದೆ. ಆದರೆ ಈ ವಸ್ತುಗಳನ್ನು ಶನಿವಾರ ದಾನವಾಗಿ ನೀಡುವುದರಿಂದ ಶನಿಯ ಕೋಪ ಕಡಿಮೆಯಾಗುತ್ತದೆ.   

Things to never buy on Saturday

ಎಣ್ಣೆ ಖರೀದಿಸಬೇಡಿ: ಶನಿವಾರ ಶನಿ ದೇವನಿಗೆ ಎಣ್ಣೆ ಸಮರ್ಪಿಸುವುದು ಒಳ್ಳೆಯದು. ಆದರೆ ಅದನ್ನು ಖರೀದಿಸುವುದು ಒಳಿತಲ್ಲ. ಇದರಿಂದ ರೋಗ ಬರಬಹುದು. 

Things to never buy on Saturday

ಉಪ್ಪು : ಉಪ್ಪು ಇಲ್ಲದೇ ಆಹಾರ ರುಚಿಸೋಲ್ಲ.  ಆದರೆ  ಶನಿವಾರ ಮಾತ್ರ ಇದನ್ನು ಖರೀದಿಸಬೇಡಿ. ಶನಿವಾರ ಉಪ್ಪು ಖರೀದಿಸಿದರೆ ರೋಗ ಮತ್ತು  ಸಾಲ ಹೆಚ್ಚಾಗಬಹುದು. 

ಕಪ್ಪು ವಸ್ತು:  ಯಾವುದೇ ರೀತಿ ಕಪ್ಪು ವಸ್ತುಗಳನ್ನೂ ಖರೀದಿಸಬಾರದು. ಕಪ್ಪು ಬಣ್ಣದ ಶೂ ಕೂಡ ಖರೀದಿಸಬೇಡಿ. ಇದರಿಂದ ಅಂದುಕೊಂಡ ಕಾರ್ಯ ನೆರವೇರುವುದಿಲ್ಲ.

Latest Videos
Follow Us:
Download App:
  • android
  • ios