ನಿಮ್ಮ ದೇಹವನ್ನು ಒಮ್ಮೆ ಸೂಕ್ಷ್ಮವಾಗಿ ಪರೀಕ್ಷಿಸಿಕೊಳ್ಳಿ. ಅದರಲ್ಲಿ ಕೆಲವು ಭಾಗಗಳು ತುಂಬಾ ನಾಜೂಕಾಗಿರುವುದು, ಮುಟ್ಟಿದಾಗ ಹಾಯ್‌ ಎನಿಸುವುದು ನಿಮಗೆ ಗೊತ್ತಾಗುತ್ತದೆ. ಪುಟ್ಟ ಮಕ್ಕಳನ್ನು ಮಲಗಿಸಿ ಅವರ ಅಂಗಾಲನ್ನು ಹಿತವಾಘಿ ನೇವರಿಸುತ್ತಿದ್ದರೆ ಒಂದು ನಿಮಿಷದಲ್ಲಿ ನಿದ್ರೆಗೆ ಜಾರುತ್ತವೆ. ಇದಕ್ಕೇನು ಕಾರಣ? ಯಾಕೆಂದರೆ ಅವರಿಗೆ ಅಂಗಾಲಿನ ಜೀವಕೋಶಗಳು ತುಂಬ ಮೃದುವಾಗಿ, ತುಂಬಾ ಸೂಕ್ಷ್ಮವಾಗಿ ನಾಜೂಕಾಗಿ ಇರುತ್ತವೆ. ಇವುಗಳನ್ನು ಸ್ಪರ್ಶಿಸಿ ನೇವರಿಸಿದ ಕೂಡಲೇ ಮೆದುಳಿಗೆ ಹಿತವಾದ ಸಂದೇಶ ಹೋಗುತ್ತದೆ. ಹಿತಾನುಭವ ಉಂಟಾಗುತ್ತದೆ. ಈ ಹಿತಾನುಭವಕ್ಕೂ ನಮ್ಮ ಜನ್ಮರಾಶಿಗೂ ಸಾಮ್ಯವಿದೆ ಎಂಬುದು ವಿಚಿತ್ರ ಅನಿಸಿದರೂ ಸತ್ಯ. ಹಾಗಿದ್ದರೆ, ನಿಮ್ಮದ್ಯಾವ ರಾಶಿ, ನಿಮ್ಮ ಸಂಗಾತಿಯದು ಯಾವ ರಾಶಿ, ನಿಮಗೆಲ್ಲಿ ಮುಟ್ಟಿದಾಗ ತೀರಾ ಹಿತವೆನಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ನಿಮ್ಮ ಸಂಗಾತಿಯ ಹಿತವಾದ ಅಂಗದ ಪರಿಚಯ ನಿಮಗಿದ್ರೆ ತುಂಬಾ ಒಳ್ಳೇದಲ್ವೇ!

ಮೇಷ, ಸಿಂಹ, ತುಲಾ, ಧನು ರಾಶಿ

 

ಈ ರಾಶಿಗಳ ಪಂಚಭೂತ ತತ್ವ ಬೆಂಕಿ. ಇವರು ಸ್ವಲ್ಪ ಉರಿ ಉರಿಯುವ ಸ್ವಭಾವದವರು. ಇವರಲ್ಲಿ ಕಾಮುಕತೆಯೂ ಸ್ವಲ್ಪ ಹೆಚ್ಚು. ಹೀಗಾಗಿ ಇವರ ಸೊಂಟದಿಂದ ಕೆಳಗಿನ, ಮೊಣಕಾಲಿಗಿಂತ ಮೇಲಿನ ಭಾಗದಲ್ಲಿ ಹೆಚ್ಚು ಸಂವೇದನಾಶೀಲರು. ಆ ಭಾಗವನ್ನು ಮುಟ್ಟಿದರೆ, ಸವರಿದರೆ ಹಿತಾನುಭವ ಹೊಂದುತ್ತಾರೆ. ಮನುಷ್ಯ ಲೈಂಗಿಕ ಸುಖ ಹೊಂದುವ ಭಾಗವೂ ಇದೇ ಆದ್ದರಿಂದ, ಇವರಲ್ಲಿ ಲೈಂಗಿಕತೆಯ ಪ್ರಮಾಣ ಸ್ವಲ್ಪ ಹೆಚ್ಚೇ ಅನ್ನಬಹುದು. ಇವರನ್ನು ಮೆಲುವಾಗಿ ವಶೀಕರಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ. ಇವರು ಅಮಲಿನತ್ತ ಹೋಗುವಂಯೆ ಮಾಡಬೇಕಾದರೆ ಸರಿಯಾದ ಮಸಾಜ್‌ ಬೇಕೇ ಬೇಕು. ಮಂಚದ ಮೇಲೂ ಸ್ವಲ್ಪ ತೀವ್ರವಾದ ಅನುಭವವನ್ನೇ ಬಯಸುವವರು.

 

ವೃಷಭ, ಕನ್ಯಾ, ಮಕರ ರಾಶಿ

 

ಈ ಮೂರು ರಾಶಿಗಳ ಗುಣ ಭೂಮಿಯದ್ದು. ಭೂಮಿಯಲ್ಲಿರುವ ಎಲ್ಲ ಅಂಶವೂ ಇವರಲ್ಲಿ ಸೇರಿಕೊಂಡಿರುತ್ತದೆ. ಭೂಮಿ ಎಲ್ಲಿ ಸೆನ್ಸಿಟಿವ್‌ ಆಗಿರುತ್ತೆ ಹೇಳಿ. ನೀರು ಇರೋ ಜಾಗದಲ್ಲಿ. ಅಂದರೆ ನಮ್ಮ ದೇಹದಲ್ಲಿ ತೇವಾಂಶ ಇರುವ ಪ್ರದೇಶಗಳು ಇವರಿಗೆ ಹೆಚ್ಚು ಸೆನ್ಸಿಟಿವ್. ಉದಾಹರಣೆಗೆ ಕಣ್ಣು, ಕಿವಿ, ಮೂಗು, ಬಾಯಿ ಇತ್ಯಾದಿ. ಇವರ ತುಟಿಗಳು ಎಷ್ಟು ಸೆನ್ಸಿಟಿವ್‌ ಎಂದರೆ ನಿಮ್ಮ ಕಿರುಬೆರಳ ಸ್ಪರ್ಶದಿಂದಲೇ ಇವರನ್ನು ಮತ್ತೇರಿಸಬಹುದು. ಹಾಗೇ ಬೆರಳಿನ ತುದಿಗಳು ಇವರಿಗೆ ತುಂಬಾ ಪ್ರಿಯ. ಅಂಗಾಲನ್ನು ಹಿತವಾಗಿ ಮಸಾಜ್‌ ಮಾಡಿದರೆ ಐದೇ ನಿಮಿಷದಲ್ಲಿ ನಿದ್ರೆಗೆ ಸಲ್ಲುತ್ತಾರೆ.

 

ಸಕ್ಕರೆ ಖಾಯಿಲೆ ವಾಸಿಯಾಗಬೇಕೆಂದ್ರೆ ಈ ಮಂದಿರಕ್ಕೆ ಭೇಟಿ ನೀಡಿ

 

ಮಿಥುನ, ಕುಂಭ ರಾಶಿ

 

ಈ ಎರಡೂ ರಾಶಿಗಳವರು ಗಾಳಿಯನ್ನು ಪಂಚಭೂತ ತತ್ವವಾಗಿ ಹೊಂದಿದವರು. ಇವರ ಸೊಂಟದಿಂದ ಮೇಲುಭಾಗದ ಚರ್ಮ ತುಂಬಾ ಮೃದು ಹಾಗೂ ಸೆನ್ಸಿಟಿವ್‌. ಉದಾಹರಣೆಗೆ, ಎದೆಯ ಭಾಗ ಇವರಿಗೆ ತುಂಬಾ ಪ್ರಿಯ ಹಾಗೂ ಸಂವೇದನಶೀಲ. ಈ ರಾಶಿಯ ಸ್ತ್ರೀಯರ ಒಲವು ಗಳಿಸಬೇಕಾದರೆ ನೀವು ಅವರ ಎದೆಯ ಶ್ರೀಮಂತಿಕೆಯನ್ನು ಗುರುತಿಸಬೇಕು. ಸಂಗಾತಿಗಳಾಗಿದ್ದರೆ, ಇವರ ಎದೆಯ ಸಂವೇದನಶೀಲತೆಯ ಲಾಭ ಪಡೆಯುವುದರಲ್ಲಿ ಏನೂ ತಪ್ಪಿಲ್ಲ. ಇವರಿಗೂ ಅದು ತುಂಬಾ ಹಿತಕರವಾದುದು. ಇವರ ತಲೆಯ ನೆತ್ತಿಯ ಭಾಗವೂ ತುಂಬಾ ಸೆನ್ಸಿಟಿವ್. ಇವರಿಗೆ ತಲೆಯ ಮೇಲೆ ಮೊಟಕಿದರೆ ಜೀವನ ಪರ್ಯಂತ ನಿಮ್ಮನ್ನು ದ್ವೇಷಿಸುತ್ತಾರೆ. ಆದರೆ ತಲೆಯನ್ನು ಹಿತವಾಗಿ ಸವರಿದರೆ, ಮಸಾಜ್‌ ಮಾಡಿದರೆ ತುಂಬಾ ಇಷ್ಟವಾಗುತ್ತದೆ.

 

ಈ ದೇಗುಲದಲ್ಲಿ ಮಣ್ಣಿನ ಹರಕೆ ಹೊಟ್ಟರೆ ಮಕ್ಕಳಾಗುತ್ತವೆಯಂತೆ!

 

ಕಟಕ, ವೃಶ್ಚಿಕ, ಮೀನ ರಾಶಿ

 

ಈ ರಾಶಿಗ ತತ್ವ ನೀರು. ಈ ಸ್ವಭಾವಕ್ಕೆ ತಕ್ಕಂತೆ ಇವರು ಶಾಂತ ಸ್ವಭಾವ ಹೊಂದಿದವರು. ಇವರನ್ನು ಮೈ ಮುಟ್ಟಿ ಒಲಿಸಿಕೊಳ್ಳುವುದು ಸುಲಭವಲ್ಲವಾದರೂ, ತೀರ ಆತ್ಮೀಯರನ್ನು ಮಾತ್ರ ಇವರು ಹಚ್ಚಿಕೊಳ್ಳುತ್ತಾರೆ. ಇವರ ದೇಹದ ಕೆಲವೇ ಭಾಗಗಳು ತೀರಾ ಸೆನ್ಸಿಟಿವ್‌. ಉದಾಹರಣೆಗೆ ಹೊಕ್ಕುಳು, ಕತ್ತಿನ ಹಿಂಭಾಗ, ಅಂಗೈ, ಬೆರಳುಗಳ ನಡುವಿನ ಜಾಗ ಇತ್ಯಾದಿ. ಕಿವಿಯ ಹಿಂಬದಿಯಲ್ಲಿ ಮುತ್ತಿಟ್ಟರೆ ಇವರಿಗೆ ಸ್ವರ್ಗವೇ ಸಿಕ್ಕಂತೆ ಫೀಲ್‌ ಆಗುತ್ತಾರೆ. ಹಾಗೇ ಬೆನ್ನಿನ ಹಿಂಭಾಗದ ಬೆನ್ನು ಮೂಳೆಯ ಪ್ರದೇಶದಲ್ಲಿ ಮೆತ್ತಗೆ ಸವರಿದರೆ. ಮೊಣಕಾಲಿನ ಹಿಂಬದಿಯಲ್ಲಿ ತಡವಿದರೆ, ಕಂಕುಳನ್ನು ಹಿತವಾಗಿ ಸವರಿದರೆ ಇವರಿಗೆ ತುಂಬಾ ಸೊಗಸು ಎನಿಸುತ್ತದೆ.