ಬೆಂಗಳೂರು (ಜೂ. 15)  ಕೊರೋನಾ ವೈರಸ್ ನಲ್ಲಿ ಇಡೀ ಪ್ರಪಂಚವೇ ಮುಳುಗಿರುವಾಗ ಮತ್ತೊಂದು ಸುದ್ದಿ ಜೋರಾಗಿ ಹರಿದಾಡುತ್ತಿದೆ. ಜೂನ್  21ಕ್ಕೆ ಈ ಪ್ರಪಂಚದ ಅಂತ್ಯವಂತೆ!

ಪ್ರಪಂಚ ಕೊನೆಯಾಗುತ್ತದೆ ಎಂದು ಹೇಳುತ್ತಿರುವುದು ಮಯಾನ್ ಕ್ಯಾಲೆಂಡರ್.   1999 ರಿಂದಲೂ ಪ್ರಳಯದ ಭೂತ ಕಾಡುತ್ತಲೇ ಇದೆ.  2012  ಈ ಪ್ರಪಂಚದ ಮುಕ್ತಾಯ ಎಂದೂ ಹೇಳಲಾಗಿತ್ತು. 

ಖಂಡಗ್ರಾಸ ಗ್ರಹಣದ ಫಲ  ರಾಶಿಗಳ ಮೇಲೆ ಹೇಗಿದೆ?

ಡಿಸೆಂಬರ್ 21, 2012ಕ್ಕೆ ಈ ಪ್ರಪಂಚ ಅಂತ್ಯವಾಗಲಿದೆ ಎಂದು ಹೇಳಿದ್ದು ಆ ಲೆಕ್ಕಾಚಾರದಲ್ಲಿ ಕೊಚ ತಪ್ಪಿದೆಯಂತೆ.  ಜೂಲಿಯನ್ ಕ್ಯಾಲೆಂಡರ್ ಪ್ರಕಾರ ನಾವು  2012 ನೇ ಇಸವಿಯಲ್ಲಿ ಇದ್ದೇವೆ. ಈ ಬಗ್ಗೆ ವಿಜ್ಞಾನಿ ಪೌಲೋ ಟ್ಯಾಗೋಲ್ಯುನ್ ವಿವರಣೆಯನ್ನು ನೀಡಿದ್ದರು.   ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಗಳ ಆರ್ಭಟ ತಾಳಲಾರದೆ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಲೆಕ್ಕವೊಂದನ್ನು ವಿಜ್ಞಾನಿ ಮಂಡಿಸಿದ್ದಾರೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷವೊಂದಕ್ಕೆ ನಾವು 11  ದಿನಗಳನ್ನು ಕಳೆದುಕೊಳ್ಳುತ್ತೇವೆ. 1752 ರಿಂದ 2020 ಅಂದರೆ 268 ವರ್ಷಕ್ಕೆ 11 ರಿಂದ ಗುಣಿಸಿದಾಗ 2948  ದಿನಗಳಾಗುತ್ತದೆ. 2948   ದಿನಗಳನ್ನು 365  ದಿನದಿಂದ ಭಾಗಿಸಿದಾಗ 8 ವರ್ಷಗಳು ಉಳಿಯುತ್ತವೆ. ಈ  8 ನ್ನು 2020  ರಿಂದ ಕಳೆದಾಗ  2012 ಉಳಿಯುತ್ತದೆ ಎಂಬ ಪ್ರತಿಪಾದನೆ, ಲೆಕ್ಕಾಚಾರವನ್ನು ವಿಜ್ಞಾನಿ ನೀಡಿದ್ದರು.