ಹೆಚ್ಚಿನ ಎಲ್ಲರ ಮನೆಯ ಮೂಲೆಯಲ್ಲಿ ಜೇಡರ ಬಲೆ ಕಾಣ ಸಿಗುತ್ತದೆ. ಜೇಡರ ಬಲೆ ಅಷ್ಟೇ ತಾನೇ ಎಂದು ನೀವು ಸುಮ್ಮನೆ ಇದ್ದು ಬಿಟ್ಟರೆ ಲಕ್ಷ್ಮಿ ದೇವಿ ನಿಮ್ಮ ಮೇಲೆ ಮುನಿಸಿಕೊಳ್ಳುತ್ತಾಳೆ. ಅಂದರೆ ಹಣದ ಸಮಸ್ಯೆ ಉಂಟಾಗುತ್ತದೆ. ವಾಸ್ತುವಿನ ಪ್ರಕಾರ ಜೇಡ, ಜೇಡರ ಬಲೆ ಯಾಕಿರಬಾರದು. ಅದರ ಅರ್ಥ?

- ಬೆಳಗ್ಗೆ ಎದ್ದ ಕೂಡಲೇ ಜೇಡ ಅಥವಾ ಜೇಡರ ಬಲೆ ನೋಡುವುದರಿಂದ ಅನ್ ಲಕ್ಕಿ ಎಂದು ಯುರೋಪ್ ಜನರು ನಂಬುತ್ತಾರೆ. 
- ಮನೆ ಸರಿಯಾಗಿ ಕ್ಲೀನ್‌ ಮಾಡದಿದ್ದರೆ ಜೇಡ ಬಲೆ ಕಟ್ಟಿಕೊಳ್ಳುತ್ತದೆ. ಅಂಥವರ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಅಲ್ಲಿ ಯಾವಾಗಲೂ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ.
- ಇನ್ನು ಕೆಲವು ಸಂಪ್ರದಾಯದಂತೆ ಮಧ್ಯಾಹ್ನದ ಹೊತ್ತು ಜೇಡವನ್ನು ನೋಡಿದವರಿಗೆ ಗಿಫ್ಟ್ ಒಲಿಯುತ್ತಂತೆ.
- ಜೀಡರ ಬಲೆ ಮನೆಯಲ್ಲಿದ್ದರೆ, ಅಲ್ಲಿ ನೆಲೆಸುವ ಜನರ ಯೋಚನಾ ಶಕ್ತಿಯೇ ಕಡಿಮೆಯಾಗುತ್ತದೆ. ಟೆನ್ಷನ್ ಸಹ ಹೆಚ್ಚುತ್ತಂತೆ.
- ಜೇಡರ ಬಲೆಯಿದ್ದರೆ ನಕಾರಾತ್ಮಕ ಶಕ್ತಿ ಹಾಗೂ ಆಲಸ್ಯ ಮನೆ ಮಾಡುತ್ತೆ.
- ಅಂತಹ ಮನೆಗಳಲ್ಲಿ ಆರೋಗ್ಯದ ಸಮಸ್ಯೆಗಳೂ ಹೆಚ್ಚು. 
- ಜೇಡರ ಬಲೆಯಲ್ಲಿರುವ ಸಣ್ಣ ಸಣ್ಣ ಪಾರ್ಟ್‌ಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.- ಜೇಡರ ಮನೆಯಲ್ಲಿದ್ದರೆ ಸಮಸ್ಯೆ ಎಂದು ಶಾಸ್ತ್ರಗಳೂ ಹೇಳುತ್ತವೆ.
- ಜೇಡ ಬಲೆಯನ್ನು ಕೊಳ್ಳುವವರೂ ಇದ್ದಾರೆ. ಇದರಿಂದ ದೌರ್ಭಾಗ್ಯ ವಕ್ಕರಿಸುತ್ತಂತೆ. ಇದರಿಂದ ಆರ್ಥಿಕ ಸಮಸ್ಯೆಗಳು ಕಾಡುತ್ತವೆ. 

ವಾಸ್ತು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ