Asianet Suvarna News Asianet Suvarna News

ಈ ರಾಶಿಗೆ ಇಂದು ಶುಭ ಶಕುನದ ದಿನ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹ ರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಮಿಥುನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

Special Bhavishya july 13

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹ ರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಮಿಥುನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  


ಮೇಷ ರಾಶಿ : ಬೆಳಗ್ಗೆ ಎದ್ದ ಕೂಡಲೇ ನಿತ್ಯ ಕರ್ಮ ಪೂರೈಸಿ ನಿಮ್ಮ ಮನೆಯ ಪೂರ್ವ ದಿಕ್ಕಿಗೆ ಇರುವ ಇಂದು ನಿಮ್ಮ ರಾಶಿಯವರಿಗೆ ಉತ್ತಮ ಫಲಗಳು ಲಭ್ಯವಾಗಲಿವೆ. ನೀವಂದುಕೊಂಡ ಕಾರ್ಯ ನೆರವೇರುತ್ತದೆ. ಶುಭ ದಿನವಾಗಿರಲಿದೆ.

ದೋಷಪರಿಹಾರ : 6 ಕೆಂಪು ಹೂವನ್ನು ಸುಬ್ರಹ್ಮಣ್ಯ ಸ್ವಾಮಿಗೆ ಕೊಟ್ಟು ಬನ್ನಿ.

ವೃಷಭ : ಬೆಳಗ್ಗೆ ಸ್ನಾನಾದಿಗಳು ಪೂರೈಸಿದ ನಂದರ ಒಂದು ಮಾರು ಮಲ್ಲಿಗೆ ಹೂವನ್ನು  ಲಕ್ಷ್ಮೀ ದೇವಸ್ಥಾನಕ್ಕೆ ಕೊಟ್ಟುಬನ್ನಿ. ಸ್ವಲ್ಪ ಮಾನಸಿಕ ಅಸಮಧಾನ ಹಾಗೂ ಧನನಷ್ಟ ಸಂಭವಿಸಲಿದೆ. ಕಚೇರಿಗೆ ಹೊರಡುವ ಮುನ್ನ ಸ್ವಲ್ಪ ಕಿರಿಕಿರಿ ಸಂಭವಿಸುತ್ತದೆ. ಸ್ವಲ್ಪ ಜಾಗ್ರತೆ ಇರಲಿ.

ದೋಷ ಪರಿಹಾರ : ನಿಮ್ಮ ತಂದೆ-ತಾಯಿಗೆ ನಮಸ್ಕಾರ ಮಾಡಿ.

ಮಿಥುನ : ಇಂದು ನಿಮ್ಮ ಸ್ನಾನಾದಿಗಳು ಪೂರೈಸಿದ ನಂತರ ಒಂದು ಪುಟ್ಟ ಪಾತ್ರೆಯ ತುಂಬ ತುಳಸಿ ಪತ್ರೆಯನ್ನು ತುಂಬಿಕೊಂಡು ವಿಷ್ಣು ದೇವಾಲಯಕ್ಕೆ ಕೊಟ್ಟುಬನ್ನಿ. ನಂತರವೇ ನಿಮ್ಮ ದಿನವನ್ನು ಪ್ರಾರಂಭಮಾಡಿ. ಇಂದು ನಿಮ್ಮ ಸ್ವಂತ ಕಾರ್ಯಕ್ಕಾಗಿ ಹೆಚ್ಚು ಧನ ವ್ಯಯವಾಗುತ್ತದೆ. ನಿಮ್ಮ ಪ್ರತಿಭೆಯಿಂದ ನಿಮ್ಮ ಕಾರ್ಯದಲ್ಲಿ ಯಶಸ್ಸುಕಾಣುತ್ತೀರಿ.  

ದೋಷ ಪರಿಹಾರ : ಓಂ ನಿಮ್ಮ ಕುಲದೇವತೆಯ ಆರಾಧನೆ ಮಾಡಿ

ಕಟಕ : ಇಂದು ಒಂದು ತಂಬಿಗೆ ತುಂಬ ಹಾಲನ್ನು ತುಂಬಿ ನಿಮ್ಮ ಮನೆಯ ಹತ್ತಿರದಲ್ಲಿರುವ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಕೊಟ್ಟುಬನ್ನಿ. ಮುಖ್ಯವಾಗಿ ನೀವು ಊಟ ಮಾಡುವ ಮುನ್ನ ನಿಮ್ಮ ಕುಲ ದೇವರ ಸ್ಮರಣೆ ಮಾಡುವುದನ್ನು ಮರೆಯಬೇಡಿ. ಇಂದು ನಿಮ್ಮ ಆಹಾರದಲ್ಲೇ ವ್ಯತ್ಯಯವಾಗಬಹುದು. ಜಾಗ್ರತೆ ಇರಲಿ. ಮಾತು ಕಡಿಮೆ ಮಾಡುವುದರಿಂದ ಇಂದು ನಿಮ್ಮ ದಿನ ಸುಖಮಯವಾಗಲಿದೆ.
  
ದೋಷ ಪರಿಹಾರ : ನಾಗ ದೇವರಿಗೆ ನಮಸ್ಕಾರ ಮಾಡಿ

ಸಿಂಹ : ಆತ್ಮೀಯರೇ ನಿಮ್ಮ ದಿನ ಪ್ರಾರಂಭವಾಗುವ ದಿನ  ಓಂ ಶಂಭವೇ ನಮ: ಮಂತ್ರವನ್ನು  21 ಬಾರಿ ಸ್ಮರಿಸಿ. ಆನಂತರವೇ ನಿಮ್ಮ ದಿನವನ್ನು ಪ್ರಾರಂಭ ಮಾಡಿ. ಇಂದು ನಿಮ್ಮ ಧೈರ್ಯ ಸ್ವಲ್ಪ ಕುಗ್ಗಲಿದೆ. ಅದರ ನಿವಾರಣೆಗಾಗಿಯೇ ಶಿವನ ಆರಾಧನೆ ಮಾಡಿ ಎಂದದ್ದು. ನಿಮ್ಮ ಉದ್ಯೋಗ ಸಮಯದಲ್ಲಿ ಸ್ವಲ್ಪ ಹೆಚ್ಚಿನ ಶ್ರಮ ಬೀಳಬಹುದು. ಅಥವಾ ನಿಮ್ಮ ಮೇಲೆ ಆಪಾದನೆ ಬರಬಹುದು ಎಚ್ಚರವಾಗಿರಿ.

ದೋಷ ಪರಿಹಾರ : ಶಿವ ಧ್ಯಾನವೇ ಶುಭದಾಯಕ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ದಿನ ಪ್ರಾರಂಭವಾಗುವ ಮುನ್ನ ನಾರಾಯಣ ದೇವಸ್ಥಾನಕ್ಕೆ ಗಂಧಾಭೀಷೇಕ ಮಾಡಿಸಿದರೆ ತುಂಬಾ ಶುಭದಾಯಕ ದಿನವಾಗಿರಲಿದೆ. ಮುಖವಾಗಿ ಒಂದು ವಿಷಯವನ್ನು ಗಮನಿಸಿ ನಿಮ್ಮ ಮನೆಯ ಪೂರ್ವದಿಕ್ಕಿಗೆ ಒಂದು ವಿಷ್ಣು ದೇವಾಲಯವಿದೆ ಆ ದೇವಸ್ಥಾನಕ್ಕೆ ಗಂಧ ಹೂವನ್ನು ಕೊಟ್ಟುಬನ್ನಿ. ಅತ್ಯಂತ ಶುಭಫಲ ನಿಮ್ಮಪಾಲಿಗಿದೆ.
  
ದೋಷ ಪರಿಹಾರ : ಓಂ ನಮೋ ನಾರಾಯಣಾಯ ಮಂತ್ರವನ್ನ 48 ಬಾರಿ ಪಠಿಸಿ

ತುಲಾ :  ಆತ್ಮೀಯರೇ ನಿಮ್ಮ ನಿತ್ಯ ಕರ್ಮ ಮುಗಿಸಿದ ನಂತರ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ಎರಡು ತೆಂಗಿನಕಾಯಿಕೊಟ್ಟು ಬನ್ನಿ. ಆನಂತರ ನಿಮ್ಮ ದಿನವನ್ನು ಪ್ರಾರಂಭ ಮಾಡಿ. ಇಂದು ನಿಮ್ಮ ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆ ಕಾಣುತ್ತದೆ. ಆದರೆ ಅಂಥ ಸಮಸ್ಯೆ ಏನೂ ಇಲ್ಲ. ಮೇಲೆ ಹೇಳಿದ ದೇವ ಕಾರ್ಯ ಮಾಡಿ ಶುಭವಾಗುತ್ತದೆ.

ದೋಷ ಪರಿಹಾರ : ಲಕ್ಷ್ಮೀ ದರ್ಶನ ಮಾಡಿ 

ವೃಶ್ಚಿಕ : ಆತ್ಮೀಯರೇ ನಿಮ್ಮ ದಿನ ಪ್ರಾರಂಭವಾಗುವ ಮುನ್ನ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಇಂದು ನಿಮ್ಮ ಆರೋಗ್ಯ ಸ್ವಲ್ಪ ಏರುಪೇರಿನಲ್ಲೇ ಇರಲಿದೆ. ಕುಟುಂಬದವರಿಗಾಗಿ ಸ್ವಲ್ಪ ಹಣವ್ಯಯವಾಗಲಿದೆ. ಸ್ತ್ರೀಯರಿಂದ ನಿಮ್ಮ ಉದ್ಯೋಗದಲ್ಲಿ ಆತಂಕವಾಗುವ ಸಂಭವವಿದೆ. ಎಚ್ಚರದಿಂದಿರಿ 

ದೋಷ ಪರಿಹಾರ : ಪರಿವಾರ ಸಹಿತ ಶಿವ ದೇವಸ್ಥಾನಕ್ಕೆ ಹೋಗಿಬನ್ನಿ.

ಧನಸ್ಸು : ಸ್ನೇಹಿತರೇ ಇಂದು ನಿಮ್ಮ ದಿನ ಪ್ರಾರಂಭವಾಗುವ ಮುನ್ನ ನೀವು ನಂಬುವ ಗುರುಗಳಿಗೆ ವಸ್ತ್ರದಾನ ಮಾಡಿಬನ್ನಿ ನಿಮ್ಮ ದೇಹ ಸ್ವಲ್ಪ ಆಯಾಸದಿಂದ ಕೂಡಿರುತ್ತದೆ. ಕಾರ್ಯಗಳು ನಿಧಾನವಾಗುತ್ತದೆ. ಸಮಾಧಾನದ ದಿನ.

ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಾಡಿ

ಮಕರ :  ಆತ್ಮೀಯರೇ ನಿಮ್ಮ ದಿನವನ್ನು ಪ್ರಾರಂಭಿಸುವ ಮುನ್ನ  ಶಿವ ದೇವಸ್ಥಾನಕ್ಕೆ ಭಸ್ಮವನ್ನು ಕೊಟ್ಟುಬನ್ನಿ. ಇಂದು ನಿಮ್ಮ ಪಾಲಿಗೆ ಎಲ್ಲ ಕಾರ್ಯಗಳೂ ವಿಳಂಬವಾಗುತ್ತವೆ. ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಬುದ್ಧಿಯಿಂದಲೇ ಕಾರ್ಯ ಸಮಸ್ಯೆ ಉಂಟಾಗಲಿದೆ. ಜಾಗ್ರತೆಯಿಂದಿರಿ.
  
ದೋಷ ಪರಿಹಾರ : ಶಿವ ಧ್ಯಾನ ಮಾಡಿ

ಕುಂಭ : ಆತ್ಮೀಯರೇ ಒಂದು ವರೆ ಕೆಜಿಯಷ್ಟು ಎಳ್ಳನ್ನು ಶನೈಶ್ಚರ ದೇವಸ್ಥಾನಕ್ಕೆ ದಾನ ಮಾಡಿ ಬನ್ನಿ. ಇಂದು ನಿಮ್ಮ ಪಾಲಿಗೆ ಶುಭ ದಿನ. ನಿಮ್ಮ ಎಲ್ಲಾ ಕೆಲಸಗಳು ಸಲೀಸಾಗಿ ನೆರವೇರಲಿವೆ. ವ್ಯಾಪಾರದವರಿಗೆ ಸ್ತ್ರೀಯರಿಂದ ಸ್ವಲ್ಪ ಕಿರಿಕಿರಿ. ಸ್ತ್ರೀಯರಿಗೆ ಉತ್ತಮದಿನ.  

ದೋಷ ಪರಿಹಾರ : ಶಿವ-ಅಂಬಿಕೆಯರ ದೇವಸ್ಥಾನಕ್ಕೆ ಹೋಗಿಬನ್ನಿ. 
  
ಮೀನ : ಇಂದು ನಿಮ್ಮ ಬೆಳಗು ಪ್ರಾರಂಭವಾದಕೂಡಲೇ ಸೂರ್ಯ ಪ್ರಾರ್ಥನೆ ಮಾಡಿ. ಇಂದು ನಿಮ್ಮ ಪಾಲಿಗೆ ಶುಭದಿನ. ಹಿರಿಯರಿಂದ ಉತ್ತಮ ಸಹಕಾರ ಸಿಗಲಿದೆ. ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಲಿದೆ. ಆಹಾರ ಸಮವಾಗಿರಲಿ.  
  
ದೋಷ ಪರಿಹಾರ : ನಿಮ್ಮ ಮನೆ ದೇವರ ಪ್ರಾರ್ಥನೆ ಮಾಡಿ

ಗೀತಾಸುತ.

Follow Us:
Download App:
  • android
  • ios