ಯಾವ ರಾಶಿಯವರಿಗೆ ಈ ದಿನ ಅತ್ಯಂತ ಶುಭ ತರುವ ದಿನವಾಗಿದೆ..?

Special Bhavishya July 11
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ವೃಷಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  
 

ಯಾವ ರಾಶಿವರಿಗೆ  ಈ ದಿನ ಅತ್ಯಂತ ಶುಭ ತರುವ ದಿನವಾಗಿದೆ..?

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ವೃಷಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  


ಮೇಷ ರಾಶಿ : ಮಿತ್ರರೇ ಇಂದು ನಿಮ್ಮ ದಿನ ಹೇಗಿದೆ..? ಮನೆಯಲ್ಲಿ ಹೆಚ್ಚಿನ ಕೆಲಸಕಾರ್ಯಗಳು. ಬೇಸರವಾಗುವಷ್ಟು ಕೆಸಲಗಳು ನಿಮ್ಮನ್ನು ಅಂಟಿಕೊಳ್ಳಲಿವೆ. ದೇಹಾಯಾಸವಾಗುವ ಸಾಧ್ಯತೆ.  ಹೆಣ್ಣು ಮಕ್ಕಳಿಂದ ಸ್ವಲ್ಪ ಕಿರಿಕಿರಿಯಾಗಬಹುದು. ಕುಟುಂಬದ ಸ್ತ್ರೀಯರಿಂದ ಸ್ವಲ್ಪ ಅನುಕೂಲ.

ದೋಷಪರಿಹಾರ : ಓಂ ಷಡಾನನಾಯ ನಮ: ಮಂತ್ರವನ್ನು 21 ಬಾರಿ ಹೇಳಿಕೊಳ್ಳಿ.

ವೃಷಭ : ಇಂದು ನಿಮ್ಮ ಮನಸ್ಸಿಗೆ ಸ್ವಲ್ಪ ಸಮಾಧಾನದ ದಿನ, ನೆನ್ನೆಯಂತೆಯೇ ದಿನ ಸಮಾಧಾನದಿಂದ ಸಾಗುತ್ತದೆ. ನಿಮ್ಮ ಹೊಸ ಕಾರ್ಯಕ್ಕೆ ಉತ್ತಮ ಸ್ಪಂದನೆ ಸಿಗಲಿದೆ. ಜೊತೆಗೆ ಇಂದು ತಂದೆಯಿಂದ ಹಾಗೂ ಸರ್ಕಾರಿ ಕಾರ್ಯಗಳಿಂದ ಅನುಕೂಲವಾಗಲಿದೆ. ಸ್ವಲ್ಪ ಧನ ವ್ಯಯವೂ ಇದೆ.    

ದೋಷ ಪರಿಹಾರ : ಸೂರ್ಯ ನಮಸ್ಕಾರ ನಿಮ್ಮ ದಿನವನ್ನು ಸಮಾಧಾನದಿಂದಿರಿಸಲಿದೆ.

ಮಿಥುನ : ಓದುಗ ಬಂಧುಗಳೇ ಇಂದು ನಿಮ್ಮ ದಿನ ಸ್ವಲ್ಪ ಲಾಭ-ಸ್ವಲ್ಪ ನಷ್ಟದಿಂದ ಕೂಡಿರುತ್ತದೆ. ನಿಮ್ಮ ಪ್ರತಿಭೆಗೆ ಪುರಸ್ಕಾರ ದೊರೆಯಲಿದೆ. ಆರೋಗ್ಯ ಸಮಸ್ಯೆ ನಿಮ್ಮನ್ನು  ಕಾಡಲಿದೆ. ಒಲ್ಲದ ಮನಸ್ಸಿನಿಂದ ಹಣ ವ್ಯಯ ಮಾಡಬೇಕಾದ ಅನಿವಾರ್ಯತೆ ಇದೆ.

ದೋಷ ಪರಿಹಾರ : ವಿಷ್ಣು ದರ್ಶನ ಅಥವಾ ನಾಮ ಸ್ಮರಣೆ ಮಾಡಿ

ಕಟಕ : ಸ್ನೇಹಿತರೇ ಇಂದು ನಿಮ್ಮ ಶ್ರಮದಿಂದ ನಿಮಗೆ ಲಾಭ. ಉದ್ಯೋಗ ಸ್ಥಳದಲ್ಲಿ ಉತ್ತಮ ದಿನ ಆದರೆ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆಯೂ ಇದೆ. ಜೊತೆಗೆ ನಿಮ್ಮ ಮಡದಿಗೆ ನೀವು ಮಾಡುವ ಸ್ಥಳದಲ್ಲೇ ಉದ್ಯೋಗಾವಕಾಶ ಸಿಗುವ ಸಾಧ್ಯತೆ ಇದೆ. ಧನ ಸ್ಥಾನದಲ್ಲಿ ಶುಕ್ರನಿದ್ದು ಆ ಸ್ಥಾನಕ್ಕೆ ಶನಿ ದೃಷ್ಟಿ ಇರುವುದರಿಂದ ಸ್ತ್ರೀಯರಿಗಾಗಿ ಧನ ವ್ಯಯ. ಕೇಂದ್ರದ ಗುರು ನಿಮ್ಮಲ್ಲಿ ಸುಖ ಸಮೃದ್ಧಿಮಾಡಲಿದ್ದಾನೆ.
  
ದೋಷ ಪರಿಹಾರ : ಶನಿ ಹಾಗೂ ನಾಗದೇವರ ಆರಾಧನೆ ಮಾಡಿ

ಸಿಂಹ : ಆತ್ಮೀಯರೇ, ನಿಮ್ಮ ಶ್ರಮಕ್ಕೆ ದ್ವಿಗುಣ ಲಾಭ ಸಿಗಲಿದೆ. ಸಾಲ ಬಾಧೆ ನಿಮ್ಮನ್ನು ಸ್ವಲ್ಪ ಬಾಧಿಸಲಿದೆ. ಉದ್ಯೋಗಾಧಿಪತಿ ಜನ್ಮದಲ್ಲಿರುವುದರಿಂದ ಸ್ತ್ರೀಯರಿಗೆ ಉದ್ಯೋಗ ಪ್ರಾಪ್ತಿ. ವ್ಯಾಪಾರಿಗಳಿಗೆ ಲಾಭ ನಷ್ಟ ಸಂಭವ. ಎರಡೂ ರೀತಿಯ ಫಲಗಳನ್ನು ಅನುಭವಿಸುತ್ತೀರಿ. 

ದೋಷ ಪರಿಹಾರ : ಪಾರ್ವತೀ ಸಹಿತ ಶಿವ ದೇವಸ್ಥಾನಕ್ಕೆ ಹೋಗಿಬನ್ನಿ.

ಕನ್ಯಾ : ಇಂದು ಕೆಲವರಿಗೆ, ಉದ್ಯೋಗ ಪ್ರಾಪ್ತಿ ಹಾಗೂ ಬಡ್ತಿ ಎರಡೂ ಲಭ್ಯ. ವಿದೇಶ ಪ್ರಯಾಣದ ಸಾಧ್ಯತೆ. ಸ್ತ್ರೀಯರಿಗೆ ಉತ್ತಮ ದಿನ. ಸ್ವಲ್ಪ ಧನ ನಷ್ಟವಾಗುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಜಾಗೃತವಾಗಿರಿ.
  
ದೋಷ ಪರಿಹಾರ : ಲಕ್ಷ್ಮೀ ಸಹಿತ ವೆಂಕಟೇಶ್ವರನ ಆರಾಧನೆ ಮಾಡಿ. 

ತುಲಾ :  ಇಂದು ನಿಮಗೆ ಶೀತ ಬಾಧೆ ಕಾಡಲಿದೆ. ತಲೆ ಸಿಡಿತದಂಥ ಅಪಾಯವಿದೆ. ಸೊಂಟ ಭಾಗವೂ ತೊಂದರೆಯಾಗಿ ಕಾಡಬಹುದು. ಆದರೆ ಶುಭ ಫಲಗಳು ನಿಮ್ಮ ದೇಹಾಯಾಸವನ್ನು ಕಡಿಮೆ ಮಾಡಿ ಸಮಾಧಾನತರಲಿದೆ.  

ದೋಷ ಪರಿಹಾರ : ಚಂದ್ರ ಪ್ರಾರ್ಥನೆ ಮಾಡಿ 

ವೃಶ್ಚಿಕ : ಇಂದು ಹೆಂಡತಿಯಿಂದ ಸಹಾಯ, ಗೆಳತಯ-ಗೆಳತಿಯರು ಕೂಡ ನಿಮ್ಮ ಮನಸ್ಸಿಗೆ ಸಮಾಧಾನ ತರುತ್ತಾರೆ. ವ್ಯಾಪಾರಿಗಳಿಗೆ ಬರುವ ಲಾಭದಲ್ಲಿ ಕತ್ತರಿಯಾಗಲಿದೆ. ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿಯೂ ಆಗುವ ಸಾಧ್ಯತೆ ಇದೆ. ಜಾಗ್ರತೆಯಿಂದ ಇರುವುದು ಒಳಿತು.

ದೋಷ ಪರಿಹಾರ : ರಾಹು ಪ್ರಾರ್ಥನೆ ಮಾಡಿ. ವಿಷ್ಣು ಪ್ರಾರ್ಥನೆಯೂ ಮಾಡಿ 

ಧನಸ್ಸು : ಉತ್ತಮ ದಿನ ನಿಮ್ಮದಾಗಿರಲಿದೆ ಗೆಳೆಯರೆ. ಮನೆಯಲ್ಲಿ ಉತ್ತಮ ಬಾಂಧವ್ಯ, ಆಹ್ಲಾದ ವಾತಾವರಣವಿರಲಿದೆ. ನಿಮ್ಮ ದೇಹದಲ್ಲಿ ಸ್ವಲ್ಪ ಏರುಪೇರು. ಆರೋಗ್ಯ ವ್ಯತ್ಯಯವಾಗುವ ಸಾಧ್ಯತೆ ಇದೆ. ಒಳ್ಳೇ ನೀರನ್ನು ಕುಡಿಯಿರಿ. 

ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ

ಮಕರ :  ಇಂದು ನಿಮ್ಮ ಪಾಲಿಗೆ ಹೆಣ್ಣುಮಕ್ಕಳಿಂದ ಸಹಾಯ, ನಿಮ್ಮ ಮಕ್ಕಳೂ ಕೂಡ ನಿಮ್ಮ ಸಹಾಯಕ್ಕೆ ಬರುತ್ತಾರೆ. ಶತ್ರುಗಳ ಬಾಧೆ ಸ್ವಲ್ಪ ಮಟ್ಟಿಗೆ ಹಿಂಸೆಕೊಡಲಿದೆ. ಉದ್ಯೋಗ ಸ್ಥಳದಲ್ಲಿ ನೀವು ಕೊಟ್ಟ ಸಾಲ ವಾಪಸ್ಸಾಗುವ ಸಾಧ್ಯತೆ ಇದೆ. ರಸ್ತೆಯಲ್ಲಿ ಹೋಗುವಾಗ ಓರ್ವರಿಗೆ ಸಹಾಯ ಮಾಡುವ ಮನೋಭಾವ ಮೂಡಲಿದೆ. 
  
ದೋಷ ಪರಿಹಾರ : ಶಿವಾಯ ನಮ: ಎಂಬ ಪಂಚಾಕ್ಷರಿ ಮಂತ್ರ 21 ಬಾರಿ ಪಠಿಸಿ

ಕುಂಭ :  ಆತ್ಮೀಯರೇ, ನಿಮ್ಮ ತಾಯಿ  ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ನೀವು ಕೊರಗುತ್ತಿರುವ ವಿಷಯಕ್ಕೆ ಅವರೇ ಪರಿಹಾರವನ್ನು ಕೊಡಲಿದ್ದಾರೆ. ಸಹೋದರರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಇಂದು ನಿಮ್ಮ ಕಾರ್ಯ ಸ್ಥಳದಲ್ಲಿ ಕೆಲಸಕ್ಕೆ ಹೆಚ್ಚು ಅಡೆತಡೆಗಳಿರಲಿವೆ. ಮನಸ್ಸಿಗೆ ಸ್ವಲ್ಪ ಆತಂಕದ ಭಾವ.    

ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿಗೆ ನಮಸ್ಕಾರ ಮಾಡಿ 
  
ಮೀನ : ಮಿತ್ರರೇ, ಇಂದು ನಿಮ್ಮ  ಆರೋಗ್ಯ ಕೈಕೊಡಲಿದೆ. ಸಹೋದರಿಯರು ನಿಮ್ಮನ್ನು ಆರೈಕೆ ಮಾಡುತ್ತಾರೆ. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ನಷ್ಟ ಸಂಭವ. ಸಾಮಾನ್ಯದಿನವಾಗಿರಲಿದೆ. 
  
ದೋಷ ಪರಿಹಾರ : ವಿಷ್ಣು ಆರಾಧನೆಯಿಂದ ಸಮಾಧಾನ ಪ್ರಾಪ್ತಿ.

ಗೀತಾಸುತ.

loader