Asianet Suvarna News Asianet Suvarna News

ಈ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ: ಉಳಿದ ರಾಶಿ ಹೇಗಿದೆ?

ಈ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ: ಹಾಗಾದರೆ ಉಳಿದ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ 2018 ನವೆಂಬರ್ 30ರ ದಿನ ವಿಶೇಷ ಭವಿಷ್ಯ

special bhavishya 30 november 2018
Author
Bangalore, First Published Nov 30, 2018, 7:21 AM IST
  • Facebook
  • Twitter
  • Whatsapp

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಕೃಷ್ಣ ಪಕ್ಷ
ಅಷ್ಟಮಿ
ಪೂರ್ವ ಫಲ್ಗುಣಿ

ರಾಹುಕಾಲ : 10.43 ರಿಂದ 12.08
ಯಮಗಂಡ ಕಾಲ : 02.59 ರಿಂದ 04.24
ಗುಳಿಕ ಕಾಲ : 07.52 ರಿಂದ 09.17

ಮೇಷ :  ಮಕ್ಕಳ ಆರೋಗ್ಯದಲ್ಲಿ ಅಭಿವೃದ್ಧಿ, ಶೀತ ಬಾಧೆ ನಿವಾರಣೆ, ಸ್ತ್ರೀಯರಿಂದ ಕಾರ್ಯ ಸಾಧನೆ, ಸಹಕಾರ, ಉತ್ತಮ ದಿನ, ಕಾರ್ಯ ಸಾಧನೆಗೆ ಸಹೋದರರ ಅಡ್ಡಿ, ಪ್ರಯಾಣದ ದಿನ.  

ದೋಷ ಪರಿಹಾರ -  ಸುಬ್ರಹ್ಮಣ್ಯ ಸ್ವಾಮಿಗೆ ಕದಳಿ ಫಲ ಸಮರ್ಪಣೆ ಮಾಡಿ

ವೃಷಭ : ಆರೋಗ್ಯದಲ್ಲಿ ವ್ಯತ್ಯಯ, ಸ್ತ್ರೀಯರಿಗೆ ಅನುಕೂಲದ ದಿನ, ದಾಂಪತ್ಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ, ವ್ಯಾಪಾರಿಗಳಿಗೆ ಬುದ್ಧಿ ವಿಕಾರ, ಎಚ್ಚರದಿಂದ ವ್ಯವಹಾರ ನಡೆಸಿ, ನಿಮ್ಮ ಉದ್ಯೋಗದಲ್ಲಿ ಎಡವಟ್ಟುಗಳಾಗುವ ಸಾಧ್ಯತೆ.

ದೋಷ ಪರಿಹಾರ : ಶ್ರೀನಿವಾಸ ದರ್ಶನ ಮಾಡಿ
 
ಮಿಥುನ : ನೀವು ಅಂದುಕೊಂಡ ಮಟ್ಟಿಗೆ ಕಾರ್ಯಸಾಧನೆ ಆಗುವುದಿಲ್ಲ, ಕಾರ್ಯ ವಿಳಂಬವಾಗುವ ಸಾಧ್ಯತೆ, ಹಿರಿಯ ವ್ಯಕ್ತಿಗಳಿಗೆ ಮರಣ ಭಯ, ಉದ್ಯೋಗ ಕ್ಷೇತ್ರದಲ್ಲಿ ಅನಾನುಕೂಲವಿದೆ, ಮಾತನಾಡುವಾಗ ಎಚ್ಚರವಾಗಿರಿ. 

ದೋಷ ಪರಿಹಾರ : ನಾರಾಯಣ ಮಂತ್ರ ಪಠಿಸಿ

ಕಟಕ : ಉದ್ಯೋಗಕ್ಕೆ ಹೋದವರಿಗೆ ಹೃದಯಾಘಾತದಂಥ ಸಮಸ್ಯೆ, ತಲೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ, ಸ್ತ್ರೀಯರಾಡುವ ಮಾತುಗಳು ಸಮಾಧಾನ ತರಲಿವೆ, ಗೃಹ ಪ್ರಾಪ್ತಿ, ಮನೆಯಲ್ಲಿ ಸ್ತ್ರೀಯರ ಮಾತು ನಡೆಯಲಿದೆ. 

ದೋಷ ಪರಿಹಾರ : ದುರ್ಗಾ ದೇವಿಗೆ ನಮಸ್ಕಾರ ಮಾಡಿ

ಸಿಂಹ :  ನಿಮ್ಮ ಕಾರ್ಯ ಸ್ಥಳದಲ್ಲಿ ಸ್ತ್ರೀಯರಿಂದ ಧನ ವ್ಯಯ, ಮರುಳು ಮಾತಿನಿಂದ ಹಣ ಕಸಿಯುತ್ತಾರೆ ಎಚ್ಚರವಾಗಿರಿ, ಆಪತ್ಕಾಲದಲ್ಲಿ ನಿಮ್ಮ ಗೆಳತಿಯಿಂದ ಸಹಾಯ, ಸಹೋದರಿಯರಿಂದ ಸಹಾಯವಾಗುವ ದಿನ.

ದೋಷ ಪರಿಹಾರ : ವನ ದುರ್ಗಾರಾಧನೆ ಮಾಡಿ

ಕನ್ಯಾ : ಹೆಂಡತಿ ಹಾಗೂ ಸಹೋದರರ ನಡುವೆ ಇದ್ದ ಭಿನ್ನಾಭಿಪ್ರಾಯ ದೂರಾಗಲಿದೆ, ಉತ್ತಮ ಮಾತಿನಿಂದ ನಿಮ್ಮ ಕಾರ್ಯ ಸಾಧನೆ, ಕುಟುಂಬದ ಸ್ತ್ರೀಯರಲ್ಲಿ ಹೊಂದಾಣಿಕೆ, ಸ್ತ್ರೀಯರಿಂದ ಧನ ಲಾಭ. 
  
ದೋಷ ಪರಿಹಾರ : ಲಕ್ಷ್ಮೀ ನಾರಾಯಣ ಸ್ವಾಮಿ ಮಂತ್ರ ಜಪಿಸಿ

ತುಲಾ : ಸ್ತ್ರೀಯರಿಂದ ಅನುಕೂಲದ ದಿನ, ಕಾರ್ಯ ಸ್ಥಳದಲ್ಲಿ ದುರ್ಜನರು ನಿಮ್ಮ ಮನಸ್ಸಿಗೆ ಘಾಸಿ ಮಾಡುತ್ತಾರೆ, ವಿವೇಕಯುತವಾಗಿ ಮಾತನಾಡಿ ಕಾರ್ಯ ಸಾಧನೆ ಮಾಡುತ್ತೀರಿ, ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ಗೊಂದಲ. 
 
ದೋಷ ಪರಿಹಾರ : ಅನ್ನಪೂಣೇಶ್ವರಿಗೆ ಅಕ್ಕಿ ಸಮರ್ಪಣೆ ಮಾಡಿ
 
ವೃಶ್ಚಿಕ : ಗುರುತರ ವಿಷಯವನ್ನು ವಿವೇಕದಿಂದ  ನಿಭಾಯಿಸುತ್ತೀರಿ, ಕುಟುಂಬದ ಮಟ್ಟಿಗೆ ಸ್ವಲ್ಪ ಮನಸ್ತಾಪ ಸಂಭವ, ಸ್ವಲ್ಪ ಮಟ್ಟಿಗೆ ಆರೋಗ್ಯ ವ್ಯತ್ಯಯವಾಗುತ್ತದೆ, ಪ್ರಶಂಸೆ, ಪುರಸ್ಕಾರಗಳಿಂದ ವಂಚಿತರಾಗುತ್ತೀರಿ. 
 
ದೋಷ ಪರಿಹಾರ : ಮಹಾ ಗಣಪತಿ ದರ್ಶನ ಮಾಡಿ

ಧನಸ್ಸು : ನಿಮ್ಮ ಆರೋಗ್ಯದಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆ ಇದೆ, ಮಾತು ನಿಮ್ಮ ಮನೆಯನ್ನೇ ನುಂಗುವ ಸಾಧ್ಯತೆ ಇದೆ, ಪ್ರವಾಸ ಕೈಗೊಳ್ಳುವ ಮನಸ್ಸಾಗುತ್ತದೆ, ಮಾನಸಿಕವಾಗಿ ಸ್ವಲ್ಪ ಎದೆಗುಂದುತ್ತೀರಿ. 

ದೋಷ ಪರಿಹಾರ : ಗುರು ಚರಿತ್ರೆ ಪಾರಾಯಣ ಮಾಡಿ

ಮಕರ : ನೀವು ಅಂದುಕೊಂಡ ಕಾರ್ಯಗಳು ಸ್ಥಗಿತಗೊಳ್ಳುತ್ತವೆ, ವೃಥಾ ಮಾತಿನ ಕಲಹ, ಸಂಗಾತಿಯೊಂದಿಗೆ ಬೇಸರದ ದಿನ, ನಿಮ್ಮ ಉದ್ಯೋಗದಲ್ಲಿ ಸ್ತ್ರೀಯರ ಸಹಕಾರ. ವ್ಯಾಪಾರಿಗಳಿಗೆ ಸ್ತ್ರೀಯರಿಂದ ಲಾಭವಿದೆ. 

ದೋಷ ಪರಿಹಾರ : ಶಿವನಿಗೆ ರುದ್ರಾಭೀಷೇಕ ಮಾಡಿಸಿ

ಕುಂಭ :  ನೀವು ಮಾಡಿದ ಕಾರ್ಯಗಳು ಹಿರಿಯರಿಗೆ ಮೆಚ್ಚುಗೆಯಾಗುತ್ತವೆ, ನೀವು ತೆಗೆದುಕೊಂಡ ನಿರ್ಧಾರ ಉತ್ತಮವಾಗಿದ್ದರೂ ಆ ನಿರ್ಧಾರ ಶಾಸನವಾಗುವುದಿಲ್ಲ, ನಿಮ್ಮ ಮನೋ ಬಲ ಕುಗ್ಗಿಸಲು ಶತ್ರುಗಳು ಜಾಳ ಬೀಸುತ್ತಾರೆ. 

ದೋಷ ಪರಿಹಾರ : ಶ್ರೀಚಕ್ರ ಉಪಾಸನೆ ಮಾಡಿ
  
ಮೀನ : ನಿಮ್ಮ ಸಮಯ ವ್ಯರ್ಥವಾಗುವುದಿಲ್ಲ, ನಿಮ್ಮ ಚಿಂತನೆಗಳಲ್ಲಿ ಪ್ರೌಢತೆ ಇರಲಿದೆ, ಹಿರಿಯರಿಂದ ಪ್ರಶಂಸೆ, ಉತ್ತಮ ಕೆಲಸಕ್ಕಾಗಿ ಹವಣಿಸುತ್ತಿದ್ದವರಿಗೆ ಉತ್ತಮ ಉದ್ಯೋಗ ಪ್ರಾಪ್ತಿ, ಮಾತಿನಲ್ಲಿ ಹಾಗೂ ಮನೆಯಲ್ಲಿ ತುಂಬ ಎಚ್ಚರವಾಗಿರಬೇಕು. 
 ದೋಷ ಪರಿಹಾರ : ನೃಸಿಂಹ ಸ್ವಾಮಿಗೆ 5 ನಮಸ್ಕಾರ ಮಾಡಿ

Follow Us:
Download App:
  • android
  • ios