ಜೀವನದ ಸುಖಕ್ಕೆ ದೇವರ ಪೂಜೆಯೆಂಬ ಮೆಟ್ಟಿಲು...

ಹಿಂದೂ ಧರ್ಮದಲ್ಲಿ ಪೂಜೆಗೆ ಮಹತ್ತರವಾದ ಸ್ಥಾನವಿದೆ. ಕೆಲವು ಪ್ರಾಣಿ, ಗಿಡ-ಮರಗಳನ್ನು ಪೂಜಿಸಿದರೆ ಸುಖ ಪ್ರಾಪ್ತಿಯಾಗುತ್ತದೆ. ಯಾವುದನ್ನು ಪೂಜಿಸಿದರೆ ಶ್ರೇಷ್ಠ?

Offering pujas to these things brings Prosperity and peace in life

ಗರುಡ ಪುರಾಣದಲ್ಲಿ ತಿಳಿಸಿದಂತೆ ಕೆಲವೊಂದು ಕೆಲಸಗಳನ್ನು ಮಾಡಿದರೆ ಜೀವನದಲ್ಲಿ ಸಫಲತೆ ಸಿಗುತ್ತದೆ. ಜೀವನದಲ್ಲಿ ಉನ್ನತಿ ಪಡೆಯಬೇಕಾದರೆ ಇವನ್ನು ಪೂಜಿಸಿ. 

ವಿಷ್ಣು: ಗರುಡ ಪುರಾಣದ ಅನುಸಾರ ವಿಷ್ಣು ತನ್ನ ಭಕ್ತರ ದುಃಖವನ್ನು ದೂರ ಮಾಡುತ್ತಾನೆ. ಜೊತೆಗೆ ಜೀವನದಲ್ಲಿ ಸುಖ ಶಾಂತಿ ಸಿಗುವಂತೆ ಮಾಡುತ್ತಾನೆ. ಯಾರು ತಮ್ಮ ದಿನದ ಆರಂಭವನ್ನು ವಿಷ್ಣುವಿನ ಅರ್ಚನೆಯಿಂದ ಆರಂಭಿಸುತ್ತಾನೋ ಅವರಿಗೆ ಎಲ್ಲ ಕಾರ್ಯದಲ್ಲೂ ಸಫಲತೆ ಸಿಗುತ್ತದೆ. 

ಹಸು: ಗೋವಿಗೆ ಹಿಂದೂ ಧರ್ಮದಲ್ಲಿ ಮಹತ್ವವಿದೆ. ಹಸುವಿನ ಶರೀರದ ಬೇರೆ ಬೇರೆ ಭಾಗಗಳಲ್ಲಿ ದೇವಿ -ದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಇದು ಹಲವು ಸಮಸ್ಯೆಗಳಿಗೆ ಪರಿಹಾರವೆನ್ನಲಾಗುತ್ತದೆ.

ಶಾಂತಿ ಶಾಂತಿ ಶಾಂತಿ ಎಂದು 3 ಸಲ ಹೇಳುವುದೇಕೆ?

ಗಂಗಾ ನದಿ: ಗಂಗಾ ನದಿಯನ್ನು ಎಲ್ಲ ನದಿಗಿಂತ ಶ್ರೇಷ್ಠವೆಂದು ಭಾವಿಸುತ್ತಾರೆ. ಗಂಗಾ ನದಿಯನ್ನು ಅವಮಾನಿಸುವುದು ತರವಲ್ಲ. ಗಂಗಾ ಜಲಕ್ಕೆ ಪೂಜಿಸಿದರೆ ಕೆಲಸದಲ್ಲಿ ಯಶಸ್ಸು ಗ್ಯಾರಂಟಿ. 

ತುಳಸಿ: ತುಳಸಿ ಭಗವಾನ್ ಸ್ವರೂಪಿ. ಪ್ರತಿದಿನ ತುಳಸಿಗೆ ನೀರು ಹಾಕಿ ಪೂಜಿಸಿದರೆ ಶುಭ. ವಿಷ್ಣು ಪೂಜೆ ನಂತರ ತುಳಸಿಯನ್ನು ಪೂಜಿಸಬೇಕು. 

ಪಂಡಿತ: ಜ್ಞಾನಿಯನ್ನು ಗೌರವಿಸುವುದು ಉತ್ತಮ. ಯಾರು ಜ್ಞಾನಿಯನ್ನು ಗೌರವಿಸುತ್ತಾರೋ  ಅವರಿಗೆ ವನದಲ್ಲಿ ಯಶಸ್ಸು ಸಿಗುತ್ತದೆ. 

ಏಕಾದಶಿ ವ್ರತ: ಗ್ರಂಥ ಮತ್ತು ಪುರಾಣದಲ್ಲಿ ಏಕಾದಶಿ ವ್ರತ ಮಾಡುವುದು ಶ್ರೇಷ್ಠ. ಯಾರು ಪೂರ್ತಿ ಶ್ರದ್ಧೆ ಮತ್ತು ಭಕ್ತಿಯಿಂದ ಏಕಾದಶಿ ವೃತ ಮಾಡುತ್ತಾರೋ ಅವರಿಗೆ ಶುಭ ಫಲ ಸಿಗುತ್ತದೆ. 

Latest Videos
Follow Us:
Download App:
  • android
  • ios