ಸೌಂದರ್ಯವೇ ಮೈದುಂಬಿರುವ ಕನ್ಯಾ ರಾಶಿಯವರು ಬೇರೆಯವರನ್ನು ಚಿಂತೆಗೀಡು ಮಾಡುವಂಥ ವ್ಯಕ್ತಿತ್ವವುಳ್ಳವರು. ಬೇರೆಯವರ ಆರೋಗ್ಯದ ಬಗ್ಗೆ ಈ ಮಂದಿ ಅದೆಷ್ಟು ಕಾಳಜಿ ಹೊಂದಿರುತ್ತಾರೆಂದರೆ, ತಮ್ಮ ಆರೋಗ್ಯವನ್ನೇ ನಿರ್ಲಕ್ಷಿಸಿಕೊಳ್ಳುತ್ತಾರೆ.

ಸೂಕ್ಷ್ಮ ಮನಸ್ಸಿನ ಈ ರಾಶಿಯವರು ಗಂಡಾದರೂ ಸರಿ, ಹೆಣ್ಣಿನಂತೆಯೇ ಮೃದು ಮನಸ್ಸುಳ್ಳವರಾಗಿರುತ್ತಾರೆ. ಕಡ್ಡಿಯನ್ನುಟ್ಟುಮಾಡಿ ಗುಡ್ಡ ಮಾಡುವವರು. ಸದಾ ಪರಿಪೂರ್ಣರಾಗಿರಬೇಕೆಂದು ಬಯಸುವ ಇವರು ಅಗತ್ಯಕ್ಕಿಂತ ಹೆಚ್ಚಿಗೆ ಯೋಚಿಸುತ್ತಾರೆ. ಈ ರಾಶಿಯವರನ್ನು ಬುದ್ಧಿವಂತಿಕೆ ಹಾಗೂ ಸಂವಹನ ಗ್ರಹವಾದ ಬುಧ ಆಳುತ್ತಾನೆ. ಪಚನ ಕ್ರಿಯೆ ಮೇಲೂ ಹಿಡಿತ ಹೊಂದಿರುವ ಗ್ರಹ ಬುಧ.

ಮಾನಸಿಕ ಸ್ವಾಸ್ಥ್ಯ
ಸಾಮಾನ್ಯವಾಗಿ ಕನ್ಯಾ ರಾಶಿಯವರು ಚೆಂದ ಮಾತನಾಡುತ್ತಾರೆ. ಮಾತನಾಡುವುದು ಈ ರಾಶಿಯವರಿಗೆ ಹುಟ್ಟಿನಿಂದಲೇ ಒಲಿದು ಬಂದಿರುತ್ತದೆ. ಅತ್ಯುತ್ತಮ ಸಂವಹನ ಕೌಶಲ್ಯ ಇರುವ ಈ ರಾಶಿಯವರು, ಇದೇ ಗುಣದಿಂದಲೇ ಖಿನ್ನತೆಗೆ ಒಳಗಾಗುವುದಿದೆ. ಇನ್ನೊಬ್ಬರ ಬಗ್ಗೆಯೇ ಸದಾ ಚಿಂತಿಸುವುದರಿಂದಲೇ ಹೆಚ್ಚು ಒತ್ತಡಕ್ಕೊಳಗಾಗುತ್ತಾರೆ.

ಪ್ರೀತಿ ಹಾಗೂ ರೊಮನ್ಸ್ ವಿಷಯದಲ್ಲಿಯೂ ಅತೀವ ಭಾವನಾತ್ಮಕವಾಗಿರುವ ಈ ರಾಶಿಯವರು ಮಾನಸಿಕ ಪ್ರಕ್ಷುಬ್ಧತೆಗೆ ಒಳಗಾಗೋದು ಹೆಚ್ಚು. 

ಏನು ಮಾಡಬೇಕು?
ಮಾನಸಿಕವಾಗಿಯೇ ಹೆಚ್ಚು ಡಿಸ್ಟರ್ಬ್ ಆಗೋ ಕನ್ಯಾ ರಾಶಿಯವರು ಮನಸ್ಸನ್ನು ಖುಷಿಯಾಗಿಡುವಂಥ ಕೆಲಸಗಳನ್ನು ಮಾಡಬೇಕು. ದಿನಾ ಯೋಗ, ಧ್ಯಾನ ಮಾಡುವುದರಿಂದ ಮನಸ್ಸು ಹಾಗೂ ದೇಹ ಎರಡನ್ನೂ ಹದ್ದುಬಸ್ತಿನಲ್ಲಿಟ್ಟುಕೊಳ್ಳಬಹುದು. ಆಗಾಗ ಸುತ್ತೋದು, ಇಷ್ಟವಾದ ಹವ್ಯಾಸಗಳೆಡೆಗೆ ಹೆಚ್ಚಿನ ಗಮನ ನೀಡುವುದರಿಂದಲೂ ಕನ್ಯಾ ರಾಶಿಯವರು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕ್ರಿಯಾಶೀಲತೆಯನ್ನು ಬಡಿದೆಬ್ಬಿಸುವಂಥ ಕಾರ್ಯಗಳೆಡೆ ಗಮನಿಸಿ.

ಜ್ಯೋತಿಷ್ಯ ಸಂಬಂಧಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಿನ್ನೋ ಆಹಾರದಲ್ಲಿ ಹೆಚ್ಚು ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಿ. ಒಟ್ಟಾರೆ ಕನ್ಯಾ ರಾಶಿಯವರ ಮೇಲೆ ಮಂಗಳನೂ ಪ್ರಭಾವವೂ ಇದ್ದು, ಈ ವರ್ಷದ ಇನ್ನುಳಿದ ತಿಂಗಳು ಆರೋಗ್ಯವಾಗಿರುತ್ತಾರೆ.