Asianet Suvarna News Asianet Suvarna News

ಕನ್ಯಾ : ಈ ವರ್ಷದಲ್ಲಿ ವಿವಾಹದ ಯೋಗವಿದೆ

ದೀಪಾವಳಿ ವಾರ್ಷಿಕ ಭವಿಷ್ಯದ ಪ್ರಕಾರ ಸಾಕಷ್ಟು ಅನುಕೂಲರವಾಗಿರಲಿದೆ

Deepavali 2018 yearly kannada horoscope for every zodiac sign Virgo
Author
Bengaluru, First Published Nov 8, 2018, 3:22 PM IST

ಕನ್ಯಾ : ಈ ವರ್ಷದಲ್ಲಿ ವಿವಾಹದ ಯೋಗವಿದೆ

ವಿವಾಹದಲ್ಲಿನ ತೊಂದರೆ ನಿವಾರಣೆ. ದಾಂಪತ್ಯ ಬದುಕು ಸುಗಮವಾಗಲಿದೆ. ಬಟ್ಟೆ ವ್ಯಾಪಾರ, ಕಸೂತಿ, ಗೃಹ ಕೈಗಾರಿಕೆಗಳಿಂದ ಲಾಭ. ಸರಕಾರಿ ಕ್ಷೇತ್ರದಲ್ಲಿ ಸವಲತ್ತುಗಳು ಸಿಗಲಿದೆ. 

ರಾಜಕೀಯವಾಗಿ ನೀವು ನಂಬಿರುವ ನಿಮ್ಮ ಮೇಲ್ದರ್ಜೆಯ ನಾಯಕರು ಅಥವಾ ನಿಮ್ಮವರಿಂದಲೇ ಮೋಸ ವಂಚ ಸಾಧ್ಯತೆ. ವಾಹನ ಮಾರಾಟ ಅಥವಾ ವಾಹನ ಚಾಲಕರಿಗೆ ಅನುಕೂಲ. 

ಮನೆ ಕೃಷಿ, ವ್ಯಾಪಾರದಲ್ಲಿ ಲಾಭ. ಅನಾರೋಗ್ಯದ ಸಮಸ್ಯೆ ಕಾಡಲಿದೆ. ವಾದ್ಯ ಮತ್ತು ಬಂಧುಗಳ ವಿಚಾರದಲ್ಲಿ ವಿಪರೀತ ನಂಬಿಕೆ ಉಚಿತವಲ್ಲ. ಸಾಹಿತ್ಯ, ನಾಟಕ, ಸಿನಿಮಾ ರಂಗದಲ್ಲಿನ ಆಸೆ ಗುರುವಿನ ಆರಾಧನೆಯಿಂದ ಜಯ ಸಾಧ್ಯತೆ.

ಹಿರಿಯರ ಸಲಹೆಯಿಂದ ಅನುಕೂಲ. ವಿದೇಶೀ ಪ್ರಯಾಣ ಸಮಾಧಾನ ಕೊಡಲಿದೆ. ಕಪ್ಪು ಬಟ್ಟೆ ಧಾರಣೆ ಉಚಿತವಲ್ಲ. ಹೆಣ್ಣುಮಕ್ಕಳು ಗುರುವಾರ ಶುಕ್ರವಾರ ಸಾಲ ಮಾಡುವುದು ಬೇಡ. ವಾಹನ ಚಾಲನೆಗೂ ಮುನ್ನ ದುರ್ಗಾ ಸ್ಮರಣೆ ಮಾಡಿ. ಪ್ರತಿ ಶುಕ್ರವಾರ ಹೆಣ್ಣುಮಕ್ಕಳಿಗೆ ಅರಿಶಿನ ಕುಂಕುಮ ದಾನ ಮಾಡಿದರೆ ಮನೆಯ ನೆಮ್ಮದಿ.

ಶುಭ ಸಂಖ್ಯೆ: 1 5 6 7

ವಿದ್ವಾನ್ ಕಮಲಾಕರ ಭಟ್

Follow Us:
Download App:
  • android
  • ios