Asianet Suvarna News Asianet Suvarna News

ಧನಸ್ಸು : ಎಚ್ಚರ ವರ್ಷದಲ್ಲಿ ಸಾಲಭಾದೆ ಕಾಡುವ ಸಾಧ್ಯತೆ

ಈ ವರ್ಷ ನಿಮ್ಮ ರಾಶಿಗೆ ಹೇಗಿವೆ ಫಲಾ ಫಲಗಳು

Deepavali 2018 yearly kannada horoscope for every zodiac sign  Sagittarius
Author
Bengaluru, First Published Nov 8, 2018, 3:51 PM IST

ಧನಸ್ಸು  : ಎಚ್ಚರ ವರ್ಷದಲ್ಲಿ ಸಾಲಭಾದೆ ಕಾಡುವ ಸಾಧ್ಯತೆ

ಶನಿ ಪ್ರಭಾವ ಜನ್ಮದಲ್ಲಿ ಇರುವುದರಿಂದ ವಿಪರೀತ ಸಾಲಬಾಧೆ ಮುನ್ನಡೆಯಲಿದೆ. ಬೇರೆಯವರ ವ್ಯವಹಾರದಲ್ಲಿ ತಲೆ ಹಾಕದಿರಿ. 

ಹಣ್ಣು, ತರಕಾರಿ ವ್ಯಾಪಾರಗಳಿಗೆ ಲಾಭ. ಹಿರಿಯರ ಶಸ್ತ್ರಚಿಕಿತ್ಸೆ ಸಾಧ್ಯತೆ.  ಜೀವನದಲ್ಲಿ ಕೆಲವು ಸಮಸ್ಯೆ ಅಪಮಾನ ತಂದಿಡಬಹುದು. ಕೃಷಿಕ ವಲಯದಲ್ಲಿನ ಲಾಭ. 

ಹಣಕಾಸಿನ ವ್ಯವಸ್ಥೆಯಲ್ಲಿ ಬೇರೆಯವರ ಸಹವಾಸ ಉತ್ತಮವಲ್ಲ. ವರ್ಷಾಂತ್ಯದಲ್ಲಿ ಕಪ್ಪು ಕೆಂಪು ಬಟ್ಟೆಯನ್ನು ಧರಿಸಿ ವ್ಯವಹಾರಗಳಲ್ಲಿ ತೊಡಗುವುದು ಉಚಿತವಲ್ಲ. 

ಮೇ ನಂತರ ಮೀನುಗಾರರಿಗೆ ಲಾಭ. ಸೋಮವಾರ ಮಂಗಳವಾರ ಶುಕ್ರವಾರ ಹಣಕಾಸಿನ ವ್ಯವಹಾರ ಒಳಿತಲ್ಲ. ವಿವಾಹದ ಕಾರ್ಯಗಳಲ್ಲಿ ಹೆಣ್ಣು ಮಕ್ಕಳು ಜಾಗ್ರತೆ ಅಗತ್ಯ. 

ಜೂನ್ ನಂತರ ಔದ್ಯೋಗಿಕ ವ್ಯವಸ್ಥೆಯಲ್ಲಿ ನೆಮ್ಮದಿ ಕಾಣಬಹುದು. ರಾಜಕೀಯ ರಂಗದಲ್ಲಿ ಕೆಲವು ಅಹಿತಕರ ಘಟನೆಗಳಿಂದ ಅಧಿಕಾರ ವಂಚಿತರಾಗುವ ಸಾಧ್ಯತೆ. ಕೈಗಾರಿಕಾ ಕ್ಷೇತ್ರದಲ್ಲಿ ಯಶಸ್ಸು. ಶಿವನ ಆರಾಧನೆ ಬಿಲ್ಲವ ಪತ್ರಾದಿಗಳ ಅರ್ಪಣೆಯಿಂದ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ.
 
ಶುಭ ಸಂಖ್ಯೆ: 1 3 5 6

ವಿದ್ವಾನ್ ಕಮಲಾಕರ ಭಟ್

Follow Us:
Download App:
  • android
  • ios