Asianet Suvarna News Asianet Suvarna News

ಸಿಂಹ : ನೀವಂದುಕೊಂಡಂತೆ ನಡೆಯಲಿದೆ ಈ ವರ್ಷ

ಸಿಂಹ ರಾಶಿಗೆ ಈ ವರ್ಷದ ಭರ್ಜರಿ ಅನುಕೂಲವಿದೆ

Deepavali 2018 yearly kannada horoscope for every zodiac sign  leo
Author
Bengaluru, First Published Nov 8, 2018, 3:13 PM IST

ಸಿಂಹ :  ವರ್ತಮಾನದಲ್ಲಿ ಪಂಚಮಿ ಶನಿ ನಡೆಯುತ್ತಿದ್ದು, ಗುರುವಿನ ಅನುಗ್ರಹದಿಂದ ಅಂದುಕೊಂಡ ಕಾರ್ಯದಲ್ಲಿ ಜಯ ಸಿಗಲಿದೆ. 

ಉಪಕರಣಗಳ ತಯಾರಕರಿಗೆ ಹೊಸ ಅವಕಾಶಗಳು ದೊರೆಯಲಿದ್ದು, ಸರಕಾರದಿಂದ ಅನುಕೂಲವಾಗಲಿದೆ. ಮಾನಸಿಕ ವ್ಯಥೆ ಮಧ್ಯಭಾಗದಲ್ಲಿ ಅನುಕೂಲವಾಗಲಿದೆ. 

ಮಕ್ಕಳ ವಿಚಾರದಲ್ಲಿ ಜಾಗ್ರತೆ ಅಗತ್ಯ. ಹಿರಿಯರಿಂದ ಬರಬೇಕಾದ ಆಸ್ತಿ ನಿರಾಯಾಸವಾಗಿ ದೊರಕಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. 

ಅಪಘಾತ ಅಥವಾ ಅನಾರೋಗ್ಯದ ಸಮಸ್ಯೆ ಸಾಧ್ಯತೆ. ಹಿರಿಯರ ಮಾತಿನಿಂದ ಗೆಲುವು ನಿಶ್ಚಿತ. ಸಾಹಿತ್ಯ ಕ್ಷೇತ್ರದಲ್ಲಿ ಅನುಕೂಲ ಸನ್ಮಾನ ಸಿಗಲಿದೆ. 

ಚಲನಚಿತ್ರ ಕ್ಷೇತ್ರದಲ್ಲಿ ಹೊಸ ಅವಕಾಶ ಮತ್ತು ಹೂಡಿಕೆಯಿಂದ ಅನುಕೂಲ ದೊರಕಲಿದೆ. ಕೃಷಿಕ್ಷೇತ್ರದಲ್ಲಿ ಅಂದುಕೊಂಡ ಕಾರ್ಯದಲ್ಲಿ ಸಮಾನ. 

ಮಕ್ಕಳ ವಿವಾಹ ಕಾರ್ಯದಲ್ಲಿ ಅನುಕೂಲ. ರಾಜಕೀಯದಲ್ಲಿ ಉನ್ನತ ಸ್ಥಾನ. ತವರು ಮನೆತ ಬಾಂಧವ್ಯದಿಂದ ಸಮಾಧಾನ. ಪ್ರಯಾಣಕ್ಕಾಗಿ ಹಣ ಖರ್ಚು ಉಚಿತವಲ್ಲ. ಕೆಂಪು ಕಪ್ಪು ಬಣ್ಣಗಳಿಂದ ಅನುಕೂಲ.

ಶುಭ ಸಂಖ್ಯೆ: 2 4 8

ವಿದ್ವಾನ್ ಕಮಲಾಕರ ಭಟ್

Follow Us:
Download App:
  • android
  • ios