ಮಕರ : ಕೃಷಿಕರಿಗೆ ಸಂಪೂರ್ಣ ಲಾಭದ ವರ್ಷ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Nov 2018, 3:58 PM IST
Deepavali 2018 yearly kannada horoscope for every zodiac sign  Capricorn
Highlights

ಸಹೋದ್ಯೋಗಿಗಳ ಜತೆ ಎಚ್ಚರಿಕೆಯ ಸಂಭಾಷಣೆ ಅಗತ್ಯ. ಈ ವರ್ಷದ ಉಳಿದಂತೆ ನಿಮಗೆ ಹೇಗಿದೆ..?

ಮಕರ :  ಕೃಷಿಕರಿಗೆ ಸಂಪೂರ್ಣ ಲಾಭದ ವರ್ಷ

ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ನಟ ನಟಿಯರ ಜೀವನದಲ್ಲಿ ಅಸಮಾಧಾನ ಘಟನೆಗಳು ಸಂಭವ. ಸಾಡೇಸಾತ್ ಶನಿಯ ಪ್ರಭಾವವಿದ್ದು, ಆತುರದ ನಿರ್ಧಾರ ಉಚಿತವಲ್ಲ. 

ಸಹೋದ್ಯೋಗಿಗಳ ಜತೆ ಎಚ್ಚರಿಕೆಯ ಸಂಭಾಷಣೆ ಅಗತ್ಯ. ವೈಜ್ಞಾನಿಕ ಕ್ಷೇತ್ರದಲ್ಲಿ ಸಂಪೂರ್ಣ ಪ್ರಗತಿ ಅಸಾಧ್ಯ. ಮಕ್ಕಳ ವಿಚಾರದಲ್ಲಿ ಜಾಗ್ರತೆ ಇರಲಿ.

 ಜೇನುಗಾರಿಕೆ ಹೈನುಗಾರಿಕೆಯಿಂದ ಪೂರ್ಣ ಪ್ರಮಾಣದ ಲಾಭ. ಆಮದು ಮತ್ತು ತುರ್ತು ಕ್ಷೇತ್ರಗಳಲ್ಲಿ ಜೂನ್ ನಂತರ ಅನುಕೂಲ ಕಾಣಲು ಸಾಧ್ಯವಿಲ್ಲ. ಸಾಲ ಕೊಡುವುದು ಅಥವಾ ಲೇವಾದೇವಿ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ.

ಹಣ ಕಳೆದುಕೊಳ್ಳುವ ಲಕ್ಷಣಗಳೇ ಹೆಚ್ಚಾಗಿ ಕಾಣಲಿದೆ. ಕಪ್ಪು ಬಟ್ಟೆಯನ್ನು ಧರಿಸಿ ಶನಿವಾರ ಬುಧವಾರದ ಪ್ರಯಾಣ ಮಾಡುವಂಥದ್ದು ಉತ್ತಮವಲ್ಲ. 

ಅನ್ಯರ ವಿಚಾರಕ್ಕೆ ಸಂಬಂಧಿಸಿ ತಲೆ ಹಾಕುವುದು ಉತ್ತಮವಲ್ಲ. ವಾಹನಕ್ಕೆ ವ್ಯವಹಾರಗಳಲ್ಲಿ ಉತ್ತಮ. ನ್ಯಾಯಿಕ ವ್ಯವಸ್ಥೆಗಳಲ್ಲಿ ಜಯ ಸಾಧ್ಯ. ಮಿತ್ರರೊಡನೆ ಯಾವ ಕಾರಣಕ್ಕೇ ಭಿನ್ನಾಭಿಪ್ರಾಯ ಸಲ್ಲದು. ಶುಭವಾರ ಸೋಮವಾರ ಬುಧವಾರ ಶನಿವಾರ. 

ಶುಭ ಸಂಖ್ಯೆ:1 5 9

ವಿದ್ವಾನ್ ಕಮಲಾಕರ ಭಟ್

loader