Asianet Suvarna News Asianet Suvarna News

ಕಟಕ : ಈ ವರ್ಷದಲ್ಲಿ ಗೆಲುವಿನ ಸರದಾರರಾಗುವಿರಿ

ಕರ್ಕಾಟಕ ರಾಶಿಯವರಿಗೆ ಈ ವರ್ಷವು ಲಾಭದಾಯಕ

Deepavali 2018  yearly kannada horoscope for every zodiac sign Cancer
Author
Bengaluru, First Published Nov 8, 2018, 3:06 PM IST

ಕರ್ಕ : ಈ ವರ್ಷದಲ್ಲಿ ಗೆಲುವಿನ ಸರದಾರರಾಗುವಿರಿ

ವೃತ್ತಿಯಲ್ಲಿ ಸೋಲು ಅನುಭವಿಸಿರುವವರಿಗೆ ಗುರುವಿನ ಪ್ರಭಾವದಿಂದ ಗೆಲುವು ನಿಶ್ಚಿತ. ವ್ಯಾಪಾರ ವಹಿವಾಟಿನಲ್ಲಿ ಲಾಭ. ಹೈನುಗಾರಿಕೆ ಕೃಷಿ ಉತ್ಪನ್ನಗಳಲ್ಲಿ ಲಾಭ ದೊರಕಲಿದೆ. 

ಕೆಂಪು ಮತ್ತು ಕಪ್ಪು ಅಥವಾ ಕೆಂಪು ಮಿಶ್ರಿತ ಕಪ್ಪು ಮಣ್ಣಿನಲ್ಲಿ ಸಮೃದ್ಧಿ ಲಭಿಸಲಿದೆ. ವಾಹನ ಮಾರಾಟ ಮಾಡುವವರಿಗೆ ಅನುಕೂಲ. ಶತ್ರುಗಳೂ ಮಿತ್ರರಾಗಲಿದ್ದಾರೆ. 

ಹಿರಿಯರಲ್ಲಿ ದೇಹ ಸ್ಥಿತಿ ಕ್ಷೀಣಿಸಲಿದೆ. ಸರಕಾರಿ ಅಥವಾ ಅರೆ ಸರಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ  ಅನುಕೂಲವಾಗಲಿದೆ. ಅನಾಥ ಮಕ್ಕಳ ಅಥವಾ ಸಾಮಾಜಿಕ ಕಳಕಳಿ ಕಾರ್ಯ ಮಾಡುತ್ತಿರುವವರಿಗೆ ಸರಕಾರ ಅಥವಾ ಸಮಾಜದ ಗೌರವ ಸಿಗಲಿದೆ. 

ಅನ್ಯರ ವಿಚಾರದಲ್ಲಿ ತಲೆ ಹಾಕದಿರುವುದು ಒಳ್ಳೆಯದು. ಸ್ಥಿರಾಸ್ತಿ ಮಾರಾಟ ಉತ್ತಮವಲ್ಲ. ಸಾಲ ಬಾಧೆಯಿಂದ ಪಾರಾಗಿ ಮನಸ್ಸಿನಲ್ಲಿನ ಯೋಜನೆಗಳು ಸಾಕಾರವಾಗಲಿದೆ. 

ರತ್ನ, ಮುತ್ತು, ವಜ್ರ ವ್ಯಾಪಾರಿಗಳಿಗೆ ಅನುಕೂಲ. ಹೂಡಿಕೆಯಲ್ಲಿ ಲಾಭ. ಹಿರಿಯರ ಆಶೀರ್ವಾದ ಸಿಗಲಿದ್ದು, ಶುಕ್ರವಾರ, ಭಾನುವಾರ ಶುಭ ದಿನ.

ಶುಭ ಸಂಖ್ಯೆ: 1 5 7 9

Follow Us:
Download App:
  • android
  • ios