ಸಂಬಂಧಗಳಲ್ಲಿ ಹುಳಿ ಹಿಂಡುವ ಕೆಲಸ ಮಾಡದಿರಿ. ಗುರು ಬಲವಿದೆ. ನಿಮ್ಮ ಅಭಿರುಚಿಗೆ ತಕ್ಕಂತಹ ಸ್ನೇಹಿತರು ಸಿಗಲಿದ್ದಾರೆ.

ಬೈದು ಹೇಳುವುದು ಬದುಕುವುದಕ್ಕಾಗಿಯೇ. ಹಿರಿಯರು ಹೇಳಿದ ಮಾತುಗಳಿಗೆ ಕೋಪ ಬೇಡ. ಹೊಸ ಉತ್ಸಾಹದಿಂದ ಮುನ್ನುಗ್ಗುವಿರಿ

ಆತ್ಮವಂಚನೆ ಮಾಡಿಕೊಳ್ಳದಿರಿ. ಸರಿಯಾದ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆಗಳನ್ನು ನೀಡಿ. ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಕಾರ್ಯ ನಿಮಿತ್ತು ದೂರದ ಪ್ರಯಾಣ ಮಾಡಲಿದ್ದೀರಿ. ಖಾಲಿ ಮಾತುಗಳಿಗೆ ಮರುಳಾಗದಿರಿ. ಚಿನ್ನ ಕೊಳ್ಳುವ ಯೋಗವಿದೆ.

ಹೊಸತನಕ್ಕೆ ತೆರೆದುಕೊಳ್ಳಲಿದ್ದೀರಿ. ಆಹಾರ ಕ್ರಮದಲ್ಲಿ ಬದಲಾವಣೆಯಾಗಲಿದೆ. ಸಂಬಂಧಗಳಲ್ಲಿ ಸಾಮರಸ್ಯ ಮೂಡಲಿದೆ

ಮನೆಯಲ್ಲಿ ಕೆಲಸದ ಒತ್ತಡಗಳು ಅಧಿಕ ವಾಗಲಿವೆ. ನಿರ್ಧಿಷ್ಟ ಗುರಿ ಇಟ್ಟುಕೊಂಡು ಮುಂದೆ ಸಾಗಿ. ಆರೋಗ್ಯದಲ್ಲಿ ಚೇತರಿಕೆ.

ಮೇಲಾಧಿಕಾರಿಯಿಂದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯಲಿದೆ. ಶುಭ ಕಾರ್ಯಗಳಿಗೆ ಅಣಿಯಾಗುವಿರಿ. ಶುಭ ಫಲ.

ನಿಮ್ಮ ಮೇಲೆ ಬಂದ ಆರೋಪಗಳೆಲ್ಲವೂ ಮುಕ್ತವಾಗಲಿವೆ. ಸಿಡುಕಿನ ಸ್ವಾಭಾವದವರಿಗೆ ತುಸು ಸಮಸ್ಯೆಗಳು ಎದುರಾಗಲಿವೆ.

ಎಲ್ಲಾ ಬಲ್ಲೆ ಎಂಬ ಅಹಂಕಾರ ಬೇಡ. ಆತ್ಮೀಯ ಸ್ನೇಹಿತನ ಸ್ನೇಹ ಮರಳಿ ದೊರೆ ಯಲಿದೆ. ಬಂಧುಗಳ ಆಗಮನವಾಗಲಿದೆ

ಹಾಸಿಗೆ ಇದ್ದಷ್ಟು ಕಾಲು ಚಾಚುವ ಹವ್ಯಾಸ ರೂಢಿಸಿಕೊಳ್ಳಿ. ಕನಸುಗಳು ಹೆಚ್ಚಾಗಲಿವೆ. ದೈಹಿಕ ಆರೋಗ್ಯದ ಸಮಸ್ಯೆ ನಿವಾರಣೆ

ಸಂಭ್ರಮಿಸಲು ಸಾಕಷ್ಟು ಕಾರಣಗಳು ಇಂದು ನಿಮ್ಮ ಪಾಲಿಗೆ ಬಂದೊದಗಲಿವೆ. ನಿಮ್ಮಿಂದ ಮತ್ತೊಬ್ಬರಿಗೆ ಮೋಸವಾಗದಂತೆ ವರ್ತಿಸಿ.

ಹೊಸ ಸ್ಥಳ, ಹೊಸ ವ್ಯಕ್ತಿಗಳ ಪರಿಚಯ ವಾಗಲಿದೆ. ಎಲ್ಲಾ ಗೊತ್ತು ಎನ್ನುವ ಅಹಂಕಾರ ಮೀನ ಬೇಡ. ಶ್ರದ್ಧೆಯಿಂದ ಕೆಲಸ ಮಾಡಿ.