ಮೇಷ:ಮನದಲ್ಲಿ ನಂಜು ತುಂಬಿಕೊಂಡಿರುವ ವ್ಯಕ್ತಿಗಳ ಸಹವಾಸ ಬೇಡ. ಹೊಸ ಪ್ರಯತ್ನಗಳನ್ನು ಮಾಡುವ ಮನಸ್ಸಾಗಲಿದೆ.

ವೃಷಭ: ಹಣಕಾಸಿನ ವಿಚಾರದಲ್ಲಿ ಹೆಚ್ಚು ದಾರಾಳಿಯಾಗುವುದು ಬೇಡ. ನಿಮ್ಮಿಂದ ದೂರ ಹೋದವರ ಬಗ್ಗೆ ಚಿಂತೆ ಮಾಡುವುದು ಬೇಡ.

ಮಿಥುನ: ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ. ತಂದೆಯ ಸಹಕಾರದಿಂದ ಹೊಸ ಉದ್ಯಮ ಶುರು ಮಾಡುವಿರಿ.

ಕಟಕ: ದಿನ ಪೂರ್ತಿ ಸಾಕಷ್ಟು ಸಮಯಾವಕಾಶ ನಿಮ್ಮದಾಗಿರಲಿದೆ. ಬಂಧುಗಳು, ಆತ್ಮೀಯರೊಂದಿಗೆ ಒಡನಾಟ ಹೆಚ್ಚಾಗಲಿದೆ.

ಸಿಂಹ: ನಿಮ್ಮ ಸುತ್ತಲೂ ಬಾಯಿ ಬಡುಕರೇ ಹೆಚ್ಚಾಗಲಿದ್ದಾರೆ. ಮಾಡದ ಕೆಲಸಕ್ಕೆ ಮೆಚ್ಚುಗೆ ತೆಗೆದುಕೊಳ್ಳಲು ಮುಂದಾಗದಿರಿ.

ಕನ್ಯಾ: ಹಿಂದಿನ ಕೆಲ ಸಾಲಗಳು ಇಂದು ವಾಪಸ್ಸಾಗಲಿವೆ. ಖರ್ಚಿನ ವಿಚಾರದಲ್ಲಿ ಹೆಚ್ಚು ಹಿಡಿತ ಸಾಧಿಸಿದರೆ ಒಳಿತು. ಶುಭ ವಾರ್ತೆ ಇದೆ

ತುಲಾ: ವ್ಯವಹಾರದ ಬಗ್ಗೆ ಇರುವ ಗೊಂದಲ ಬಗೆಹರಿಯಲಿದೆ. ಸಂತೋಷದಿಂದ ಇದ್ದರೆ ಮಾತ್ರ ಕಾರ್ಯಸಿದ್ಧಿ ಸುಲಭವಾಗುವುದು.

ವೃಶ್ಚಿಕ: ಹೊಸ ಜಾಗಗಳಿಗೆ ಭೇಟಿ ನೀಡಿಲಿದ್ದೀರಿ. ಮನಸ್ಸಿನ ಶಾಂತಿ ಹೆಚ್ಚಾಗಲಿದೆ. ಆಗಿದ್ದೆಲ್ಲವೂ ಒಳ್ಳೆಯದ್ದಕ್ಕೇ ಆಗಿದೆ ಎನ್ನುವುದು ಗೊತ್ತಿರಲಿ.

ಧನಸ್ಸು: ನೀವಿಂದು ಮಾಡಿದ ಪುಣ್ಯ ಕಾರ್ಯ ಮುಂದೆ ಸಹಾಯಕ್ಕೆ ಬರಲಿದೆ. ನಿಮ್ಮ ಕಾಯಕವನ್ನು ನೀವು ಮಾಡಿ, ನಿಂದನೆಗಳಿಗೆ ಅಂಜಬೇಡಿ.

ಮಕರ: ಲೋಕದ ಡೊಂಕನ್ನು ತಿದ್ದುವುದಕ್ಕೆ ಹೋಗದಿರಿ. ನಿಮ್ಮಲ್ಲಿರುವ ಡೊಂಕನ್ನು ತಿದ್ದಿಕೊಂಡರೆ ಅದೇ ನಿಮ್ಮನ್ನು ಕಾಪಾಡುತ್ತದೆ.

ಕುಂಭ: ದಿನ ಪೂರ್ತಿ ಚೈತನ್ಯ ಹೆಚ್ಚಾಗಲಿದೆ. ಹೊಸ ಉತ್ಸಾಹದಿಂದ ಹಿಡಿದ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ಟೀಕೆಗಳಿಂದ ದೂರವಿರಿ.

ಮೀನ: ಕೆಲಸದ ಒತ್ತಡ ಹೆಚ್ಚಾಗಲಿದೆ. ಹಿತ ಶತ್ರುಗಳ ಕಾಟವೂ ಸ್ವಲ್ಪ ಇದೆ. ಸ್ನೇಹಿತರ ಸಹಕಾರದಿಂದ ಮುಂದೆ ಸಾಗಲಿದ್ದೀರಿ. ಶುಭ ಫಲವಿದೆ.