ಮೇಷ:: ದಾರಿ ದೂರ ಎಂದು ಸುಮ್ಮನೆ ಕೈ ಕಟ್ಟಿ ಕುಳಿತರೆ ಗುರಿ ತಲುಪಲು ಸಾಧ್ಯವಿಲ್ಲ. ನಿಧಾನವಾದರೂ ಸರಿ ಗುರಿಯ ಕಡೆಗೆ ನಡಿಗೆ ಆರಂಭಿಸಿ.

ವೃಷಭ: ಕೋಪ ಕಡಿಮೆಯಾಗಬೇಕು ಎಂದರೆ ಮೌನದ ಮೊರೆ ಹೋಗಬೇಕು. ನಿಮ್ಮ ಬಗ್ಗೆ ನಿಂದನೆಗಳು ಬರುವಾಗಲೂ ಶಾಂತಿಯಿಂದ ವರ್ತಿಸಿ.

ಮಿಥುನ: ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಣದ ಮೂಲಕವೇ ಎಲ್ಲವನ್ನೂ ಅಳತೆ ಮಾಡಲು ಹೋಗದಿರಿ. ನಿಧಾನವಾಗಿ ಮುಂದೆ ಸಾಗಿ.

ಕಟಕ: ಮತ್ತೊಬ್ಬರ ಭಾವನೆಗಳಿಗೆ ಹೆಚ್ಚು ಬೆಲೆ ನೀಡುವಿರಿ. ಬೇರೆಯವರು ಮಾಡಿದ ಕೆಲಸದಿಂದ ನೀವು ತಲೆ ತಗ್ಗಿಸಬೇಕಾಗಬಹದು.

ಸಿಂಹ: ಜಾಣತನದಿಂದ ಕೆಲಸ ಮಾಡಿ. ಹೆಚ್ಚು ಕ್ರಿಯಾಶೀಲರಾಗಿರುವ ನಿಮಗೆ ಒಳ್ಳೆಯ ಪ್ರತಿಫಲ ದೊರೆಯಲಿದೆ. ತಾಳ್ಮೆ ಮುಖ್ಯ.

ಕನ್ಯಾ: ಸೋದರರ ನಡುವಿನ ವೈಷಮ್ಯ ನಿವಾರಣೆಯಾಗಲಿದೆ. ಕಣ್ಣಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಓಡಾಟ ಹೆಚ್ಚಬಹುದು.

ತುಲಾ: ಹಿರಿಯರ ಮಾರ್ಗದರ್ಶನದಲ್ಲಿ ಮುಂದೆ ಸಾಗಿ. ಅನಾವಶ್ಯಕ ಚರ್ಚೆಯಲ್ಲಿ ಇಡೀ ದಿನ ತುಲಾ ಕಳೆದುಹೋಗಲಿದೆ. ಸೋಮಾರಿತನ ಬೇಡ.

ವೃಶ್ಚಿಕ: ಪೂರ್ವ ನಿಗದಿತ ಕಾರ್ಯಗಳಲ್ಲಿ ಕೊಂಚ ವ್ಯತ್ಯಾಸವಾಗಲಿದೆ. ದಿನಪೂರ್ತಿ ಕೆಲಸ ಒತ್ತಡ. ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ.

ಧನುಸ್ಸು: ಸಾಂಸ್ಕೃತಿಕ ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದೀರಿ. ದಿನಗೂಲಿ ನೌಕರರಿಗೆ ಒಳ್ಳೆಯ ಲಾಭ ದೊರೆಯಲಿದೆ. ಮನೆಯಲ್ಲಿ ಸಡಗ

ಮಕರ: ಹಿತೈಷಿಗಳನ್ನು ಭೇಟಿ ಮಾಡಿ ನೋವು-ನಲಿವು ಹಂಚಿಕೊಳ್ಳಲಿದ್ದೀರಿ. ನಿಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ.

ಕುಂಭ: ಗೆಳೆಯರೊಂದಿಗೆ ಹೊಸ ಉದ್ಯಮದ ಕುರಿತಾಗಿ ಮಾತುಕತೆ ನಡೆಯಲಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ.

ಮೀನ: ತಾಳ್ಮೆಯಿಂದ ಮಾಡಿದ ಕಾರ್ಯ ಫಲ ನೀಡಿಯೇ ನೀಡುತ್ತದೆ. ದ್ವೇಷದ ಬದಲಿಗೆ ಮೀನ ಪ್ರೀತಿಯ ಮಾತುಗಳಿಂದ ಎಲ್ಲರ ಮನ ಗೆಲ್ಲಿ.