ಮೇಷ:  ಶಶಯೋಗದ ಫಲವಿದೆ, ಮಂತ್ರಿಗಳಿಗೆ, ಶಾಸಕರಿಗೆ ಸರ್ಕಾರಿ ನೌಕರರಿಗೆ ಶುಭಫಲ, ಉದ್ಯೋಗಿಗಳಿಗೆ ಉತ್ತಮ ಫಲವಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ:  ಉತ್ತಮ ಫಲಗಳಿರುವ ದಿನ, ಗುರುವಿನ ಸಹಕಾರವಿರಲಿದೆ, ಓಡಾಡುವಾಗ ಎಚ್ಚರ ಇರಲಿ, ದುರ್ಗಾ ದೇವಸ್ಥಾನಕ್ಕೆ ತುಪ್ಪದ ದೀಪ ಹಚ್ಚಿ

ಮಿಥುನ: ಮಾಲವ್ಯ ಯೋಗವಿದೆ, ಅನುಕೂಲಕರ ವಾತಾವರಣ, ಕೃಷಿಕರಿಗೆ-ವ್ಯಾಪಾರಿಗಳಿಗೆ ಉತ್ತಮ ದಿನ, ಸ್ತ್ರೀಯರಿಗೆ ವಿಶೇಷ ದಿನ, ತಂದೆ-ತಾಯಿಗಳಿಗೆ ನಮಸ್ಕಾರ ಮಾಡಿ

ಕಟಕ:  ಮುಂದಿನ ದಿನಗಳಲ್ಲಿ ಶುಭವಾಗಲಿದೆ, ಶತ್ರುಗಳ ಬಾಧೆ, ಭಯದ ವಾತಾವರಣ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಸಿಂಹ: ದಾಂಪತ್ಯದಲ್ಲಿ -ಮಿತ್ರರಲ್ಲಿ  ಸಂಗಾತಿಯಲ್ಲಿ ಎಚ್ಚರಿಕೆ ಅಗತ್ಯ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಕನ್ಯಾ: ವ್ಯಾಪಾರಿಗಳಿಗೆ ವಿಶೇಷ ಫಲ, ದ್ರವ-ಹಣ್ಣು ವ್ಯಾಪಾರಿಗಳಿಗೆ ಲಾಭ, ಗಿಫ್ಟ್ ಸೆಂಟರ್ ನವರಿಗೆ ಲಾಭದ ದಿನ, ವಿಷ್ಣು ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಇರಲಿ

ತುಲಾ:  ಶತ್ರುಗಳ ನಿವಾರಣೆ, ಸಾಲ ಬಾಧೆಯಿಂದ ಹೊರಬರುತ್ತೀರಿ, ಉತ್ತಮ ಉಪದೇಶ ಸಿಗಲಿದೆ, ಆತ್ಮವಿಶ್ವಾಸ ಮೂಡಲಿದೆ, ನಾಗ ಪ್ರಾರ್ಥನೆ ಮಾಡಿ

ವೃಶ್ಚಿಕ: ಸಮೃದ್ಧಿಯ ಫಲಗಳಿದ್ದಾವೆ, ವಿದ್ಯಾರ್ಥಿಗಳಿಗೆ ವಿಶೇಷ ಫಲ, ಸ್ತ್ರೀಯರಿಂದ ಸಹಕಾರ, ಮಿತ್ರರಿಂದ ಹಣಕಾಸಿನ ಅನುಕೂಲ, ನವಗ್ರಹ ಪ್ರಾರ್ಥನೆ ಮಾಡಿ

ಧನಸ್ಸು:  ಹಂಸಯೋಗ, ಮಾಲವ್ಯ ಯೋಗ ಫಲ, ಉತ್ತಮ ಫಲಗಳಿದ್ದಾವೆ, ಧನ ಸಮೃದ್ಧಿ, ಕುಟುಂಬ ರಕ್ಷಣೆ, ಕುಬೇರ ಯಂತ್ರವನ್ನಿಟ್ಟು ಪೂಜಿಸಿ

ಮಕರ: ಶಶಯೋಗದ ಫಲವಿದೆ, ಗ್ರಾಮ-ಪಟ್ಟಣದ ಒಡೆತನ ಸಿಗಲಿದೆ, ನಿಮ್ಮ ಮಾತಿನಿಂದ ಮತ್ತೊಬ್ಬರಿಗೆ ಆಶ್ರಯ ಸಿಗಲಿದೆ, ಅಧಿಕಾರ ಸಿಗಲಿದೆ, ಶನೈಶ್ಚರ ಪ್ರಾರ್ಥನೆ ಮಾಡಿ

ಕುಂಭ: ಮಾತಿನಲ್ಲಿ ಸಮೃದ್ಧಿ, ಅಧಿಕಾರ ಲಭ್ಯವಾಗಲಿದೆ, ಉತ್ತಮ ಕಾರ್ಯ ಸಿದ್ಧಿ, ಸುಖ ಭೋಜನ, ನಾಗ ಪ್ರಾರ್ಥನೆ ಮಾಡಿ

ಮೀನ:  ಮಾಲವ್ಯ ಯೋಗದ ಫಲವಿದೆ, ಗಾಯಕರಿಗೆ, ವಿದ್ವಾಂಸರಿಗೆ, ಕಲಾವಿದರಿಗೆ ಉತ್ತಮ ಫಲ, ವಸ್ತ್ರ-ಹರಳು-ಹೈನುಗಾರಿಕೆಯವರಿಗೆ ಲಾಭ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕೃಷ್ಣ ಪ್ರಾರ್ಥನೆ ಮಾಡಿ