ಮೇಷ: ನಿಮ್ಮ ತಾಳ್ಮೆ ಪರೀಕ್ಷೆ ಮಾಡುವಂತಹ ಹಲವಾರು ಘಟನೆಗಳು ಇಂದು ನಡೆಯಲಿವೆ. ಯಾವುದಕ್ಕೂ ಅಂಜದೇ ಮುಂದೆ ಸಾಗಿ. 

ವೃಷಭ: ಕಠಿಣ ಪರಿಶ್ರಮಕ್ಕಿಂತ ಬುದ್ಧಿವಂತಿಕೆಯಿಂದ ಮಾಡುವ ಕೆಲಸ ಬೇಗನೇ ಫಲ ನೀಡುತ್ತದೆ. ಆತ್ಮೀಯರೊಂದಿಗೆ ಸಣ್ಣ ವಿರಸ ಉಂಟಾಗಲಿದೆ.

ಮಿಥುನ: ನಿಮ್ಮ ಮೇಲೆ ಇತರರು ಇಟ್ಟಿರುವ ನಂಬಿಕೆಗೆ ದ್ರೋಹ ಬಗೆಯುವ ಪ್ರಯತ್ನ ಬೇಡ.ತಾಳ್ಮೆಯಿಂದ ಮುಂದೆ ಸಾಗಿದರೆ ಫಲವಿದೆ.

ಕಟಕ: ಧರ್ಮ ಕಾರ್ಯಗಳಲ್ಲಿ ಆಸಕ್ತಿ ಉಂಟಾಗಲಿದೆ. ಇಡೀ ದಿನ ತುಂಬಾ ಚಟುವಟಿಕೆಯಿಂದ ಇರಲಿದ್ದೀರಿ. ಉತ್ಸಾಹವೇ ಉನ್ನತಿಗೆ ದಾರಿ.

ಸಿಂಹ: ಹಿಡಿದ ಕೆಲಸವನ್ನು ಎಷ್ಟೇ ಕಷ್ಟವಾದರೂ ಇಂದೇ ಮಾಡಿ ಮುಗಿಸಿ. ನಾಳೆ ಎನ್ನುವುದು ಯಾವತ್ತೂ ನಿಮ್ಮ ಕೈಯಲ್ಲಿ ಇರುವುದಿಲ್ಲ.

ವಾರ ಭವಿಷ್ಯ: ಈ ರಾಶಿಯವರ ಕಷ್ಟ ಕಾಲಕ್ಕೆ ಕೊನೆ, ಇನ್ನು ನೆಮ್ಮದಿಯಿಂದಿರಿ!

ಕನ್ಯಾ: ನೀವು ಮಾಡುವ ಎಲ್ಲಾ ಕಾರ್ಯಗಳೂ ಇಂದು ಫಲ ನೀಡದೇ ಇದ್ದರೂ ಮುಂದಿನ ದಿನಗಳಲ್ಲಿ ಅವುಗಳಿಂದ ಫಲ ಇದ್ದೇ ಇದೆ.

ತುಲಾ: ನಿಂದನೆಗಳು ಬರುವುದು ಸಹಜ. ಹಾಗೆಂದು ಅವುಗಳಿಗೆ ಹೆದರಿಕೊಂಡು ಕೂರುವುದು ಬೇಡ. ಬದುಕು ಬಂದ ಹಾಗೆ ಸ್ವೀಕಾರ ಮಾಡಿ.

ವೃಶ್ಚಿಕ: ನಿಮ್ಮ ಉತ್ಸಾಹವೇ ಇಂದು ನಿಮ್ಮನ್ನು ಹೊಸ ಅವಕಾಶದ ಬಳಿ ಕರೆದೊಯ್ಯಲಿದೆ. ಮತ್ತೊಬ್ಬರಿಗೆ ಕಿರಿಕಿರಿ ಮಾಡದಿರಿ.

ಧನುಸ್ಸು: ಅನಿರೀಕ್ಷಿತವಾಗಿ ಗೆಳೆಯರೊಂದಿಗೆ ಪ್ರವಾಸ ಹೊರಡಿಲಿದ್ದೀರಿ. ಕ್ಷುಲ್ಲಕ ಕಾರಣಗಳಿಗೆ ಚಿಂತೆ ಮಾಡುತ್ತಾ ಕೂರುವುದು ಬೇಡ

ಮಕರ: ಕರ್ತವ್ಯದಲ್ಲಿ ಲೋಪ ಬರದಂತೆ ಎಚ್ಚರ ವಹಿಸಿ. ಪ್ರಶಂಸೆ ಬೇಕು ಎಂದರೆ ಕಠಿಣವಾದ ಪರಿಶ್ರಮ ಹಾಕಲೇಬೇಕು. ಧೈರ್ಯ ಇರಲಿ

ಕುಂಭ: ಖರ್ಚಿನ ಮೇಲೆ ಹಿಡಿತ ಇರಲಿ. ಎಲ್ಲರನ್ನೂ ಪ್ರೀತಿಯಿಂದ ಕಾಣುವಿರಿ. ನಿಮ್ಮದಲ್ಲದ ವಿಚಾರಗಳಿಗೆ ನೀವು ಚಿಂತೆ ಮಾಡದಿರಿ

ಮೀನ: ಆರ್ಥಿಕ ಪ್ರಗತಿ. ಸಂಸಾರದಲ್ಲಿ ಸಂತೋಷ ಇರಲಿದೆ. ಇಡೀ ದಿನ ಸಂಭ್ರಮದಿಂದ ಕೂಡಿರಲಿದೆ. ಅಂದುಕೊಂಡಿದ್ದು ಆಗಲಿದೆ