ಹೆಚ್ಚಲಿದೆ ಸಂತೋಷ : ನಿರಾಳವಾಗಲಿದೆ ಮನಸು

ಮೇಷ
ಸುಮ್ಮನೆ ನಿಂತರೆ ಏನೂ ಮಾಡಲಾಗುವುದಿಲ್ಲ.
ನಡೆಯಲು ಸಾಧ್ಯವಾಗದೇ ಇದ್ದರೆ ತೆವಳಿ
ಕೊಂಡಾದರೂ ಮುಂದೆ ಸಾಗಿ. ಗುರಿ ಸಿಕ್ಕೀತು.

ವೃಷಭ
ಹಿರಿಯರ ಮಾರ್ಗದರ್ಶನ ಅವಶ್ಯಕವಾಗಿ
ಬೇಕಾದೀತು. ಯಾರಿಗೂ ನೋವಾಗುವಂತೆ
ನಡೆದುಕೊಳ್ಳದಿರಿ. ಸಂತಸ ಹೆಚ್ಚಲಿದೆ.

ಮಿಥುನ
ಸಂಜೆ ವೇಳೆಗೆ ಮನಸ್ಸು ನಿರಾಳವಾಗಲಿದೆ.
ಹಿರಿಯರ ಭೇಟಿ. ಸುಂದರವಾದ ಹೂವನ್ನು
ನೋಡುತ್ತಾ ಕೂರಿ, ಚಿವುಟಿ ಕೊಲ್ಲದಿರಿ.

ಕಟಕ
ಆಸೆಗಳು ಹೆಚ್ಚಾಗಿರುತ್ತವೆ. ಆದರೆ ಅದನ್ನು
ಈಡೇರಿಸಿಕೊಳ್ಳುವ ಭರದಲ್ಲಿ ದುಡುಕದಿರಿ.
ತಂದೆ ತಾಯಿಯ ಮಾತಿನಲ್ಲಿ ಪ್ರೀತಿ ಹೆಚ್ಚಲಿದೆ.

ಸಿಂಹ
ಸೌಂದರ್ಯ ಪ್ರಜ್ಞೆ ಹೆಚ್ಚಾಗಲಿದೆ. ನಿಮ್ಮ
ಸ್ನೇಹಿತ ವಲಯಕ್ಕೆ ನಿಮ್ಮಿಂದ ಹೆಚ್ಚು
ಉಪಯೋಗವಾಗಲಿದೆ. ಶುಭ ಫಲ.

ಕನ್ಯಾ
ಉಳಿತಾಯಕ್ಕೆ ಮನಸ್ಸು ಮಾಡುವಿರಿ. ನಿಮ್ಮ
ಇಂದಿನ ಉಳಿತಾಯ ಮುಂದೆ ಕಷ್ಟಕಾಲದಲ್ಲಿ
ನಿಮ್ಮ ಕೈ ಹಿಡಿಯಲಿದೆ. ಶಾಂತಿ ನೆಲೆಸಲಿದೆ.

ತುಲಾ 
ದೊಡ್ಡ ಮೊತ್ತದ ವ್ಯವಹಾರಕ್ಕೆ ಇಂದು
ಮುಂದಾಗುವಿರಿ. ತಾಳ್ಮೆ ಮತ್ತು ವ್ಯವಸ್ಥಿತವಾಗಿ
ಕೆಲಸ ಮಾಡಿದರೆ ಯಶಸ್ಸು ಖಚಿತ.

ವೃಶ್ಚಿಕ
ಹೊಸ ಸ್ನೇಹಿತರ ಸಂಖ್ಯೆ ಹೆಚ್ಚಾಗಲಿದೆ.
ಮಾಡುವ ಕೆಲಸದ ಕಡೆಗೆ ಹೆಚ್ಚು ಗಮನ
ಇರಲಿ. ನಿಮ್ಮ ಮಾತಿಗೆ ಮಾನ್ಯತೆ ಸಿಗಲಿದೆ. 

ಧನುಸ್ಸು
ಇಂದು ಯಾರ ಮೇಲೂ ಹೆಚ್ಚು ನಂಬಿಕೆ
ಇಡುವುದು ಬೇಡ. ಪರ್ಯಾಯಗಳನ್ನು
ಹುಡುಕಿಕೊಂಡಿರಿ. ಕೆಲಸ ಕೈಗೂಡಲಿದೆ.

ಮಕರ
ತಲೆಯ ಮೇಲೆ ತೂಗುಕತ್ತಿ ಇರುವಾಗ
ನೆಮ್ಮದಿ ದೂರ. ಎಲ್ಲವೂ ಒಳಿತೇ ಆಗಲಿದೆ
ಎನ್ನುವ ನಂಬಿಕೆಯಿಂದ ಮುಂದೆ ಸಾಗಿ.

ಕುಂಭ
ಪ್ರತಿ ನಿಮಿಷವನ್ನೂ ವ್ಯರ್ಥ ಮಾಡದಂತೆ
ಕೆಲಸ ಮಾಡುವಿರಿ. ಹೆಚ್ಚು ಒತ್ತಡವಿದ್ದರೂ
ದಿನಾಂತ್ಯಕ್ಕೆ ವೃತ್ತಿ ತೃಪ್ತಿ ಸಿಕ್ಕಲಿದೆ.

ಮೀನ 
ಸಣ್ಣ ತಪ್ಪಿನಿಂದ ಇಡೀ ದಿನ ಚಿಂತೆ ಹೆಚ್ಚಲಿದೆ.
ರಾತ್ರಿಗೆ ಎಲ್ಲವೂ ಒಳಿತಾಗಲಿದೆ. ಅಪ್ಪನ
ಜೇಬನ್ನೇ ಹೆಚ್ಚು ಅವಲಂಭಿಸುವುದು ಬೇಡ.