Asianet Suvarna News Asianet Suvarna News

ಈ ರಾಶಿಯವರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ

ಈ ರಾಶಿಯವರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ.

Daily Horoscope 12th january 2019
Author
Bangalore, First Published Jan 12, 2019, 7:25 AM IST

ಮೇಷ: ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಬಾಧೆಗಳು ಎದುರಾದರೂ ಅದನ್ನು ನಿವಾರಿಸಲಿದ್ದೀರಿ

ವೃಷಭ: ಯಾರದೋ ತಪ್ಪಿನಿಂದ ನಿಮಗೆ ಶಿಕ್ಷೆಗಳು ಎದುರಾಗಬಹುದು. ಸಮಸ್ಯೆ ಎದುರಾದರೂ ಧೈರ್ಯದಿಂದ ಎದುರಿಸಲಿದ್ದೀರಿ.

ಮಿಥುನ: ಯಾರಿಗೂ ಎದುರು ಮಾತನಾಡದಿರುವುದು ಉತ್ತಮ. ಕೆಲಸದ ವಿಚಾರದಲ್ಲಿ ಕಿರಿ-ಕಿರಿ ಯಾದರೂ ದುಡುಕದೆ ಬಗೆಹರಿಸುವಿರಿ.

ಕಟಕ: ಎಷ್ಟೋ ದಿನದ ನಿಮ್ಮ ಶ್ರಮ ಫಲಿಸಲಿದೆ. ಮಹಿಳೆಯರಿಗೆ ಕಂಕಣ ಭಾಗ್ಯ. ಕಟ್ಟಡ ಕಾರ್ಮಿಕರಿಗೆ ಲಾಭ. ಆರೋಗ್ಯ ವೃದ್ಧಿ.

ಸಿಂಹ: ಮನುಷ್ಯ ರೂಪದ ವಿಷಜಂತುಗಳಿಂದ ದೂರ ಇರುವುದು ನಿಮ್ಮ ಬದುಕಿಗೆ ಉತ್ತಮ. ಕಾರ್ಮಿಕರಿಗೆ ಹಾಗೂ ಮಹಿಳೆಯರಿಗೆ ಲಾಭ.

ಕನ್ಯಾ: ಎಂದೋ ನಡೆದ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳದಿರಿ. ದೂರಾದವರು ಹತ್ತಿರವಾಗಲಿದ್ದಾರೆ. ಶುಭ ದಿನ ನಿಮ್ಮ ಪಾಲಿಗೆ ಇದಾಗಲಿದೆ.

ತುಲಾ: ಮುಗ್ದರಾಗಿದ್ದರೆ ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಕಟುವಾದ ಮಾತು ತುಲಾ ನೋವು ತರುವ ಸಾಧ್ಯತೆ. ಎಚ್ಚರ ಇರಲಿ.

ವೃಶ್ಚಿಕ: ಶಾಂತ ಮನಸ್ಸಿನಿಂದ ಸಕಲ ಕಾರ್ಯಗಳಲ್ಲೂ ಯಶಸ್ಸು ಕಾಣುವಿರಿ. ದಿನದಂತ್ಯದಲ್ಲಿ ತಲೆನೋವಿನ ವಿಚಾರಗಳು ಎದುರಾಗಲಿದೆ.

ಧನುಸ್ಸು: ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಲಿದೆ. ಮೌನ ಸಿದ್ಧಿ.

ಮಕರ: ಸ್ನೇಹಿತರಿಂದ ಸಂತಸ. ದೂರ ಪ್ರಯಾಣ ಸಾಧ್ಯ. ದಿನದಂತ್ಯದಲ್ಲಿ ಶುಭ ಸುದ್ದಿ. ಶುಭ ದಿನ. ಮಾತಿನಲ್ಲಿ ಎಚ್ಚರಿಕೆ ಇರಲಿ.

ಕುಂಭ: ದುಶ್ಚಟಗಳಿಂದ ನಿಮಗೂ ಹಾಗೂ ನಿಮ್ಮವರಿಗೂ ಮಾರಕವಾಗಬಹುದು. ಅದರಿಂದ ದೂರ ಇರುವುದು ಒಳಿತು. ವ್ಯಾಪಾರಿಗಳಿಗೆ ಲಾಭ.

ಮೀನ: ಓದಿನ ವಿಚಾರದಲ್ಲಿ ದುಡುಕು ನಿರ್ಧಾರದಿಂದ ಎಚ್ಚರ. ಹಿರಿಯರಲ್ಲಿ ಗೌರವ ಹೆಚ್ಚಲಿದೆ. ಮೀನ ಆರೋಗ್ಯದಲ್ಲಿ ಕೊಂಚ ಏರುಪೇರು.

Follow Us:
Download App:
  • android
  • ios