ಈ ರಾಶಿಗೆ ಇಂದು ಸೂಕ್ತ ಪ್ರತಿಫಲ ಸಿಗಲಿದೆ

ಮೇಷ
ಬಯಸಿದ್ದೆಲ್ಲವೂ ದಕ್ಕುವುದಿಲ್ಲ. ಬೇಡದ
ವಸ್ತುವಿಗೆ ಆಸೆ ಮಾಡುವುದು ಒಳಿತಲ್ಲ.
ಪಕ್ಷಿಗಳ ಬಗ್ಗೆ ವಿಶೇಷ ಒಲವು ಉಂಟಾಗಲಿದೆ.

ವೃಷಭ
ನಿಮ್ಮ ಒಳಿತಿಗಾಗಿ ಹೆಚ್ಚು ಶ್ರಮಪಡುವ
ವ್ಯಕ್ತಿಗಳು ಸಿಕ್ಕಲಿದ್ದಾರೆ. ಸೋತೆನೆಂಬ ಹತಾಶೆ
ಬೇಡ. ಕಠಿಣ ಪರಿಶ್ರಮದ ಅಗತ್ಯವಿದೆ.

ಮಿಥುನ
ರಾಜಕಾರಣದ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ಆರೋಗ್ಯದ
ವಿಚಾರದಲ್ಲಿ ವೈದ್ಯರ ಸಲಹೆಗಳನ್ನು ಪಾಲಿಸಿ.

ಕಟಕ
ದೂರದ ಬೆಟ್ಟ ಯಾವಾಗಲೂ ನುಣ್ಣಗೇ
ಕಾಣಿಸುತ್ತದೆ. ಸರಿಯಾಗಿ ಪರೀಕ್ಷೆ ಮಾಡದೇ
ಏನನ್ನೂ ಒಪ್ಪಿಕೊಳ್ಳದಿರಿ. ಕೆಲಸ ಹೆಚ್ಚಲಿದೆ.

ಸಿಂಹ
ನಿಂದಿಸುವವರ ಬಗ್ಗೆ ಹೆಚ್ಚು ಯೋಚನೆ
ಮಾಡುವುದು ಸಲ್ಲದು. ಕಾರ್ಯವಾಸಿ ಕತ್ತೆ
ಕಾಲು ಎನ್ನುವ ಹಾಗೆ ಹೊಂದಾಣಿಕೆ ಬೇಕು.

ಕನ್ಯಾ
ಸುಖವನ್ನು ಹುಡುಕಿಕೊಂಡು ಹೊರಡುವುದು
ಬೇಡ. ಅದು ನಿಮ್ಮ ಅಂತರಂಗದಲ್ಲಿಯೇ
ಇದೆ. ಪ್ರಾಮಾಣಿಕತ ಪ್ರಯತ್ನಕ್ಕೆ ಒಳ್ಳೆಯ ಫಲ.

ತುಲಾ 
ಸೂಜಿ ಮೊನೆಯಷ್ಟು ಬುದ್ದಿವಂತಿಕೆಯಿಂದ
ಕಾರ್ಯಸಾಧುವಾಗುತ್ತದೆ. ಹಿತವಾದ
ಮಾತುಗಳಿಂದ ಎಲ್ಲರ ಮನ ಗೆಲ್ಲುವಿರಿ.

ವೃಶ್ಚಿಕ
ಸಿಕ್ಕಿದ್ದರಲ್ಲಿ ಹೆಚ್ಚು ತೃಪ್ತಿ ಹೊಂದಲಿದ್ದೀರಿ.
ನಾಳೆಯ ಕೆಲಸವನ್ನು ಇಂದೇ ಮಾಡಿ
ಮುಗಿಸಿಕೊಳ್ಳಿ. ಅತಿಯಾದ ಆತುರ ಸಲ್ಲದು. 

ಧನುಸ್ಸು
ಅಹಂನಿಂದ ಮಾನಹಾನಿಯೇ ಹೆಚ್ಚು.
ಪ್ರೀತಿಯಿಂದ ಎಲ್ಲರನ್ನೂ ಕಾಣುವ ಗುಣ
ಬೆಳೆಯಲಿದೆ. ಸಂಜೆಗೆ ಶುಭವಾಗಲಿದೆ.

ಮಕರ
ನಿಸ್ವಾರ್ಥ ಜನರ ಪರಿಚಯವಾಗಲಿದೆ.
ಆತ್ಮರತಿಗೆ ಸಾಧ್ಯವಾದಷ್ಟು ಬ್ರೇಕ್ ಹಾಕಿರಿ.
ಹತ್ತಿರದವರು ದೂರಾಗಲಿದ್ದಾರೆ. ಮೌನ ಲೇಸು.

ಕುಂಭ
ನಿಮ್ಮ ಚಾರಿತ್ರ್ಯಕ್ಕೆ ಹೊಂದುವಂತಹ
ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೀರಿ.
ಆಡಿಕೊಳ್ಳುವವರ ಮಾತಿಗೆ ಮಾನ್ಯತೆ ಬೇಡ.

ಮೀನ
ಆತ್ಮ ಬಲದಿಂದ ಯಶಸ್ಸು ಸಾಧ್ಯವಾಗಲಿದೆ.
ಕೆಟ್ಟ ಮಾತುಗಳನ್ನಾಡಿ ಇತರರಿಗೆ ನೋವು
ನೀಡದಿರಿ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ.