Asianet Suvarna News Asianet Suvarna News

ಒಂದು ರಾಶಿಗೆ ಹೊಸ ನಿರ್ಧಾರ ಒಂದರಿಂದ ಶುಭ ಒಲಿಯಲಿದೆ

ಶನಿವಾರ ಫೆಬ್ರವರಿ 8 ಯಾವ ರಾಶಿಗೆ ಯಾವ ಫಲ, ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ..?

Daily Astrology in Kannada 08 Feb 2020 horoscope
Author
Bengaluru, First Published Feb 8, 2020, 7:13 AM IST


ಮೇಷ
ಎಲ್ಲಾ ಕಡೆಗಳಲ್ಲೂ ದೇವರನ್ನು ಹುಡುಕಿ
ಹೊರಡದಿರಿ. ಮಾಡುವ ಕೆಲಸದಲ್ಲೇ ಅವನು
ನಿಮಗೆ ಸಿಕ್ಕುತ್ತಾನೆ. ಕಾಯಕ ಮಾಡಿ.

ವೃಷಭ
ಅತಿಯಾದ ಹೊಗಳಿಕೆಯ ಮಾತುಗಳಿಗೆ
ಕಿವಿಯಾಗದಿರಿ. ಧೈರ್ಯದಿಂದ ಹೊಸ
ನಿರ್ಧಾರಗಳನ್ನು ಕೈಗೊಳ್ಳುವಿರಿ. ಶುಭ ಫಲ.

ಮಿಥುನ
ಆತುರದ ಕೈಗೆ ಬುದ್ಧಿ ಕೊಡದಿರಿ. ಎಲ್ಲರನ್ನೂ
ಪ್ರೀತಿಯಿಂದ ಕಾಣುವುದರಿಂದ ನಿಮಗೂ
ಎಲ್ಲರಿಂದ ಪ್ರೀತಿ ದೊರೆಯುವುದು.

ಕಟಕ
ದೂರುಗಳ ಬಗ್ಗೆ ಹೆಚ್ಚು ಚಿಂತೆ ಮಾಡುವುದು
ಬೇಡ. ಆಡಿಕೊಳ್ಳುವವರ ಮುಂದೆ ಬೆಳೆದು
ನಿಲ್ಲುತ್ತೇನೆ ಎನ್ನುವ ಸಂಕಲ್ಪ ಮಾಡಿ.

ಜೇಬಿಗೆ ಹೊರೆಯಾಗದಂತೆ ಮನೆ ಅಂದ ಹೆಚ್ಚಿಸುವುದು ಹೇಗೆ?...

ಸಿಂಹ
ಶಾಂತ ಮನಸ್ಸಿನಿಂದ ಮಾಡಿದ ಕೆಲಸಗಳು
ಹೆಚ್ಚು ಯಶ ಕಾಣುತ್ತವೆ. ಹಾಗಾಗಿ ಬೆಳಿಗ್ಗೆಯ
ವೇಳೆ ಶಾಂತ ಚಿತ್ತದಿಂದ ಕೆಲಸ ಆರಂಭಿಸಿ.

ಕನ್ಯಾ
ಎಲ್ಲವೂ ನೀವು ಅಂದುಕೊಂಡಂತೆಯೇ
ಆಗಲಿವೆ. ಸ್ನೇಹಿತರಿಂದ ನಿಮಗೆ ಆರ್ಥಿಕ
ಸಹಕಾರ ದೊರೆಯಲಿದೆ. ತಾಳ್ಮೆ ಇರಲಿ.

ತುಲಾ
ದಿನವಿಡೀ ನಗುಮುಖದಿಂದ ಇರುವಿರಿ.
ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಿ.
ಅಧಿಕಾರಿ ವರ್ಗಕ್ಕೆ ಹೆಚ್ಚು ಕೆಲಸದ ಒತ್ತಡ.

ವೃಶ್ಚಿಕ
ಸ್ವಾರ್ಥಿಗಳ ಸಂಗಡದಿಂದ ದೂರವಾಗಿರಿ.
ನಿಮ್ಮ ಎಲ್ಲಾ ಕೆಲಸಗಳನ್ನೂ ಸಮರ್ಥಿಸಿ
ಕೊಳ್ಳುವುದು ಬೇಡ. ಜಾಣತನ ಹೆಚ್ಚಲಿದೆ. 

ಧನುಸ್ಸು
ನಿಮ್ಮಲ್ಲಿರುವ ಒಳ್ಳೆಯ ಚಿಂತನೆಯಿಂದ
ದಿನಾಂತ್ಯಕ್ಕೆ ಒಳ್ಳೆಯ ಕಾರ್ಯವೂ ಆಗಲಿದೆ.
ಕೆಡುಕು ಮಾಡುವವರು ಕಡಿಮೆಯಾಗಲಿದ್ದಾರೆ.

ಮಕರ
ಪ್ರಸ್ತುತ ರಾಜಕಾರಣದ ಬಗ್ಗೆ ಆಸಕ್ತಿ
ಹೆಚ್ಚಾಗಲಿದೆ. ನಿಮ್ಮ ಶಕ್ತಿಗೆ ತಕ್ಕಂತಹ
ಜವಾಬ್ದಾರಿಗಳನ್ನು ಹೊತ್ತು ಕೊಳ್ಳುವಿರಿ.

ಕುಂಭ
ಮತ್ತೊಬ್ಬರ ಬಗ್ಗೆ ಹೆಚ್ಚು ಚಿಂತೆ ಮಾಡುವುದು
ಬೇಡ. ನಿಮ್ಮ ನಿಮ್ಮ ಕಾಯಕದಲ್ಲಿ ನಿರತರಾಗಿ.
ಶ್ರಮಕ್ಕೆ ತಕ್ಕಂತಹ ಪ್ರತಿಫಲ ದೊರಯಲಿದೆ.

ಮೀನ 
ನೀವು ನಿಂತಿರುವ ಸ್ಥಳದ ಬಗ್ಗೆ ನಿಮಗೆ ಅರಿವು
ಇರಲಿ. ಹೆಚ್ಚು ಮಾತನಾಡುವುದು ಬೇಡ.
ಸಲ್ಲದ ವಿಚಾರಗಳನ್ನು ಮನಸ್ಸಿನಿಂದ ತೆಗೆಯಿರಿ.

Follow Us:
Download App:
  • android
  • ios