ಮಂಕಿಪಾಕ್ಸ್ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಡಬ್ಲ್ಯುಎಚ್‌ಒ ಸಲಹೆ

By Kannadaprabha News  |  First Published Aug 18, 2024, 7:30 AM IST

ಮಂಕಿಪಾಕ್ಸ್‌ನ ಹರಡುವಿಕೆಯನ್ನು ನಿಯಂತ್ರಿಸಲು ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ತಯಾರಿಕಾ ಕಂಪನಿಗಳಿಗೆ ಸೂಚಿಸಿದೆ. 


ಜಿನೆವಾ (ಆ.18): ಮಂಕಿಪಾಕ್ಸ್‌ನ ಹರಡುವಿಕೆಯನ್ನು ನಿಯಂತ್ರಿಸಲು ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ತಯಾರಿಕಾ ಕಂಪನಿಗಳಿಗೆ ಸೂಚಿಸಿದೆ. ಆಫ್ರಿಕಾದ ಕಾಂಗೋದಲ್ಲಿ ಕ್ಲೇಡ್‌ 1ಬಿ ಮಂಕಿಪಾಕ್ಸ್ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಈ ಸಲಹೆ ನೀಡಿದೆ. ಇದರ ಜೊತೆಗೆ ಈಗಾಗಲೇ ಮಂಕಿಪಾಕ್ಸ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ದೇಶಗಳಿಗೆ, ಲಸಿಕೆ ಸಂಗ್ರಹಗಳಿರುವ ದೇಶಗಳು ದಾನ ಮಾಡುವಂತೆ ಕೇಳಿದೆ.

ಸಾಮಾನ್ಯಾಗಿ ಮಂಕಿಪಾಕ್ಸ್‌ ನಿಯಂತ್ರಣಕ್ಕೆ ಎರಡು ಲಸಿಕೆಗಳನ್ನು ಬಳಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಂಕಿಪಾಕ್ಸ್‌ ನಿಯಂತ್ರಣಕ್ಕೆ ಎಂವಿಎ- ಬಿಎನ್ ಮತ್ತು ಎಲ್‌ಸಿ16 ಎನ್ನುವ ಎರಡು ಲಸಿಕೆಗಳನ್ನು ಬಳಸಲಾಗುತ್ತಿದೆ. ಇದರಲ್ಲಿ ಎಂವಿಎ- ಬಿಎನ್‌ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ಎರಡು ಬಾರಿ ನೀಡಲಾಗುತ್ತದೆ. ಇನ್ನು ಎಲ್‌ಸಿ 16 ಲಸಿಕೆ ಜಪಾನ್‌ ಮೂಲದ್ದು. ಈ ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ವಕ್ತಾರೆ ಮಾರ್ಗರೇಟ್‌ ಹ್ಯಾರಿಸ್‌ ನೀಡಿರುವ ಮಾಹಿತಿ ಪ್ರಕಾರ, ‘ಈಗಾಗಲೇ 5 ಲಕ್ಷ ಎಂವಿಎ- ಬಿನ್ ಲಸಿಕೆ ಸಂಗ್ರಹವಿದೆ. 

Tap to resize

Latest Videos

ಆಫ್ರಿಕಾ ದೇಶಗಳಿಗೆ ಹಬ್ಬಿರುವ ಮಂಕಿಪಾಕ್ಸ್‌ ಪಾಕ್‌ಗೂ ಲಗ್ಗೆ: ಭಾರತಕ್ಕೂ ಆತಂಕ..!

ಒಂದು ವೇಳೆ ಖರೀದಾರರ ಬೇಡಿಕೆಯಿದ್ದರೆ 24 ಲಕ್ಷ ದಷ್ಟು ಲಸಿಕೆ ಉತ್ಪಾದಿಸಬಹುದು. 2025ರ ವೇಳೆಗೆ 1 ಕೋಟಿಯಷ್ಟು ಲಸಿಕೆ ಉತ್ಪಾದಿಸಬಹುದು’ ಎಂದಿದ್ದಾರೆ. ಇನ್ನು ಎಲ್‌ಸಿ16 ವ್ಯಾವಹಾರಿಕ ಉದ್ದೇಶದಿಂದ ಬಳಕೆಯಾಗಿಲ್ಲ. ಬದಲಿಗೆ ಇದು ಜಪಾನ್ ಸರ್ಕಾರ ಉತ್ಪಾದಿಸಿದ್ದು, ಈ ಲಸಿಕೆ ಗಣನೀಯ ಪ್ರಮಾಣದಲ್ಲಿ ಸದ್ಯದ ಮಟ್ಟಿಗೆ ಸಂಗ್ರಹವಿದೆ. ಆದರೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಸೂಚನೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯು 100ಕ್ಕೂ ಹೆಚ್ಚಿನ ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಕಾಣಿಸಿಕೊಂಡ ಬೆನ್ನಲ್ಲೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿತ್ತು.

click me!