ಅಲ್‌ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು ಅಮೆರಿಕ ಸೇನೆ ಡ್ರೋನ್ ದಾಳಿ ಮೂಲಕ ಹತ್ಯೆಗೈದಿದೆ. ಈ ಕುರಿತು ಕುರಿತು ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡಿದ್ದಾರೆ.
ಕಾಬೂಲ್ (ಆ.2): ಅಘ್ಘಾನಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದ ಅಲ್‌ಖೈದಾ ಮುಖ್ಯಸ್ಥ 71 ವರ್ಷದ ಅಯ್ಮನ್ ಅಲ್-ಜವಾಹಿರಿಯನ್ನು ಅಮೆರಿಕ ಸೇನೆ ಡ್ರೋನ್ ದಾಳಿ ಮೂಲಕ ಹತ್ಯೆಗೈದಿದೆ. ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ವಿರುದ್ಧದ ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕುರಿತು ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡಿದ್ದಾರೆ. ವಾರಾಂತ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಅಫ್ಘಾನಿಸ್ತಾನದಲ್ಲಿ ಗಮನಾರ್ಹ ಅಲ್ ಖೈದಾ ಉಗ್ರರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಿದೆ. ಸೆಪ್ಟೆಂಬರ್ 11, 2001 ದಾಳಿಯ ಶಂಕಿತ ಮಾಸ್ಟರ್ ಮೈಂಡ್ ವಿರುದ್ಧದ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿಯನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜು. 31 ರಂದು ಕಾಬೂಲ್ ನಗರದ ಶೆರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ವಾಯುದಾಳಿ ನಡೆಸಿ ಅಲ್‌ಖೈದಾ ನಾಯಕನನ್ನು ಕೊಲ್ಲಲಾಗಿದೆ. ಈ ಮೂಲಕ WTC ದಾಳಿಯ ಅಪರಾಧಿಯನ್ನು ಹತ್ಯೆಗೈದು 21 ವರ್ಷದ ಸೇಡನ್ನು ಅಮೆರಿಕ ತೀರಿಸಿಕೊಂಡಿದೆ. 2011 ರಲ್ಲಿ ಒಸಮಾ ಬಿನ್ ಲಾಡೆನ್ ಹತ್ಯೆಯಾದ ಬಳಿಕ ಆತನ ಉತ್ತರಾಧಿಕಾರಿಯಾಗಿ ಅಲ್‌ಖೈದಾ ಉಗ್ರ ಸಂಘಟನೆಯನ್ನು ಅಯ್ಮನ್ ಅಲ್-ಜವಾಹಿರಿ ಮುನ್ನಡೆಸುತ್ತಿದ್ದ.
ವಿಶೇಷವೆಂದರೆ ಅಘ್ಘಾನಿಸ್ತಾನದಲ್ಲಿದ್ದ ತನ್ನ ಸೇನೆಯನ್ನು ಅಮೆರಿಕ ಸಂಪೂರ್ಣ ಹಿಂತೆಗೆದುಕೊಂಡ ಬಳಿಕ ಮೊದಲ ದಾಳಿಯಾಗಿದೆ. ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ಅಘ್ಘಾನಿಸ್ತಾನ ಉಗ್ರ ಸಂಘಟನೆ ತಾಲಿಬಾನ್ ಅಧಿಪತ್ಯದಲ್ಲಿದೆ.
ಶನಿವಾರ, ನನ್ನ ನಿರ್ದೇಶನದ ಮೇರೆಗೆ, ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಸೇನೆ ಯಶಸ್ವಿಯಾಗಿ ವೈಮಾನಿಕ ದಾಳಿಯನ್ನು ನಡೆಸಿತು, ಅದು ಅಲ್-ಖೈದಾದ ಜವಾಹಿರಿಯನ್ನು ಕೊಂದಿತು. ನ್ಯಾಯ ಸಿಕ್ಕಿದೆ. ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ಟ್ವೀಟ್ ಮಾಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ತನ್ನ ಸಂಕಲ್ಪವನ್ನು ಮುಂದುವರೆಸಿದೆ. ನಮಗೆ ಹಾನಿ ಮಾಡಲು ಬಯಸುವವರ ವಿರುದ್ಧ ಅಮೆರಿಕನ್ ಜನರನ್ನು ರಕ್ಷಿಸುವ ನಮ್ಮ ಸಾಮರ್ಥ್ಯವನ್ನು ತೋರಿಸಿದೆ. ಇಂದು ರಾತ್ರಿ ನಾವು ಸ್ಪಷ್ಟಪಡಿಸಿದ್ದೇವೆ. ಎಷ್ಟು ಹೊತ್ತಾದರೂ ಸರಿ. ಎಲ್ಲಿ ಅಡಗಲು ಪ್ರಯತ್ನಿಸಿದರೂ ಸರಿ. ನಾವು ನಿಮ್ಮನ್ನು ಹುಡುಕುತ್ತೇವೆ ಎಂದು ಎಚ್ಚರಿಕೆಯ ಟ್ವೀಟ್ ಕೂಡ ಮಾಡಿದ್ದಾರೆ ಬೈಡೆನ್.
ಜವಾಹಿರಿ ಬಗ್ಗೆ ತಿಳಿದುಕೊಳ್ಳಬೇಕಾದ 5 ವಿಷಯಗಳು:
I’m addressing the nation on a successful counterterrorism operation. https://t.co/SgTVaszA3s
— President Biden (@POTUS)ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಕೂಡ ಈ ಮಾಹಿತಿಯನ್ನು ಟ್ವಿಟ್ಟರ್ ನಲ್ಲಿ ದೃಢಪಡಿಸಿದ್ದು, ಈ ದಾಳಿಯನ್ನು ಖಂಡಿಸಿದ್ದಾರೆ. ಅಘ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ಸ್ ಈ ದಾಳಿಯನ್ನು ಖಂಡಿಸುತ್ತದೆ. ಇದು ಅಂತರಾಷ್ಟ್ರೀಯ ತತ್ವಗಳು ಮತ್ತು ದೋಹಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಮುಜಾಹಿದ್ ಹೇಳಿಕೆ ನೀಡಿದ್ದಾರೆ.